ಬೆಂಗಳೂರು : ದಿನಾಂಕ 01-05-2019 ರಂದು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಘಟಕದ ಮಾಸಿಕ ಸಭೆ ಮತ್ತು ಶಾಶ್ವತ ವಿದ್ಯಾ ನಿಧಿ ಯೋಜನೆಗೆ ಚಾಲನೆ ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಇಂದಿನ ಮಕ್ಕಳೇ ಮುಂದಿನ ಭವಿಷ್ಯ , ಭವಿಷ್ಯದ ಮಕ್ಕಳ ಸುಸಜ್ಜಿತ ಶಿಕ್ಷಣ ಅಗತ್ಯ, ಶಿಕ್ಷಣ ಒದಗಿಸಲು ಉತ್ತಮ ಮಾರ್ಗದರ್ಶನ ಮತ್ತು ಸಹಾಯ ಅಗತ್ಯಎಂದು ಅರಿತಂತೆ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ, ಉಪಾಧ್ಯಕ್ಷರಾದ ಕಿಶನ್ ಪೂಜಾರಿ, ಕಾರ್ಯದರ್ಶಿಯವರಾದ ರಾಘವೇಂದ್ರ ಪೂಜಾರಿ ಮತ್ತು ವಿದ್ಯಾ ನಿಧಿ ನಿರ್ದೇಶಕರು ಆಗಿರುವ ರುಕ್ಮಿಣಿ ರಾಮಕೃಷ್ಣ ಇವರು ಶಾಶ್ವತ ವಿದ್ಯಾ ನಿಧಿ ಯೋಜನೆಯ ಪ್ರತಿಯನ್ನು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿ ಯೋಜನೆಯನ್ನು ಲೋಕಾರ್ಪಣೆ ಗೊಳಿಸಿದರು .
ರಾಘವೇಂದ್ರ ಪೂಜಾರಿ ಅವರು ಮಾಸಿಕ ವರದಿಯನ್ನು ಮಂಡಿಸಿದರು, ಕೋಶಾಧಿಕಾರಿ ಯಾದ ಶ್ರೀಧರ್ ಡಿ ಅವರು ಲೆಕ್ಕ ಪತ್ರ ಮಂಡನೆ ಮಾಡಿದರು. ಹೊಸ ಸದಸ್ಯರ ತಮ್ಮ ಪರಿಚಯವನ್ನು ಮಾಡಿಕೊಂಡರು ಹಾಗೆ ಅವರಿಗೆ ಹೂ ಕೊಟ್ಟು ಸ್ವಾಗತಿಸಲಾಯಿತು.
ಇದೆ ಸಂದರ್ಭದಲ್ಲಿ ಯುವವಾಹಿನಿ ಸೇವಾ ಸಂಜೀವಿನಿ ಯೋಜನೆಯ 2ನೆ ಕಂತಿನ ವೈದ್ಯಕೀಯ ಆರ್ಥಿಕ ನೆರವು ನೀಡಲು 7000/- ಅನ್ನು ಘಟಕದ ಸದಸ್ಯರಾದ ಪ್ರಕಾಶ್ ಪೂಜಾರಿ ಇವರ ಹತ್ತಿರದ ಸಂಬಂಧಿ ಆಗಿರುವ ಪ್ರವೀಣ್ ಕುಮಾರ್ ಇವರಿಗೆ ನೀಡಲು ಹಸ್ತಾಂತರ ಮಾಡಲಾಯಿತು.
ಯೋಜನೆಯ ಕುರಿತು ಅಧ್ಯಕ್ಷರು ಮಾತನಾಡಿ ಈ ಯೋಜನೆಯು ನಮ್ಮ ಸಮಾಜದ ಬಡ ಅರ್ಹ ವಿದ್ಯಾರ್ಥಿ ಗಳಿಗೆ ಸಹಾಯಾರ್ಥ ಆಗಿ ಅವರ ಭವಿಷ್ಯಕ್ಕಾಗಿ ಯುವವಾಹಿನಿ ಸ್ಪಂದಿಸಬೇಕಾಗಿದೆ ಎಂದು ತಿಳಿಸಿದರು, ಹಾಗೆ ಯೋಜನೆಯನ್ನು ರೂಪಿಸಲು ಲಕ್ಕೀಡಿಪ್ ಮಾಡುವ ಮೂಲಕ ಒಟ್ಟು 1,50,000/- ಕೂಡಿಬಂದಿದೆ ಎಂದು ತಿಳಿಸಿ ಇದಕ್ಕೆ ಸ್ಪಂದಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ವಿವಿಧ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ ಸದಸ್ಯರಿಗೆ ಹೂ ಕೊಟ್ಟು ಅಭಿನಂದಿಸಲಾಯಿತು.ಹಾಗೆ ಇದೆ ಸಂದರ್ಭದಲ್ಲಿ ಸದಸ್ಯರಾದ ಶ್ವೇತ ಸಾಲ್ಯಾನ್ ಇವರ ಹುಟ್ಟು ಹಬ್ಬ ಆಚರಿಸಲಾಯಿತು.