ಕೂಳೂರು : ಯುವವಾಹಿನಿ( ರಿ) ಕೂಳೂರು ಘಟಕದ ವತಿಯಿಂದ 52 ಸದಸ್ಯರ ತಂಡವು ಶಿವಗಿರಿ ಪ್ರವಾಸವನ್ನು ದಿನಾಂಕ 10-04-2019 ರಿಂದ 12-04-2019 ವರೆಗೆ ಕೈಗೊಂಡಿದ್ದು ಇದರ ಸಂಚಾಲಕತ್ವವನ್ನು ವಿದ್ಯಾರ್ಥಿ ಸಂಘಟನೆಯ ವಿನೀತ್ ಕುಮಾರ್ ಇವರು ವಹಿಸಿದ್ದರು.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ತಾರೀಖು 10-04-2019 ಬುಧವಾರ ಸಂಜೆ 5.30ಕ್ಕೆ ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣನಿಂದ ಹೊರಡುವ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಿವಗಿರಿಗೆ ಪ್ರಯಾಣ ಆರಂಭ ಮಾಡಿ ಮರುದಿನ ಬೆಳಿಗ್ಗೆ 6 ಗಂಟೆಗೆ ವರ್ಕಳ ಶಿವಗಿರಿ ರೈಲ್ವೇ ನಿಲ್ದಾಣಕ್ಕೆ ತಲುಪಿದೆವು . ಅಲ್ಲಿಂದ ನಮ್ಮನ್ನು ಪೂಜ್ಯನೀಯ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಬಸ್ಸಿನಲ್ಲಿ ಶಿವಗಿರಿ ಮಠಕ್ಕೆ ಕರೆದುಕೊಂಡು ಹೋಗಿ ಮಠದಲ್ಲಿ ಸ್ನಾನದ ನಂತರ ಶಾರದ ಪೀಠ ದರ್ಶನ, ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂಲ ಸಮಾದಿ ಯಜ್ಞ ಮಂಟಪ ದರ್ಶನ ಮಾಡಿ ನಂತರ ಮಠದಲ್ಲಿ ಉಪಹಾರವಾದ ನಂತರ ಚೆಂಬಳಂತಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಜನ್ಮ ಸ್ಥಳ ಸಂದರ್ಶನದ ನಂತರ ಮಧ್ಯಾಹ್ನ 12.30 ಗಂಟೆಗೆ ಕನ್ನುಂಪಾರು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಹಾ ಪೂಜೆಯ ನಂತರ ಊಟ ಮುಗಿಸಿ ಅಲ್ಲಿಂದ ಅರವಿಪುರಂಗೆ ಹೊರಟು ಅಲ್ಲಿ ಚಹಾ ವಿರಾಮದ ನಂತರ ಕನ್ಯಾಕುಮಾರಿಗೆ 7.30ಕ್ಕೆ ತಲುಪಿ ಅಲ್ಲಿ ದೇವರ ದರ್ಶನ ಮಾಡಿ ರಾತ್ರಿ ಮಠದಲ್ಲಿ ವಿಶ್ರಾಂತಿ ಪಡೆದೆವು.ತಾರೀಖು 12-04-2019 ರಂದು ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಸ್ನಾನ ಮಾಡಿ ನಾರಾಯಣ ಗುರುಗಳ ಪೂಜೆಯ ನಂತರ ಸುಮಾರು 35 ಜನ ಸದಸ್ಯರ ತಂಡ ಮರುತ್ವ ಮಲೆ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಗುಹೆ ದರ್ಶನ ಮಾಡಿ ಬೆಳಿಗ್ಗಿನ ಉಪಹಾರದ ನಂತರ ಸ್ವಾಮಿ ವಿವೇಕಾನಂದರ ಸ್ಮಾರಕ ತ್ರಿವೇಣಿ ಸಂಗಮ ದರ್ಶನದ ನಂತರ ಮರುತ್ವ ಮಲೆ ಆಶ್ರಮದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಅಲ್ಲಿಂದ 2 ಗಂಟೆಗೆ ಸರಿಯಾಗಿ ಅನಂತಪದ್ಮನಾಭ ಕ್ಷೇತ್ರಕ್ಕೆ ಹೊರಟು 5 ಗಂಟೆಗೆ ಅನಂತ ಪದ್ಮನಾಭ ಸ್ವಾಮಿಯ ದರ್ಶನದ ನಂತರ ಮಂಗಳೂರಿಗೆ ಪ್ರಯಾಣ ಹೊರಟು ಮರುದಿನ ಬೆಳಿಗ್ಗೆ 6.30 ಕ್ಕೆ ಮಂಗಳೂರು ತಲುಪಿದೆವು .