ದಿನಾಂಕ 8-01-2017 ನೇ ರವಿವಾರದಂದು ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ) ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ಯುವಜನತೆಗೆ ಮತ್ತು ಪೋಷಕರಿಗೆ ಉಪಯೋಗವಾಗುವ ಕಾರ್ಯಕ್ರಮವಾಗಿ ಪ್ರೇರಣ-2017’ ಎನ್ನುವ ಕಾರ್ಯಕ್ರಮವು ಶ್ರೀಗೋಕರ್ಣನಾಥೇಶ್ವರ ಕಾಲೇಜು, ಗಾಂಧಿನಗರ, ಮಂಗಳೂರು ಇಲ್ಲಿ ಜರಗಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ರವರು ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ, ಶುಭಕೋರಿದರು. ಯುವ ವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಪದ್ಮನಾಭ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗೋಕರ್ಣನಾಥ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಗಂಗಾಧರ ಬಿ. ಪೂಜಾರಿ, ಯುವವಾಹಿನಿಯ ಸಲಹೆಗಾರ ಬಿ. ತಮ್ಮಯ್ಯ ಹಾಗೂ ವಿದ್ಯಾನಿಧಿ ಟ್ರಸ್ಟ್‌ನ ಟ್ರಸ್ಟಿಗಳಾದ ಸಂಜೀವ ಪೂಜಾರಿಯವರು ಹಾಗೂ ಜಯಂತ್ ನಡುಬೈಲ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಎಂಬ ಶೈಕ್ಷಣಿಕ ಕಾರ್ಯಾಗಾರವನ್ನು ಪೂರ್ವಾಹ್ನ ಗಂಟೆ 10 ರಿಂದ 12 ರ ವರೆಗೆ ನಡೆಸಲಾಯಿತು. ಮಂಗಳೂರಿನ ಹಿರಿಯ ತರಬೇತುದಾರ ಅಭಿಜಿತ್ ಕರ್ಕೇರರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರವನ್ನು ವಿದ್ಯಾರ್ಥಿಗಳ ಹಾಗೂ ಯುವಜನರ ಉಪಯೋಗಕ್ಕಾಗಿ ಆಕರ್ಷಕವಾಗಿ ನಡೆಸಿಕೊಟ್ಟರು.
ಹಾಗೆಯೇ ಇನ್ನೊಂದು ಸಭಾಂಗಣದಲ್ಲಿ ಪೂರ್ವಾಹ್ನ ಗಂಟೆ 10.30 ರಿಂದ 12 ರವರೆಗೆ ಯುವಜನರು ಮತ್ತು ಪೋಷಕರು ಎಂಬ ಕಮ್ಮಟವನ್ನು ಯುವಜನರ ಮತ್ತು ಪೋಷಕರ ಉಪಯೋಗಕ್ಕಾಗಿ ನಡೆಸಲಾಯಿತು. ಜೇಸೀ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ರಾಮಚಂದ್ರ ರಾವ್‌ರವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಮ್ಮಟವನ್ನು ಬಹುಪಯೋಗಿಯಾಗಿ ನಡೆಸಿಕೊಟ್ಟರು.
ಅಪರಾಹ್ನ ಗಂಟೆ 12.30 ಕ್ಕೆ ಸರಿಯಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿಯವರು ಅಧ್ಯಕ್ಷರಾಗಿ ಭಾಗವಹಿಸಿದ್ದರು. ಬಿಲ್ಲವ ಸಂಘ, ಅಶೋಕನಗರ ಮಂಗಳೂರು ಇದರ ಅಧ್ಯಕ್ಷರಾದ ಡಾ| ಬಿ.ಜಿ. ಸುವರ್ಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಯುವವಾಹಿನಿಯ ಕಾರ್ಯಚಟುವಟಿಕೆಗಳ ಬಗ್ಗೆ ತನ್ನ ಸಂತೋಷ ವ್ಯಕ್ತಪಡಿಸಿದರು. ಟ್ರಸ್ಟಿಗಳಾದ ಜಯಂತ್ ನಡುಬೈಲು, ಸೂರ್ಯಪ್ರಕಾಶ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಮೆಚ್ಚುಗೆ ನೀಡಿದರು. ಇನ್ನೋರ್ವ ಟ್ರಸ್ಟಿ ಸಂಜೀವ ಪೂಜಾರಿಯವರು ಉಪಸ್ಥಿತರಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ರೂ. 53,000/-ರಷ್ಟು ಆರ್ಥಿಕ ನೆರವು ವಿತರಿಸಲಾಯಿತು. ಇವರಲ್ಲಿ ಮೂರು ವಿದ್ಯಾರ್ಥಿಗಳು ವಿದ್ಯಾನಿಧಿ ಟ್ರಸ್ಟಿನಿಂದ ದತ್ತು ತೆಗೆದುಕೊಂಡ ವಿದ್ಯಾರ್ಥಿಗಳು ಎಂದು ತಿಳಿಸಲು ಸಂತೋಷವಾಗುತ್ತದೆ. ತರಬೇತಿ ಮತ್ತು ಅಭಿವೃದ್ಧಿ ಪರಿಶೀಲನಾ ಟ್ರಸ್ಟಿ ತಾರನಾಥ್ ಎಚ್.ಬಿ.ಯವರು ವಿದ್ಯಾರ್ಥಿಗಳ ಪರಿಚಯವನ್ನು ಸಭೆಗೆ ನೀಡಿದರು. ಆಡಳಿತ ಟ್ರಸ್ಟಿ ಸಂತೋಷ್ ಕುಮಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ಸಿ.ಎಫ್.ನ ಚಂದ್ರಶೇಖರ್‌ರವರನ್ನು ಟ್ರಸ್ಟ್‌ನ ನೂತನ ಸದಸ್ಯರಾಗಿ ನೇಮಿಸಲಾಯಿತು. ಅವರ ಸೇವೆ, ಅನುಭವ ವಿದ್ಯಾರ್ಥಿಗಳ ಮಾಹಿತಿಗೆ ಬಹಳ ಅನುಕೂಲ ಎಂದು ಸಭೆಯಲ್ಲಿ ತಿಳಿಸಲಾಯಿತು.
ವಿದ್ಯಾನಿಧಿ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಪ್ರೇಮನಾಥ್ ಇವರು ಧನ್ಯವಾದ ಅರ್ಪಿಸಿ ಯುವವಾಹಿನಿ (ರಿ) ಮಂಗಳೂರು, ಕೇಂದ್ರ ಸಮಿತಿಯ ಮಾಜಿ ನಿರ್ದೇಶಕಿ ಶ್ರೀಮತಿ ಶುಭಾ ರಾಜೇಂದ್ರ ಹಾಗೂ ವಿದ್ಯಾನಿಧಿ ಟ್ರಸ್ಟ್‌ನ ಕೋಶಾಧಿಕಾರಿ ಕೆ. ರಾಜೀವ ಪೂಜಾರಿಯವರು ಕಾರ್ಯಕ್ರಮ ನಿರೂಪಣೆಗೈದರು.