ಕೂಳೂರು : ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ(ರಿ) ಕೂಳೂರು ಘಟಕದ ಆತಿಥ್ಯದಲ್ಲಿ ಯುವ ವಾಹಿನಿ ವಿದ್ಯಾನಿಧಿಯ ಬಲವರ್ಧನೆಗಾಗಿ ಯುವವಾಹಿನಿ ಪ್ರೀಮಿಯರ್ ಲೀಗ್ (YPL-201) ಮಾರ್ಚ್ 9 ಹಾಗೂ 10 ರಂದು ಎನ್.ಎಂ.ಪಿ.ಟಿ ಮೈದಾನ ಪಣಂಬೂರು ಇಲ್ಲಿ ನಡೆಯಿತು .ಬೆಳಗ್ಗೆ 7 ಗಂಟೆಗೆ ಸರಿಯಾಗಿ ನಾರಾಯಣ ಗುರುಗಳ ಆಶೀರ್ವಾದ ಪಡೆದು ದೀಪ ಬೆಳಗಿಸಿ ಕ್ರಿಕೆಟ್ ಪಂದ್ಯಾಟವನ್ನು ಪ್ರಾರಂಭಿಸಲಾಯಿತು .ಎರಡು ಪಂದ್ಯಗಳ ನಂತರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ಜರಗಿತು .ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ವಹಿಸಿದ್ದರು. ಮೊದಲನೆಯದಾಗಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್ ಧ್ವಜಾರೋಹಣ ಮಾಡಿದರು . ಕುದ್ರೋಳಿ ಗೋಕರ್ಣಥೇಶ್ವರ ದೇವಸ್ಥಾನದ ಅಧ್ಯಕ್ಷರಾದ ಎಚ್. ಎಸ್ ಸಾಯಿರಾಮ್ ಇವರು ಬಲೂನ್ ಹಾರಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು .ಬ್ರಹ್ಮಶ್ರೀ ನಾರಾಯಣ ಗುರು ಮಂದಿರ (ರಿ) ಕೂಳೂರು ಇದರ ಅಧ್ಯಕ್ಷರಾದ ಹರೀಶ್ ಅಮೀನ್ ದೀಪ ಪ್ರಜ್ವಲನೆ ಮಾಡಿದರು .ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ರಾದ ನವೀನ್ ಚಂದ್ರ ಡಿ ಸುವರ್ಣ , ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ಇದರ ಸಂಚಾಲಕರಾದ ಮನೋಹರ್ ಅಮೀನ್ ,ಶಿವಾನಂದ ಎಚ್ ಎಂ ಮಾಲಕರು ,ಅಂಬಿಗ ಅರ್ಥ್ ಮೂವರ್ಸ್ ಮಂಗಳೂರು ,ದೇವದಾಸ್ ಕಾಪಿಕಾಡ್ ರಂಗಭೂಮಿ, ಚಲನಚಿತ್ರ ನಟ ಹಾಗೂ ನಿರ್ದೇಶಕರು ಅನಿಲ್ ಕುಮಾರ್ ನಿರ್ದೇಶಕರು ,ಶ್ರೀಕೃಷ್ಣ ಶಿಪ್ಪಿಂಗ್ ಕಾರ್ಪೋರೇಷನ್ ಕೂಳೂರು ,ನೇಮಿರಾಜ್ ಪಿ ಮಾಜಿ ಅಧ್ಯಕ್ಷರು ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಹಾಗು ಸಲಹೆಗಾರರು ಯುವವಾಹಿನಿ(ರಿ) ಕೂಳೂರು ಘಟಕ , ಸುನಿಲ್ ಕೆ ಅಂಚನ್ ಪ್ರಧಾನ ಕಾರ್ಯದರ್ಶಿ ಯುವವಾಹಿನಿ(ರಿ)ಕೇಂದ್ರ ಸಮಿತಿ ಮಂಗಳೂರು, ಸುಪ್ರೀತಾ ಪೂಜಾರಿ ಕ್ರೀಡಾ ನಿರ್ದೇಶಕರು ಯುವವಾಹಿನಿ(ರಿ)ಕೇಂದ್ರ ಸಮಿತಿ ಮಂಗಳೂರು,ರೋಹಿತ್ ಕುಮಾರ್ ಸಮಾಜ ಸೇವೆ ಮತ್ತು ಕ್ರೀಡಾ ನಿರ್ದೇಶಕರು ಯುವವಾಹಿನಿ (ರಿ) ಕೂಳೂರು ಘಟಕ, ಕಾರ್ಯದರ್ಶಿ ಪವಿತ್ರ ಅಂಚನ್ ಇವರು ಉಪಸ್ಥಿತರಿದ್ದರು .ಉದ್ಘಾಟನಾ ಸಮಾರಂಭದ ಬಳಿಕ ಎಂಟು ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ಪ್ರಾರಂಭವಾಗಿ ಸಂಜೆ 6.30 ರ ತನಕ ನಡೆಯಿತು. ಮರುದಿನ ಮಾರ್ಚ್ 10 ರ ಆದಿತ್ಯವಾರ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಯುವವಾಹಿನಿ(ರಿ) ಕಾಪು ಘಟಕದ ಅಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್ ಅವರು ಧ್ವಜಾರೋಹಣ ಮಾಡಿ ಕ್ರಿಕೆಟ್ ಪಂದ್ಯಾಟವನ್ನು ಪ್ರಾರಂಭಿಸಲಾಯಿತು .
ಸಂಜೆ 4.30 ಕ್ಕೆ ಸರಿಯಾಗಿ ಬಿಲ್ಲವ ಯುವ ಸ್ಟಾರ್ಟ್ಸ್ ಕಾಪು ತಂಡ ಹಾಗೂ ಯುವ ರೂಟ್ಸ್ ಬಂಟ್ವಾಳ ತಂಡವು ಅಂತಿಮ ಹಂತಕ್ಕೆ ತಲುಪಿದ್ದು ಪಂದ್ಯಾಟ ಪ್ರಾರಂಭವಾಯಿತು .ಬಿಲ್ಲವ ಯುವ ಸ್ಟಾರ್ಸ್ ಕಾಪು ತಂಡವು ಪ್ರಥಮ ಸ್ಥಾನ ಹಾಗೂ ಯುವ ರೂಟ್ಸ್ ಬಂಟ್ವಾಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವರು. ಸಂಜೆ 6 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ನಡೆದಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ)ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್ ಇವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸಲಹೆಗಾರರಾದ ಲೋಕಯ್ಯ ಪೂಜಾರಿ ,ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಂಗಳೂರು ಇದರ ನಿರ್ದೇಶಕರಾದ ಪ್ರವೀಣ್ ಬಂಗೇರ ,ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿಯ ಅಧ್ಯಕ್ಷರಾದ ನವೀನ್ ಸುವರ್ಣ, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ ಶಂಕರ್ ಸುವರ್ಣ ಯುವವಾಹಿನಿ(ರಿ)ಸ್ಥಾಪಕ ಅಧ್ಯಕ್ಷ ರಾದ ಸುಜಿತ್ ರಾಜ್, ತುಳು ಚಿತ್ರ ನಟ ಸಾಯಿಕೃಷ್ಣ ,ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಅಂಚನ್ ,ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರು ಸುಪ್ರೀತಾ ಪೂಜಾರಿ ,ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ,ಉಪಾಧ್ಯಕ್ಷರದ ಭಾಸ್ಕರ್ ಕೋಟ್ಯಾನ್ ,ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ,ಕಾರ್ಯದರ್ಶಿ ಪವಿತ್ರ ಅoಚನ್ ,ಕೂಳೂರು ಘಟಕದ ಕ್ರೀಡಾ ನಿರ್ದೇಶಕರಾದ ರೋಹಿತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಎಲ್ಲರನ್ನು ಸ್ವಾಗತಿಸಿದರು .ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ಅಡ್ವೆ ಘಟಕದ ಹಿರಿಯ ವ್ಯಕ್ತಿ ಬಹಳ ಉತ್ಸಾಹದಿಂದ ಆಡಲು ಅರ್ಜಿ ನೀಡಿದ್ದ ಸಲುವಾಗಿ ಅವರ ಆ ಉತ್ಸುಕತೆಗೆ ಮೆಚ್ಚಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು ಬಳಿಕ ಘಟಕದ ಸದಸ್ಯೆ ರೇಣುಕಾ ಪ್ರಸಾದ್ ಅತಿ ಹೆಚ್ಚು ಜಾಹೀರಾತು ಸಂಗ್ರಹಣೆ ಮಾಡಿದ ಸಲುವಾಗಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು .ಹಾಗೂ ಈ ಕಾರ್ಯಕ್ರಮದ ಸಂಚಾಲಕರಾದ ಪ್ರತೀಶ್ ಗೌರೀಶ್ ಇವರನ್ನು ಅಭಿನಂದಿಸಲಾಯಿತು. ಒಟ್ಟು ಎಂಟು ತಂಡಗಳ ನಡುವೆ ಈ ಪಂದ್ಯಾಟ ನಡೆದಿದ್ದು, ಯುವವಾಹಿನಿ ಕಾಪು ಘಟಕದ ಅಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್ ಹಾಗೂ ತಾರಾನಾಥ್ ಎಚ್ ಬಿ ಇವರ ತಂಡವಾದ ಬಿಲ್ಲವ ಯುವ ಸ್ಟಾರ್ಸ್ ಕಾಪು ತಂಡವು ಪ್ರಥಮ ಸ್ಥಾನವನ್ನು ಪಡೆದಿದ್ದು, ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದಿರುತ್ತದೆ .ಗಣೇಶ್ ಪೂಜಾರಿ ಮಾಲಕತ್ವದ ಯುವ ರೂಟ್ಸ್ ಬಂಟ್ವಾಳ ತಂಡವು ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡು ಎಪ್ಪತ್ತೈದು ಸಾವಿರ ರುಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಸಭೆಯಲ್ಲಿ ಮಂಗಳೂರು ಉತ್ತರ ವಲಯ ಶಾಸಕರಾದ ಡಾ ಭರತ್ ಶೆಟ್ಟಿ ಉಪಸ್ಥಿತರಿದ್ದು ಎಲ್ಲರಿಗೂ ಶುಭ ಹಾರೈಸಿದರು .ಪ್ರತೀಶ್ ಗೌರೀಶ್ ಕಾರ್ಯಕ್ರಮ ನಿರೂಪಿಸಿದರು .ಕಾರ್ಯದರ್ಶಿ ಪವಿತ್ರ ಅಂಚನ್ ವಂದಿಸಿದರು .