ಮಾಣಿ : ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಅನುಭವ ವಿಸ್ತಾರ ಹಾಗೂ ಯುವವಾಹಿನಿ ಕುಟುಂಬದ ಸದಸ್ಯರೊಳಗಿನ ಸ್ನೇಹ, ವಾತ್ಸಲ್ಯದ ಗಟ್ಟಿತನಕ್ಕಾಗಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡ ಸುಂದರ ಕಾರ್ಯಕ್ರಮವೇ “ಸ್ನೇಹ ಸಿಂಚನ- ಯುವವಾಹಿನಿ ಕುಟುಂಬದ ವಾತ್ಸಲ್ಯ ಪಯಣ”
ಸ್ನೇಹ ಸಿಂಚನ ಪಯಣ ಸಾಗಿದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ.ದಿನಾಂಕ 03-03-19 ಅದಿತ್ಯವಾರದಂದು ಬೆಳಿಗ್ಗೆ 63ಮಂದಿ ಯುವವಾಹಿನಿ ಸದಸ್ಯರೊಂದಿಗೆ ತಂಡವು ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಇವರ ನೇತೃತ್ವದೊಂದಿಗೆ ಒಂದು ದಿನದ ಹೊರಸಂಚಾರಕ್ಕೆ ಹೊರಟಿತು.
ಮಾತುಕತೆ, ನಗು,ನಲಿದಾಟಗಳೊಂದಿಗೆ ಆರಂಭಗೊಂಡ ಪಯಣವು ಮೊದಲಿಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯನ್ನು ತಲುಪಿತು.ಶ್ರೀ ಮಾತೆಯ ದರ್ಶನ ನಂತರ ಬೆಳಗ್ಗಿನ ಉಪಹಾರವನ್ನು ಅಲ್ಲೆ ಪೂರೈಸಿಕೊಂಡು ಬ್ರಹ್ಮಾವರಕ್ಕೆ ಯುವವಾಹಿನಿಯ ಪಯಾಣ ಮುಂದುವರೆಯಿತು. ಸಮುದ್ರ ಹಿನ್ನೀರಿನ ನಡುಗುಡ್ಡೆಯಾಗಿರುವ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ ಕರೆದೊಯ್ಯಲು ಅದಾಗಲೇ ಬೋಟ್ ತಯಾರಾಗಿ ನಿಂತಿತ್ತು. ಯುವವಾಹಿನಿ ಸದಸ್ಯರೆಲ್ಲರೂ ಉತ್ಸಾಹದಿಂದಲೇ ಬೋಟ್ ಹತ್ತಿ ಕುಳಿತುಕೊಂಡರು.ಬೋಟ್ ಚಲನೆ ಪಡೆದು ದ್ವೀಪದೆಡೆಗೆ ಚಲಿಸಿತು. ಸುತ್ತಲಿನ ಜಲರಾಶಿ ಹಾಗೂ ತೆಂಗಿನ ತೋಟಗಳ ನೋಟವು ಸದಸ್ಯರೆಲ್ಲರಿಗೂ ವಿಶಿಷ್ಟವಾದ ಅನುಭವವನ್ನು ನೀಡಿದವು. ತೋಟದ ನಡುವೆ ನಿರ್ಮಿಸಲಾಗಿದ್ದ ನಾನಾ ರೀತಿಯ ಸಾಹಸಮಯ, ಕಸರತ್ತಿನ ಅವಕಾಶಗಳಲ್ಲಿ ನಾಮುಂದು ತಾಮುಂದು ಎಂದು ಪಾಲ್ಗೊಂಡು ಸಂತೋಷ ಪಟ್ಟರು,ತದನಂತರ ದ್ವೀಪದ ವ್ಯವಸ್ಥಾಪಕರು ಮತ್ತು ಯುವವಾಹಿನಿ ಘಟಕದ ಕಾರ್ಯದರ್ಶಿ ಮತ್ತು ಕೋಶಧಿಕಾರಿ ಕೆಲವು ಮನರಂಜನಾತ್ಮಕ ಆಟಗಳ ಮೂಲಕ ಸದಸ್ಯರೆಲ್ಲರ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಮುಂದಕ್ಕೆ ಕಬಡ್ಡಿ, ಹಗ್ಗದ ಮೇಲಿನ ನಡಿಗೆ, ಜೋಕಾಲಿ ಇತ್ಯಾದಿಗಳಲ್ಲಿ ಆಡಿ ಸದಸ್ಯರೆಲ್ಲರು ಸಂತೋಷ ಪಟ್ಟರು.
ಮಧ್ಯಾಹ್ನದ ಭೋಜನ ನಂತರ ಮತ್ತೆ ಮೋಜಿನ ಆಟಗಳಲ್ಲಿ ಯುವವಾಹಿನಿ ಸದಸ್ಯರು ತೊಡಗಿಸಿಕೊಂಡರು. ಅಷ್ಟರಲ್ಲಾಗಲೇ ದ್ವೀಪದ ಸುತ್ತಲಿನ ನೀರಿನ ಮಟ್ಟವು ಗಣನೀಯವಾಗಿ ಇಳಿಕೆಯಾಗಿ ನೀರಾಟವಾಡುವ ಅವಕಾಶದ ಸಮಯ ಬಂದಾಗಿತ್ತು. ಎಲ್ಲಾ ಸದಸ್ಯರು ಅತ್ಯಂತ ಉತ್ಸಾಹದಿಂದ ತ್ರೋಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಇತ್ಯಾದಿಗಳನ್ನು ನೀರಿನಲ್ಲೇ ಆಡುವ ಸ್ಥಳದೆಡೆಗೆ ತೆರಳಿದರು. ಸಂಜೆಯವರೆಗೆ ನೀರಿನಲ್ಲಿ ಆಡಿ, ಈಜಿ ಖುಷಿ ಪಟ್ಟರು. ಸಮಯ ಸಂಜೆ ನಾಲ್ಕು ಕಳೆಯುತ್ತಿದ್ದಂತೆ ನೀರಿನಿಂದ ಮೇಲೆ ಬರುವಂತೆ ವ್ಯವಸ್ಥಾಪಕರ ಸೂಚನೆಯಾಯಿತು. ಅದರಂತೆ ಮರಳಿ ದ್ವೀಪದೊಳಕ್ಕೆ ಪ್ರವೇಶಿಸಿದ ಸ್ನೇಹ ಸಿಂಚನದ ಸದಸ್ಯರು ಶವರ್ ಬಾತ್ ನ ಆನಂದವನ್ನು ಹಾಡಿನೊಂದಿಗೆ ಅನುಭವಿಸುತ್ತಾ ಸಂತಸಪಟ್ಟರು. ಸಂಜೆ ಗಂಟೆ ಐದಕ್ಕೆ ಸರಿಯಾಗಿ ಮನಸ್ಸಿಲ್ಲದ ಮನಸ್ಸಿನೊಂದಿಗೆ ಕಿಂಗ್ ಆಫ್ ಕಿಂಗ್ಸ್ ಗೆ ವಿದಾಯ ಹೇಳಿ ಮರಳಿ ಮಾಣಿಯೆಡೆಗೆ ಸದಸ್ಯರ ಮರು ಪ್ರಯಾಣ ಆರಂಭವಾಯಿತು. ಒಟ್ಟಿನಲ್ಲಿ ಕಿಂಗ್ ಆಫ್ ಕಿಂಗ್ಸ್ ದ್ವೀಪದಲ್ಲಿ ಒಂದು ದಿನದ ಮಟ್ಟಿಗೆ king ಗಳಾಗಿ ಸಂತೋಷ ಅನುಭವಿಸಿದ ಸವಿ ನೆನಪಿನೊಂದಿಗೆ ಯುವವಾಹಿನಿ ಯ ಸದಸ್ಯರು ಮರಳಿ ತಮ್ಮ ಮನೆಯನ್ನು ಸೇರಿದರು.
Wah super