ಕಂಕನಾಡಿ : ಯುವವಾಹಿನಿ ಎಂಬುದು ನಮ್ಮ ಕುಟುಂಬ. ನಾವು ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸಮಾಜ ಸೇವೆ ಸಲ್ಲಿಸಿದಾಗ ಅದರ ಉತ್ತಮ ಫಲ ನಮಗೆ ಖಂಡಿತವಾಗಿಯೂ ದೊರೆಯುತ್ತದೆ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲುರವರು ಹೇಳಿದರು.
ದಿನಾಂಕ 17-3-2019ನೇ ಆದಿತ್ಯವಾರದಂದು ತಣ್ಣೀರುಬಾವಿ ಟ್ರೀ ಪಾರ್ಕಲ್ಲಿ ಜರುಗಿದ ಯುವವಾಹಿನಿ (ರಿ.) ಕಂಕನಾಡಿ ಘಟಕದ ಹಳೆ ಬೇರು ಹೊಸ ಚಿಗುರು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿ ಉದ್ಘಾಟಿಸಿ ಸದಸ್ಯರು ಯುವವಾಹಿನಿಯಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಹಾಗೂ ತಮ್ಮ ತಮ್ಮ ಕುಟುಂಬ ಸದಸ್ಯರನ್ನು ಕೂಡಾ ಯುವವಾಹಿನಿಗೆ ಸೇರಿಸಿ ಅವರಿಗೂ ಯುವವಾಹಿನಿ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಭವಿತ್ ರಾಜ್ ರವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಘಟಕದ ಸಲಹೆಗಾರರಾದ ಜಯರಾಂ ಕಾರಂದೂರುರವರು ಅತಿಥಿಗಳಾಗಿ ಆಗಮಿಸಿದ್ದರು. ಘಟಕದ ಜೊತೆ ಕಾರ್ಯದರ್ಶಿಯವರಾದ ರಾಹುಲ್ ರವರು ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ್ದರು. ಘಟಕದ ಸ್ಥಾಪಕಾಧ್ಯಕ್ಷರಾದ ಶೇಖರ್ ಅಮೀನ್, ಮಾಜಿ ಅಧ್ಯಕ್ಷರಾದ ಹರೀಶ್. ಕೆ. ಸನಿಲ್ , ನಿಕಟಪೂರ್ವ ಅಧ್ಯಕ್ಷರಾದ ಗೋಪಾಲ.ಎಂ.ಪೂಜಾರಿ ಹಾಗೂ ಸುಮಾರು 50 ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯದರ್ಶಿ ಯವರಾದ ಸುಮವಸಂತ್ ರವರು ಧನ್ಯವಾದ ಸಮರ್ಪಿಸಿದರು. ಸಹನಾರವರು ಕಾರ್ಯಕ್ರಮ ನಿರೂಪಿಸಿದರು. ಪ್ರೀತಂ ಕುಂದರ್ ರವರು ಸದಸ್ಯರಿಗೆ ಆಟೋಟ ಸ್ಪರ್ಧೆ ನಡೆಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.