ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 03-03-2019 ಆದಿತ್ಯವಾರ ಗಾಯತ್ರಿ ಮಿನಿ ಹಾಲ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅತ್ಯಮೂಲ್ಯವಾದ ಯೋಜನೆ ಯುವವಾಹಿನಿ ಸೇವಾ ಸಂಜೀವಿನಿ ಯ ಲೋಕಾರ್ಪಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಅವರು ವಹಿಸಿದ್ದರು.
ಪ್ರೀತಿ ಎಂಬ ಎಣ್ಣೆಯನ್ನು ಸುರಿದು,ನಂಬಿಕೆ ಎನ್ನುವ ಬತ್ತಿಯನ್ನು ಇಟ್ಟು,ಆತ್ಮವಿಶ್ವಾಸ ಎನ್ನುವ ದೀಪದಡಿಯಲ್ಲಿ ಅಶಕ್ತರ ಪಾಲಿಗೆ ಬೆಳಕಾಗಾಗಬೇಕೆಂಬ ಅಭಿಲಾಷೆಯೊಂದಿಗೆ, ಯುವವಾಹಿನಿ ಸೇವಾ ಸಂಜೀವಿನಿ’ ಯುವವಾಹಿನಿ ಬೆಂಗಳೂರು ಘಟಕದ ಬಹುದಿನಗಳ ಕನಸಿನ ಯೋಜನೆಯನ್ನು ಬೆಂಗಳೂರು ಘಟಕದ ಸಲಹೆಗಾರರು ಹಾಗೂ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ ಲೋಕಾರ್ಪಣೆ ಗೊಳಿಸಿದರು.ಇದೇ ಸಂದರ್ಭದಲ್ಲಿ ಯೋಜನೆಯ ಮೊದಲ ಕಂತಿನ ಚೆಕ್ ಅನ್ನು ಸಂಬಂಧಪಟ್ಟ ಕುಟುಂಬಕ್ಕೆ ವಿತರಿಸಲಾಯಿತು. ಯಶವಂತ್ ಪೂಜಾರಿ ಅವರು ಬೆಂಗಳೂರು ಘಟಕದ ಕಳೆದ 6 ತಿಂಗಳಿಂದ ನಡೆದು ಬಂದ ಹಾದಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು, ಹಾಗೂ ಉತ್ತಮ ಕಾರ್ಯಕ್ರಮ ನೀಡುವಲ್ಲಿ ಯಶಸ್ವಿಯಾಗಿದ್ದು ಮುಂದೆ ಘಟಕದ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸಮಿತಿಯ ಯುವಸಿಂಚನ ಪತ್ರಿಕೆಯ ಸಂಪಾದಕರಾದ ರಾಜೇಶ್ ಸುವರ್ಣಮಾತನಾಡಿ ವಿದ್ಯೆ ಉದ್ಯೋಗ ಸಂಪರ್ಕ ಮೂಲಕ ಬೆಂಗಳೂರು ಘಟಕವು ಅಲ್ಪ ಅವಧಿಯಲ್ಲಿ ಮಹತ್ತರ ಸಾಧನೆ ಮಾಡಿದೆ , ಯುವಕರಿಂದ ಕೂಡಿದ ಬೆಂಗಳೂರು ಘಟಕದ ಸಾಧನೆ ಶ್ಲಾಘನೀಯ ಎಂದರು. ಮಂಗಳೂರು ಘಟಕದ ಉಪಾಧ್ಯಕ್ಷ ರಾದ ಚಂದ್ರಶೇಖರ್ ಕರ್ಕೇರ ಶುಭ ಹಾರೈಕೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾನಿದಿಯ ಆರ್ಥಿಕ ಕ್ರೋಡೀಕರಣಕ್ಕಾಗಿ ಮಾಡಿದ ಅದ್ರಷ್ಟ ಚೀಟಿ ಯೋಜನೆಯನ್ನು ಸಂಪಾದಕ ರಾಜೇಶ್ ಸುವರ್ಣ ಬಿಡುಗಡೆ ಗೊಳಿಸಿದರು. ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಧನ್ಯವಾದ ನೀಡಿದರು.
An unique concept. A noble deed indeed. Keep it up Bangaluru