ಮಂಗಳೂರು : ನಮ್ಮಿಂದ ಮರೆಯಾದ ವ್ಯಕ್ತಿ ಎಲ್ಲಿಯವರೆಗೆ ಜನರ ಮನಸಲ್ಲಿ ಜೀವಂತವಾಗಿರುತ್ತಾರೋ ಅಲ್ಲಿಯವರೆಗೆ ಅವರು ಬದುಕಿರುವ ಚೇತನ, ಅಂತಹ ಮಹಾನ್ ವ್ಯಕ್ತಿ, ತನ್ನ ಸಾವಿನ 33 ವರುಷದ ಬಳಿಕವೂ ಜೀವಂತವಾಗಿರುವವರು. ವಿಶುಕುಮಾರ್ ಅವರ ಸಾಧನೆ ಅವರನ್ನು ಜೀವಂತವಾಗಿರಿಸಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ ವಿವೇಕ್ ರೈ ತಿಳಿಸಿದರು.
ಅವರು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಹಯೋಗದಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ನನ್ನ ಹೆಸರು ತುಳುನಾಡಿನ ಪ್ರತಿಯೊಬ್ಬರ ಬಾಯಲ್ಲೂ ಇದೆ ಎಂದರೆ ಅದಕ್ಕೆ ಮುಖ್ಯ ಕಾರಣ ವಿಶುಕುಮಾರ್, ಅವರ ಕೋಟಿಚೆನ್ನಯ ಸಿನಿಮಾಕ್ಕೆ ಹಾಡು ಬರೆಯುವ ಅವಕಾಶ ನೀಡಿದ್ದಾರೆ ಆ ಹಾಡು ಇಂದು ಮನೆಮಾತಾಗಿದೆ, ವಿಶುಕುಮಾರ್ ಅವರ ಕೊಡುಗೆ ಇದು ಎಂದವರು ತಿಳಿಸಿದರು.
ಮರೆಯಲಾಗದ ಚೇತನ, ಕೇವಲ ತನ್ನ ಬರಹದ ಮೂಲಕ ಪರಿವರ್ತನೆ ತಂದ ಬದಲಾವಣೆಯ ಹರಿಕಾರ, ತಾನು ಮಾಡುವುದನ್ನೇ ವಾಧಿಸುವ, ಅದನ್ನೇ ಸಾಧಿಸುವ ಮತ್ತು ಭೋಧಿಸುವ ಒಬ್ಬ ಧೀಮಂತ ಬರಹಗಾರ ವಿಶುಕುಮಾರ್ ಅವರು ಎಂದು ಹಿರಿಯ ಪತ್ರಕರ್ತ ಕೆ.ಎಲ್ ಕುಂಡಂತ್ತಾಯ ತಿಳಿಸಿದರು. ಅವರು ವಿಶುಕುಮಾರ್ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದರು.
ಈ ಬಾರಿ ರಂಗ ಕರ್ಮಿಗೆ ವಿಶುಕುಮಾರ್ ಪ್ರಶಸ್ತಿ ನೀಡಲಾಗಿದ್ದು, ಸುದೀರ್ಘ 33 ವರಷ ರಂಗಭುಮಿಯ ಸೇವೆ ಸಲ್ಲಿಸಿ ತನ್ನ 77 ರ ಹರೆಯದಲ್ಲೂ ರಂಗಭೂಮಿಯನ್ನು ನೆಚ್ಚಿಕೊಂಡಿರುವ ನಟ, ನಿರ್ದೇಶಕ, ಸಂಭಾಷಣೆಗಾರ, ಸಾಹಿತಿ ವಸಂತ ವಿ.ಅಮೀನ್ ಅವರಿಗೆ 2018ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಯನ್ನು 10 ಸಾವಿರ ನಗದು, ತಾಮ್ರದ ಫಲಕ, ಪ್ರಶಸ್ತಿ ಪತ್ರ, ಫಲತಾಂಬೂಲದೊಂದಿಗೆ ಪ್ರದಾನಿಸಲಾಯಿತು. ಹಿರಿಯ ಪತ್ರಕರ್ತ ಪರಮಾನಂದ ವಿ.ಸಾಲ್ಯಾನ್ ಅಭಿನಂದನಾ ಮಾತುಗಳನ್ನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ವೈ.ಎನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಯುವ ಬರಹಗಾರ ದಿನೇಶ್ ಸುವರ್ಣ ರಾಯಿ ಅವರಿಗೆ ಪ್ರಭಾಕರ್ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಮುದ್ದುಮೂಡುಬೆಳ್ಳೆಯವರು ಬರೆದ ವಿಶುಕುಮಾರ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಆತಿಥ್ಯವಹಿಸಿಕೊಂಡಿದ್ದ ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಸ್ವಾಗತಿಸಿದರು, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಟಿ. ಶಂಕರ್ ಸುವರ್ಣ ಪ್ರಸ್ತಾವಿಕ ಮಾತುಗಳನ್ನಾಡಿದರು, ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಪ್ರದೀಪ್ ಎಸ್.ಆರ್ ವಂದಿಸಿದರು. ಸ್ಮಿತೇಶ್ ಎಸ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.