ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು.
ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಿ : ಖಾದರ್
ಮಾಲ್ ಸಂಸ್ಕೃತಿ, ಆಧುನಿಕ ಆಟಗಳಲ್ಲಿ ತೊಡಗುವ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಪೋಷಕರು ಪ್ರೇರಕರಾಗಬೇಕು, ಮಕ್ಕಳನ್ನು ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರದರ್ಶನಗಳಿಗೂ ಕರೆದೊಯ್ಯಬೇಕು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ದಿವಂಗತ ವಿಶುಕುಮಾರ್ ಅವರ ಮರುಮುದ್ರಣಗೊಂಡ ಪುಸ್ತಕಗಳನ್ನು ಹೈಕೋರ್ಟ್ ನ್ಯಾಯವಾದಿ ಹಾಗೂ ವಿಶುಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಬಿಡುಗಡೆಗೊಳಿಸಿದರು. ತನ್ನ ಪತಿ ವಿಶುಕುಮಾರ್ 32 ವರ್ಷಗಳ ಹಿಂದೆ ಅಗಲಿದ್ದರೂ ತಾನು ಜಿಲ್ಲೆಯ ಜನತೆಯ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದೇನೆ. ಪತಿ ವಿಶುಕುಮಾರ್ ತನ್ನ ಜತೆ ಕೇವಲ ಒಂದು ವರ್ಷ ಮಾತ್ರ ಇದ್ದು , ಅವರನ್ನು ಬಹಳಷ್ಟು ಅರ್ಥ ಮಾಡಿಕೊಂಡಿದ್ದೇನೆ. ಸಹನೆ ಸರಳತೆ, ಸತ್ಯಕ್ಕೆ ನಿಷ್ಠತೆ ಅವರ ಗುಣ ವಿಶೇಷಗಳು ಅವರ ಸಾಹಿತ್ಯವನ್ನು ಇಂದಿನ ಯುವಜನರಿಗೆ ಒದಗಿಸಲು ಮುಂದಾಗಿರುವ ಯುವವಾಹಿನಿ ಸಂಘಟನೆ ಅಭಿನಂದನಾರ್ಹ ಎಂದವರು ಹೇಳಿದರು. ಅಲ್ಲದೆ ವಿಶುಕುಮಾರ್ ಅವರ ಸರಳತೆಯನ್ನು ವಿವರಿಸಿದರು.
ಗೌರವ ಪುರಸ್ಕಾರ :
ಸಮ್ಮೇಳನದಲ್ಲಿ ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರದ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರಿಗೆ ವಿಶುಕುಮಾರ್ ರಂಗ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು ಇವರಿಗೆ ವಿಶುಕುಮಾರ್ ಯಕ್ಷ ಪುರಸ್ಕಾರ, ನ್ಯಾಯವಾದಿ ರವಿ ಪ್ರಸನ್ನ ಸಿ.ಕೆ ಅವರಿಗೆ ವಿಶುಕುಮಾರ್ ಸೇವಾ ಪುರಸ್ಕಾರ,ಸಾಹಿತಿ ಉಗ್ಗಪ್ಪ ಪೂಜಾರಿ ಅವರಿಗೆ ವಿಶುಕುಮಾರ್ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್.ಕೆ.ಅಂಚನ್, ವಿಶುಕುಮಾರ್ ಸಾಹಿತ್ಯ ಸಮ್ಮೇಳನದ ಸಂಚಾಲಕ ಶೈಲೇಶ್ ಸಸಿಹಿತ್ಲು, , ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಕಾರ್ಯದರ್ಶಿ ಶಕೀಲಾ ನರೇಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿದರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕ ಪ್ರದೀಪ್ ಎಸ್.ಆರ್ ವಂದಿಸಿದರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು
Memorable program, Yuvavahini set another milestone