ಕೊಲ್ಯ: ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಗೆ ತೃತೀಯ ಹಂತದ ಚಾಲನಾ ಕಾರ್ಯಕ್ರಮವು ದಿನಾಂಕ 20-02-2019 ನೇ ಬುಧವಾರದಂದು ಬ್ರಹ್ಮ ಶ್ರೀ ನಾರಾಯಣಗುರು ಮಂದಿರ ಕೊಲ್ಯದಲ್ಲಿ ಜರಗಿತು. ಬ್ರಹ್ಮ ಶ್ರೀ ನಾರಾಯಣಗುರುವರ್ಯರಿಗೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರ ಅಟ್ಟಹಾಸಕ್ಕೆ ಮಡಿದ ಭಾರತೀಯ ವೀರ ಯೋಧರಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಯುವವಾಹಿನಿ (ರಿ)ಕೊಲ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶಶಿಕಾಂತ್ ಪರ್ಯತ್ತೂರು ರವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮವು ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ಪೂಜಾರಿಯವರು ಮಾತನಾಡಿ ನಮ್ಮ ಸಮಾಜದ ಅರ್ಹ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಈ ಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ರಹ್ಮ ಶ್ರೀ ನಾರಾಯಣಗುರು ಟೂರ್ ಗ್ರೂಪ್ ಕೊಲ್ಯ ಇದರ ವೇಣುಗೋಪಾಲ್ ಕೊಲ್ಯ ಇವರು ಈ ಯೋಜನೆಗೆ ಸಂಪೂರ್ಣವಾದ ಸಹಕಾರವನ್ನು ನೀಡಿ ಯೋಜನೆಯು ಯಶಸ್ವಿಯಾಗಲೆಂದು ಶುಭ ನುಡಿಯನ್ನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೀಂ-2 ಇಂಜಿನಿಯರ್ಸ್ ಸುರತ್ಕಲ್ ನ ವಿಜಯರಾಜ್ ಕುಂಪಲರವರು ಸಹಕಾರವನ್ನು ನೀಡಿ ಶುಭಹಾರೈಸಿದರು.
ಆತ್ಮಶಕ್ತಿ ವಿವಿದೊದ್ದೇಶ ಸಹಕಾರಿ ಸಂಘ ನಿ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ರವರು ಅತಿಥಿಗಳಾಗಿ ಭಾಗವಹಿಸಿ ಇಂತಹ ಯೋಜನೆಗೆ ನಾವೆಲ್ಲ ಜೊತೆಯಾಗಿ ಸಹಕರಿಸಿ ಸಮಾಜದ ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಾರದಾ ಇಲೆಕ್ಟಿಕಲ್ಸ್ ಉಳ್ಳಾಲ ಇದರ ಮಾಲಕರಾದ ರಾಕೇಶ್ ಉಳ್ಳಾಲ್ ,ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಸುರೇಶ್ ಬಂಡಿಕೊಟ್ಯ ,ಪಂಚಾಯತ್ ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಜನಾರ್ಧನ.ಕೆ.ಪೂಜಾರಿಯವರು ಈ ಯೋಜನೆಗೆ ಸಂಪೂರ್ಣವಾದ ಸಹಕಾರವನ್ನು ನೀಡಿ ಯೋಜನೆಯು ಯಶಸ್ವಿಯಾಗಲೆಂದು ಶುಭಹಾರೈಸಿದರು. ಬಿಲ್ಲವ ಸೇವಾ ಸಮಾಜ(ರಿ)ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ಆನಂದ.ಎಸ್.ಕೊಂಡಾಣ ಉಪಸ್ಥಿತರಿದ್ದರು.
ಹನಿ ಹನಿ ಸೇರಿ ಸಾಗರದೆಡೆಗೆ ಯುವವಾಹಿನಿ (ರಿ)ಕೊಲ್ಯ ಘಟಕದ ಮಹತ್ವಾಕಾಂಕ್ಷೆಯ ಶಾಶ್ವತ ವಿದ್ಯಾನಿಧಿ ಯೋಜನೆಗೆ ಈ ವರ್ಷದ ನಿರೀಕ್ಷೆಯ ಮೊತ್ತದ ಗುರಿಯ ನ್ನು ಮೀರಿ
ರೂ 3,25,500/- ಸಂಗ್ರಹ
ಯುವವಾಹಿನಿ (ರಿ)ಕೊಲ್ಯ ಘಟಕದ ಕನಸಿನ ಯೋಜನೆಯಾದ “ಶಾಶ್ವತ ವಿದ್ಯಾನಿಧಿ ಯೋಜನೆ”ಯು ವಿಭಿನ್ನವಾದ ರೂಪುರೇಷೆಯನ್ನು ಹೊಂದಿದ್ದು,ಈ ಯೋಜನೆಗೆ ದೇಣಿಗೆಯನ್ನು ನೀಡಿದ ನಮ್ಮ ಸಮಾಜದ ದೇಣಿಗೆದಾರರನ್ನು ಈ ಯೋಜನೆಯ ಸದಸ್ಯರನ್ನಾಗಿ ಪರಿಗಣಿಸಲಾಗುವುದು ಸಂಗ್ರಹವಾದ ಮೊತ್ತವನ್ನು ಬ್ಯಾಂಕ್ ಪಿಕ್ಸೆಡ್ ಡೆಪಾಸಿಟ್ ಮಾಡಲಾಗುವುದು, ಅದರಿಂದ ಬಂದ ಬಡ್ಡಿಯ ಅಂಶವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ನಮ್ಮ ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ನೀಡಿ ಆ ವಿದ್ಯಾರ್ಥಿಗಳ ಶಿಕ್ಷಣ ಕ್ಕೆ ಒತ್ತು ಕೊಟ್ಟು ಅವರ ಶಿಕ್ಷಣ ದ ಅಭಿವೃದ್ಧಿ ಯ ಬಗ್ಗೆ ನಮ್ಮ ಈ ಯೋಜನೆಯ ತಂಡವು ನಿಗಾ ಇಟ್ಟು ವಿದ್ಯಾರ್ಥಿಗಳ ಪೋಷಕರೊಂದಿಗೆ ನಿರಂತರ ಸಂಪರ್ಕವನ್ನಿಟ್ಟು ನಮ್ಮ ಸಮಾಜದ ವಿದ್ಯಾರ್ಥಿ ಗಳ ಉತ್ತಮ ಭವಿಷ್ಯಕ್ಕಾಗಿ ನಿರಂತರವಾದ ಪ್ರಕ್ರಿಯೆಗಳನ್ನೊಳಗೊಂಡು ಈ ಮೂಲಕ ಬಡ ವಿದ್ಯಾರ್ಥಿ ಯು ಕೂಡಾ ಸಮಾಜದ ಮುಖ್ಯವಾಹಿನಿ ಗೆ ಬರಬೇಕು ಈ ಮುಖೇನ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನೇರಬೇಕೆಂಬ ಆಶಯವನ್ನು ಹೊಂದಿಕೊಂಡಿದೆ ಎಂದು ಯೋಜನೆಯ ಕನಸನ್ನು ಹೊತ್ತ ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲ ರವರು ತಿಳಿಯಪಡಿಸಿದರು.
ಇಂತಹ ರೂಪುರೇಷೆಯ ಸಮಗ್ರ ವಿವರಗಳನ್ನು ಪ್ರತಿಯೊಬ್ಬರಿಗೂ ತಿಳಿಯಪಡಿಸಿದುದರಿಂದ ಪ್ರಥಮ,ದ್ವಿತೀಯ ಹಂತ ಹಾಗೂ ಇದೀಗ ತೃತೀಯ ಹಂತದಲ್ಲಿ ಈ ಯೋಜನೆಯು ಯಶಸ್ವಿನ ಮೆಟ್ಟಲೇರಿತು ಎಂದು ಸಂತಸ ವ್ಯಕ್ತಪಡಿಸಿದರು.ಇದೀಗ ಈ ವರ್ಷದಲ್ಲಿ ನಿರೀಕ್ಷೆ ಇಟ್ಟ ಮೊತ್ತವನ್ನು ಮೀರಿ ಬ್ರಹ್ಮ ಶ್ರೀ ನಾರಾಯಣಗುರುವರ್ಯರ ಆಶೀರ್ವಾದದಿಂದ ಸರ್ವರ ತುಂಬುಹೃದಯದ ಸಹಕಾರದಿಂದ ಮೂರು ಲಕ್ಷದ ಇಪ್ಪತ್ತೈದು ಸಾವಿರದ ಐನೂರು ರೂಪಾಯಿ ದಾಖಲೆಯ ಮೊತ್ತ ಸಂಗ್ರಹವಾಗಿದ್ದು ,ನಮ್ಮ ಮಾತೃ ಸಂಸ್ಥೆಯಾದ ಬಿಲ್ಲವ ಸೇವಾ ಸಮಾಜ(ರಿ)ಕೊಲ್ಯ ಸೋಮೇಶ್ವರ ಇದರ ವ್ಯಾಪ್ತಿ ಕೋಟೆಕಾರು,ಕಿನ್ಯ, ತಲಪಾಡಿ,ಪೆರ್ಮನ್ನೂರು,
ಉಳ್ಳಾಲ,ಸೋಮೇಶ್ವರ ಈ ಪ್ರದೇಶಗಳಲ್ಲಿ ವಾಸವಿರುವ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಮಾತ್ರ ಇದರ ಸದುಪಯೋಗವನ್ನು ಸೀಮಿತವಾಗಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯರನ್ನು ಈ ಯೋಜನೆಗೆ ಸೇರ್ಪಡೆಗೊಳಿಸುತ್ತಾ ಈ ಯೋಜನೆಯು ಅಮಿತವಾದ ಮೊತ್ತದ ಗುರಿಯನ್ನು ಹೊಂದಿದ್ದು ,ಮಾತೃ ಸಂಸ್ಥೆ ಬಿಲ್ಲವ ಸೇವಾ ಸಮಾಜ (ರಿ)ಕೊಲ್ಯ ಸೋಮೇಶ್ವರ ದ ವ್ಯಾಪ್ತಿಯ ನ್ನು ಮೀರಿ ನಮ್ಮ ಸಮಾಜದ ಬಡವಿದ್ಯಾರ್ಥಿಗಳಿಗೆ ನಮ್ಮ ಈ ಯೋಜನೆಯ ಸಹಾಯ ಹಸ್ತವನ್ನು ಚಾಚಲು ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರು ನಮಗೆ ಶಕ್ತಿಯನ್ನು ಅನುಗ್ರಹಿಸಲಿ, ಗುರುವರ್ಯರ ಇಚ್ಛೆಯ ಪ್ರಕಾರ ಶಾಶ್ವತ ವಿದ್ಯಾನಿಧಿ ಯೋಜನೆಯ ಸರ್ವಸದಸ್ಯರೆಲ್ಲರೂ ನಾವು ಜೊತೆಯಾಗಿ ಈ ಯೋಜನೆಯನ್ನು ಯಶಸ್ಸಿನತ್ತ ಕೊಂಡೊಯ್ಯುವ ಎಂದು ಹೇಳಿ ದೇಣಿಗೆ ನೀಡಿ ಸಹಕರಿಸಿದ ಎಲ್ಲಾ ಸದಸ್ಯರಿಗೂ ಅಂತರಾಳದ ಅಭಿನಂದನೆಯನ್ನು ಸಲ್ಲಿಸಿದರು.
ಯುವವಾಹಿನಿ (ರಿ)ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಗೆ ದೇಣಿಗೆ ನೀಡಿದ ದಾನಿಗಳಿಗೆ “ಶಾಶ್ವತ ವಿದ್ಯಾನಿಧಿ ಯ ಲಾಂಛನ” ವನ್ನು ನೀಡಿ ಯೋಜನೆಯ ಸದಸ್ಯರನ್ನಾಗಿಸಲಾಯಿತು. ಈ ಯೋಜನೆಗೆ ಬೆಂಬಲವನ್ಮು ನೀಡಿದ ಹಿರಿಯರಾದ ಶ್ರೀ ಸತೀಶ್. ಉಳ್ಳಾಲ್ ರವರ ನ್ನು ಸ್ಮರಣಿಕೆ ನೀಡಿ ಘಟಕದ ಅಧ್ಯಕ್ಷರು ಗೌರವಿಸಿದರು.
ಶಾಶ್ವತ ವಿದ್ಯಾನಿಧಿ ಯೋಜನೆಯ ಹಿರಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ಕುಂಪಲ,ಈಶ್ವರ ಸುವರ್ಣ ಕನೀರುತೋಟ, ಚಂದ್ರಹಾಸ ಪೂಜಾರಿ ಇಡ್ಯಾ , ಬಾಳಪ್ಪ ಪೂಜಾರಿ ಹಾಗೂ ಇತರ ಸದಸ್ಯರು ,ನಾರಾಯಣ ಗುರು ಧ್ಯಾನ ಮಂದಿರದ ಪ್ರಮುಖರಾದ ಪುರುಷೋತ್ತಮ ಅಡ್ಕ ,ಬಿಲ್ಲವ ಸೇವಾ ಸಮಾಜದ ಕಾರ್ಯದರ್ಶಿ ರಾಘವ ಮಾಸ್ಟರ್,ಸೀತರಾಮ.ಎಸ್.ಕರ್ಕೇರ ಕೊಲ್ಯ, ಮಾಧವ ಪರ್ಯತ್ತೂರು ಹಾಗೂ ಇತರ ಸದಸ್ಯರು ಹಾಗೂ ಯುವವಾಹಿನಿ (ರಿ)ಕೊಲ್ಯ ಘಟಕದ ಸರ್ವಸದಸ್ಯರು ಸಭೆಯಲ್ಲಿ ಹಾಜರಿದ್ದರು
ಯುವವಾಹಿನಿ (ರಿ)ಕೊಲ್ಯ ಘಟಕದ ಪ್ರಚಾರ ನಿರ್ದೇಶಕರಾದ ಲತೀಶ್. ಎಂ.ಸಂಕೊಳಿಗೆಯವರು ಸ್ವಾಗತಿಸಿ ಯೋಜನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಘಟಕದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್.ಬಿ.ಕೊಲ್ಯ ರವರು ಕಾರ್ಯಕ್ರಮ ನಿರೂಪಿಸಿದರು.ಘಟಕದ ವಿದ್ಯಾನಿಧಿ ನಿರ್ದೇಶಕರಾದ ದೀಪಕ್. ಎಸ್.ಕೋಟ್ಯಾನ್ ರವರು ಧನ್ಯವಾದ ನೀಡಿದರು.