ನಟ, ನಿರ್ದೇಶಕ, ಪತ್ರಕರ್ತ, ಸಾಹಿತಿ ದಿ.ವಿಶುಕುಮಾರ್ ಅವರ ನೆನಪಿನಲ್ಲಿ ಯುವವಾಹಿನಿ ಸಂಸ್ಥೆಯು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಮೂಲಕ ಕೊಡಮಾಡುವ 2018 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ರಂಗನಟ, ನಿರ್ದೇಶಕ, ಸಾಹಿತಿ ವಸಂತ ವಿ.ಅಮೀನ್ ಅಯ್ಕೆಯಾಗಿದ್ದಾರೆ. ಯುವವಾಹಿನಿ ಸಂಸ್ಥೆಯು ಕಳೆದ 16 ವರುಷದಿಂದ ಈ ಪ್ರಸಸ್ತಿಯನ್ನು ನೀಡುತ್ತಾ ಬಂದಿದ್ದು ವಿಶುಕುಮಾರ್ ಅವರು ಸೇವೆ ಸಲ್ಲಿಸಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಆಯ್ಕೆ ಮಾಡಿ ಈ ಪ್ರಶಸ್ತಿ ನೀಡುತ್ತಿದೆ. 2018 ನೇ ಸಾಲಿಗೆ ರಂಗಭೂಮಿ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದ್ದು ರಂಗಭೂಮಿಯಲ್ಲಿ 35 ವರುಷಗಳ ಅನನ್ಯ ಸೇವೆ ಸಲ್ಲಿಸಿರುವ ವಸಂತ ವಿ.ಅಮೀನ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಾನವ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ವಸಂತ ಅಮೀನ್ ಅವರು, `ಮಾನವ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.
ಒರಿಯರ್ದೊರಿ ಅಸಲ್ ನಾಟಕದ ನಿರ್ದೇಶನ ಹಾಗೂ ನಾಟಕದಲ್ಲಿ ಮುಖ್ಯ ಪಾತ್ರ, ಅಂಚಿಲತ್ತ್ ಇಂಚಿಲತ್ತ್ , ನಂಬುನನೆ ನಂಬೊಡು ಹಾಗೂ ಬೆನ್ಪಿನೊರಿ ತಿನ್ಪಿನೊರಿ ತುಳು ನಾಟಕಕ್ಕೆ ಸಲಹೆ ಸಹಕಾರ ಹಾಗೂ ನಟನೆ, ಗಂಗುನ ಗಮ್ಮತ್ತ್ ಹಾಗೂ ಬದ್ಕೆರೆಗಾದ್ ಸೈಪಿನಕುಲು, ಮಲ್ಲ ವಿಷಯ ಎಲ್ಯ ಮಲ್ಪಡ್ಚಿ ನಾಟಕದಲ್ಲಿ ಮುಖ್ಯ ಪಾತ್ರ, ಕುಸಲ್ದ ಕುಸೆಲ್ ನಾಟಕದ ನಿರ್ದೇಶನ, ಬಿರ್ಸೆ ತುಳು ಸಿನಿಮಾದಲ್ಲಿ ನಟನೆ, ಇಂದ್ರಲೋಕೊಡು ಮಾಲಾಶ್ರೀ ತುಳು ನಾಟಕದ ನಿರ್ದೇಶನ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಕರ ಜ್ಯೋತಿ, ಕನ್ನಡ ನಾಟಕದ ರಚನೆ, ನಿರ್ದೇಶನ ಹಾಗೂ ಗೀತಾ ಸಾಹಿತ್ಯ., ಬದ್‍ಕೊಂಜಿ ಕಬಿತೆ ಹಾಗೂ ಆಲಡೆ ತುಳು ಸಿನಿಮಾದ ಕತೆ, ಸಂಭಾಷಣೆ ಹಾಗೂ ಗೀತಾರಚನೆ, ನಂದಾರ ನಂದಾದೀಪ ಚಾರಿತ್ರಿಕ ತುಳು ಹಾಸ್ಯ ನಾಟಕದ ರಚನೆ, ನಿರ್ದೇಶನ ಹಾಗೂ ನಟನೆ, ವಜ್ರಕಂಬ, ಕದಿರೆದ ಕತೆ, ಶ್ರೀ ಕೃಷ್ಣದೇವರಾಯ, ಕೋಟಿ ಚೆನ್ನಯ್ಯ, ಬೀರ ಸಿರಿತ ಸಿಂಗದ ಕಿನ್ನಿ, ಕಿವುಡರ ಕತೆ, ಜಗಜ್ಯೋತಿ ನಿತ್ಯಾನಂದ, ಶನೀಶ್ವರ ಮಹಿಮೆ, ನಾಟಕಗಳ ರಚನೆ, ಕಾನೂನು ಕಣ್ಣ್ ಮುಚ್ಚಿನಗ ಎಂಬ ಸಾಮಾಜಿಕ ನಾಟಕದ ರಚನೆ, ವಿಶ್ವ ದಾಖಲೆಯ ತುಳು ಸಿನೆಮ ಸೆಪ್ಟಂಬರ್ 8 ಸಂಭಾಷಣೆ, ನಮ ಒಯಿಕ್ಕ್‍ಲಾ ಸೈ ತುಳು ಹಾಸ್ಯ ನಾಟಕದ ರಚನೆ ಹಾಗೂ ನಿರ್ದೇಶನ, ಒಯಿಕ್‍ಲಾ ಯೋಗ ಬೋಡು, ಬುಡಿ ಬುಡಿ ಗಡಿ ಬಿಡಿ, ರಡ್ಡೆಟ್ಟ್ ಏರೆಡ್ಡೆ, ಪೊರ್ಲದಾಯೆ, ಎದುರುಡೊಂಜಿ ಪಿರವುಡೊಂಜಿ, ಆಪಿನ ಆವೊಡೆ ಹಾಗೂ ದಾದ ಮಲ್ಪೆರೆ ಆಪುಂಡು ನಾಟಕದಲ್ಲಿ ನಟನೆ, ದಾನೆ ಆಪುಂಡು ತೂಕ ನಾಟಕದ ಕಥೆ ಹಾಗೂ ಸಂಭಾಷಣೆ, ಏರ್‍ಂದ್ ಏರೆಗೊತ್ತು ನಾಟಕದ ನಿರ್ದೇಶನ, ಏರಾ ಉಲ್ಲೆರ್ ಈ ಇಲ್ಲಡ್ ನಾಟಕಕ್ಕೆ ಸಾಹಿತ್ಯ ಒದಗಿಸಿರುವ ವಸಂತವ ವಿ.ಅಮೀನ್ ಅವರಿಗೆ, ಕುಲಾಲ ಪ್ರತಿಷ್ಠಾನ ಮಂಗಳೂರು ಇವರಿಂದ “ಸಾಹಿತ್ಯದ ಸಿರಿ” ಬಿರುದು, ತುಳು ನಾಟಕ ಕಲಾವಿದರ ಒಕ್ಕೂಟ(ರಿ) ಮಂಗಳೂರು ದಕ್ಷಿಣ ಕನ್ನಡ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹೋಗದಲ್ಲಿ “ತೌಳವ ಪ್ರಶಸ್ತಿ”,ಕುಸಲ್ದ ಕಲಾವಿದೆರ್ ಕುಡ್ಲ ಇವರಿಂದ ಸನ್ಮಾನ, ಮುಂಬಾಯಿಯಲ್ಲಿ ನಾಟಕ ಆಯೋಜಕರ ವತಿಯಿಂದ ಅಭಿನಂದನೆ, ಬಿಲ್ಲವರ ಅಸೋಸಿಯೇಶನ್ ಮುಂಬಾಯಿ ಇವರಿಂದ ಅಭಿನಂದನೆ ದಕ್ಕಿದೆ.
ನಟನೆ, ನಿರ್ದೇಶನ, ರಂಗ ಸಾಹಿತ್ಯ, ಮತ್ತು ರಂಗಭೂಮಿಯ ಸಮಗ್ರ ಸಾಧನೆಯನ್ನು ಗುರುತಿಸಿ ವಸಂತ ವಿ.ಅಮೀನ್ ಇವರಿಗೆ ೨೦೧೮ ನೇ ಶಾಲಿನ ವಿಶುಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.