ಯುವವಾಹಿನಿ ಸಂಸ್ಥೆಯು ಉದಯೋನ್ಮುಖ ಯುವ ಸಾಹಿತಿಗಳಿಗಾಗಿ ಕೊಡಮಾಡುವ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಗೆ ತುಳುನಾಡ ಸ್ವರ ಮಾಣಿಕ್ಯ, ಕಂಚಿನ ಕಂಠದ ನಿರೂಪಕ, ತುಳು ಭಾಷಾ ಪರಿಪಕ್ವ ಬರಹಗಾರ ದಿನೇಶ್ ಸುವರ್ಣ ರಾಯಿ ಆಯ್ಕೆಯಾಗಿದ್ದಾರೆ.
ನಟನೆ, ನಿರ್ದೇಶನ, ನಿರೂಪಣೆ, ಪರಿಕಲ್ಪನೆ, ವಿನ್ಯಾಸ, ಬರವಣಿಗೆ, ಕಲಾ ನಿರ್ದೇಶನ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ದಿನೇಶ್ ಸುವರ್ಣ ರಾಯಿ, ಬಂಟ್ವಾಳ ಕುದ್ಕೋಳಿ ರಾಯಿ ಗ್ರಾಮದ ಮೋನಪ್ಪ ಪೂಜಾರಿ ಹಾಗು ಕುಸುಮಾವತಿ ದಂಪತಿ ಪುತ್ರನಾಗಿದ್ದು, ,ಎಲೆಕ್ಟ್ರಿಕಲ್ಸ್ ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ರವೀಂದ್ರ ಪೂಜಾರಿಯವರ ಸಂಚಾಲಕತ್ವದಲ್ಲಿ ಷಣ್ಮುಖ ಕಲಾತಂಡದ ನಿರ್ದೇಶಕನಾಗಿ ಕಲಾವಿದರನ್ನು ಬೆಳೆಸಿದ ದಿನೇಶ್, ಸೂರ್ಯೊದಯ್ ಪೆರಂಪಳ್ಳಿ ನಿರ್ದೇಶನದ ದೇಯಿ ಬೈದೆತಿ ತುಳು ಚಿತ್ರದಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಷಣ್ಮುಖ ಕಲಾತಂಡ ನಿರ್ದೇಶಕನಾಗಿ, ಮೇಕಪ್ ಮ್ಯಾನ್ ಆಗಿ, ಕಾಸ್ಟೂಮರ್ ಆಗಿ, ರಂಗ ಸಜ್ಜಿಕೆಯ ಅನುಭವಿಯಾಗಿ, ನೃತ್ಯ ರೂಪಕದ ರಚನೆಕಾರನಾಗಿ, ಕಲಾವಿದನಾಗಿ, ಗುರುಗಣೆಶ್ ಕಲಾತಂಡದಲ್ಲಿ ನೃತ್ಯಗಾರನಾಗಿ, ಕಿರಿಯ ಪ್ರಾಯದಲ್ಲೇ ಧಾರ್ಮಿಕ ಕ್ಷೇತ್ರದ ಟ್ರಸ್ಟೀಯಾಗಿ ಸೇವೆ ಸಲ್ಲಿಸಿದ ಇವರು, ಬರಹಗಾರರಾಗಿ ಗುರುತಿಸಿಕೊಂಡವರು, ತುಳುನಾಡಿ ದೈವಾರಾಧನೆ, ತುಳುನಾಡಿನ ಇತಿಹಾಸದ ಬಗ್ಗೆ ವಿಶೆಷ ಆಸಕ್ತಿ ಹೊಂದಿದ್ದು ಈ ಬಗ್ಗೆ ಲೇಖನ ಬರೆದು ಜನ ತಿಳಿಯದ ವಿಷಯ ಜನರಿಗೆ ತಲುಪಿಸುವ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಸಾಮಾಜಿಕ, ಶೈಕ್ಷಣಿಕ ಆರೋಗ್ಯ ಸೇವೆಗಳಿಗಾಗಿ `ಜವನೆರೆ ತುಡರ್’ ಟ್ರಸ್ಟ್ ಹುಟ್ಟುಹಾಕಿದ ಇವರು ಎಚ್ಕೆ ನಯನಾಡ್ ಇವರಿಂದ ನಿರೂಪಣೆಗೆ ಇಳಿದು ಪ್ರಸ್ತುತ ಮಂಗಳೂರಿನ ನಮ್ಮ ಕುಡ್ಲ ಚಾನೆಲ್ ನಲ್ಲಿ ನಿರೂಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿಯಾಗಿ, ನಿರ್ದೇಶಕನಾಗಿ ಹೀಗೆ ಹತ್ತು ಹಲವು ಕ್ರಿಯಾತ್ಮಕ ಕೆಲಸ ಮಾಡಿದ ಅನುಭವ ಇವರದ್ದು.
ಇವರ ಈ ಎಲ್ಲಾ ಸಾಧನೆಯನ್ನು ಗುರುತಿಸಿದ ಯುವವಾಹಿನಿ ಕೇಂದ್ರ ಸಮಿತಿಯು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಮೂಲಕ ನೀಡುತ್ತಿರುವ ಪ್ರಭಾಕರ್ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಫೆಬ್ರವರಿ 17 ರಂದು ಮಂಗಳೂರು ಪುರಭವನದಲ್ಲಿ ನಡೆಯುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Good job .good bless you lot…
Congrats Dinesh
Ohh good. …congrats… Best of luck Dinesh. …..