ವೇಣೂರು : ಸಂಘಟನೆಗಳು ಉದ್ಯೋಗ, ಶಿಕ್ಷಣದ ಜತೆಗೆ ಸಮು ದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಅದುವೇ ಮೂಲ ಉದ್ದೇಶವಾಗಬೇಕು. ಸಮುದಾಯದ ಅಭಿವೃದ್ಧಿಯ ವಿಷಯ ದಲ್ಲಿ ಹಸ್ತಕ್ಷೇಪ ಸಲ್ಲದು. ಸಾಮಾಜಿಕ ಸೇವೆಯಲ್ಲಿ ಯುವವಾಹಿನಿ ಯುವಕರ ಪ್ರೇರಕ ಶಕ್ತಿ ಆಗಿದೆ ಎಂದು ಹೇಳಿದರು.ಅಲ್ಲದೆ ಜಿಲ್ಲೆಯಲ್ಲಿ ಯುವವಾಹಿನಿ ಉತ್ತಮ ಕಾರ್ಯಸಾಧನೆ ಮಾಡಿದೆ. ಅದಕ್ಕಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗಳಿಸಿರುವುದು ನಮಗೆಲ್ಲ ಹೆಮ್ಮೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವ ಈ ಸಂಘಟನೆಗೆ ಎಲ್ಲರೂ ಬೆಂಬಲ ನೀಡಬೇಕಿದೆ.ಅವಿಭಜಿತ ಜಿಲ್ಲೆ ಯಲ್ಲಿ ಬಿಲ್ಲವರೇ ಬಹುಸಂಖ್ಯಾಕರಾಗಿ ದ್ದಾರೆ. ಆದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇರುವುದು ಖೇದಕರ. ಸಂಘಟನೆ ಆಗದೆ ಇದ್ದರೆ ಅಭಿವೃದ್ಧಿ ಕಷ್ಟಸಾಧ್ಯ ಶಾಸಕ ವಸಂತ ತಿಳಿಸಿದರು.
ಅವರು ದಿನಾಂಕ 27-01-2019 ಆದಿತ್ಯವಾರದಂದು ವೇಣೂರು ಜೆ.ಪಿ ಟವರ್ ಹಾಲ್ ನಲ್ಲಿ ಜರಗಿದ ಯುವವಾಹಿನಿ(ರಿ) ವೇಣೂರು ಘಟಕದ ೨೦೧೯-೨೦೨೦ ನೇ ಸಾಲಿನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ(ರಿ) ವೇಣೂರು ಘಟಕದ ಅಧ್ಯಕ್ಷ ನಿತೀಶ್ ಎಚ್. ಅಧ್ಯಕ್ಷತೆ ವಹಿಸಿ ದ್ದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ. ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಜಿಲ್ಲಾ ಪಂಚಾಯತ್ ಸದಸ್ಯ ಪಿ. ಧರಣೇಂದ್ರ ಕುಮಾರ್, ವೇಣೂರು ಯುವವಾಹಿನಿ ಘಟಕದ ಸಲಹೆಗಾರ ಪ್ರೇಮನಾಥ ಕೆ., ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ನಾಮನಿರ್ದೇಶಿತ ಸದಸ್ಯ ಯೋಗೀಶ್ ಪೂಜಾರಿ ಬಿಕ್ರೊಟ್ಟು, ನೂತನ ಅಧ್ಯಕ್ಷ ನವೀನ್ ಪಚ್ಚೇರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ-ಸಹಾಯಹಸ್ತ
ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡಿರುವ ಎಚ್. ದಯಾನಂದ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನಪತ್ರವನ್ನು ಜಯಂತ್ ಕೋಟ್ಯಾನ್ ವಾಚಿಸಿದರು.
ಲಯನ್ಸ್ ಜಿಲ್ಲಾ ಉಪ ಗವರ್ನರ್ ಡಾ| ಗೀತ್‌ಪ್ರಕಾಶ್ ಪ್ರಧಾನ ಭಾಷಣ ಮಾಡಿದರು.
ಕಳೆದ ಸಾಲಿನಲ್ಲಿ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ನಿತೀಶ್ ಎಚ್., ಕಾರ್ಯದರ್ಶಿ ಸತೀಶ್ ಪಿ.ಎನ್., ಸಲಹೆಗಾರ ಪ್ರೇಮನಾಥ ಕೆ., ಬಲ್ಯೊಟ್ಟು ಶಾಲೆಯ ಮುಖ್ಯ ಶಿಕ್ಷಕಿ ವಿನಯಾ ಹಾಗೂ ರಾಕೇಶ್ ಕುಮಾರ್ ಮೂಡುಕೋಡಿ ಅವರನ್ನು ಸಮ್ಮಾನಿಸಲಾಯಿತು.
ಯುವವಾಹಿನಿ ಘಟಕದ ಆಸರೆ ಇದರ ಹಾಗೂ ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ. ಸಂಘದ ವತಿಯಿಂದ ಒದಗಿಸಲಾದ ಆರ್ಥಿಕ ಸಹಾಯನಿಧಿಯನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಸತೀಶ್ ಪಿ.ಎನ್. ವರದಿ ವಾಚಿಸಿ, ನೂತನ ಪ್ರ. ಕಾರ್ಯದರ್ಶಿ ಶಿವಪ್ರಕಾಶ್ ಅಂಭಾಶ್ರೀ ಸ್ವಾಗತಿಸಿ, ಅರುಣ್ ಕೋಟ್ಯಾನ್ ಹಾಗೂ ಪ್ರಜ್ಞಾ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ರಾಜೇಂದ್ರ ಕೆ. ವಂದಿಸಿದರು.