ಬಜ್ಪೆ : ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ(ರಿ.) ಬಜ್ಪೆ ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದಲ್ಲಿ ಬಜ್ಪೆ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಲಯ ಮಟ್ಟದ ವಿಶುಕುಮಾರ್ ಭಾಷಣ ಸ್ಪರ್ಧೆ ತಾ. 30.01.2019 ಬುಧವಾರ ಶ್ರೀ ನಾರಾಯಣಗುರು ಸಮುದಾಯ ಭವನ ಬಜ್ಪೆ ಇಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ರವೀಂದ್ರ ಪೂಜಾರಿ ಮಾಜಿ ಅಧ್ಯಕ್ಷರು, ಯುವವಾಹಿನಿ(ರಿ.) ಬಜ್ಪೆ ಘಟಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲಾಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ವಿಶುಕುಮಾರ್ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಜ್ಪೆ ಘಟಕದ ಅಧ್ಯಕ್ಷರಾದ ಸಂಧ್ಯಾ ಕುಳಾಯಿ ಸ್ಪರ್ಧೆಯ ನಿಯಮಗಳನ್ನು ತಿಳಿಸಿ ವಿದ್ಯಾರ್ಥಿಗಳನ್ನು ಹೂ ನೀಡುವುದರ ಮೂಲಕ ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ತೀರ್ಪುಗಾರರಾಗಿ ಆಗಮಿಸಿದ ಕೇಶವ ಎಚ್. ನಿವೃತ್ತ ಪ್ರಾಂಶುಪಾಲರು ಎಸ್.ಡಿ.ಪಿ.ಟಿ ಪದವಿ ಕಾಲೇಜು ಕಟೀಲು, ಶಂಕರ್ ಸುವರ್ಣ, ಮಾಜಿ ಅಧ್ಯಕ್ಷರು ಯುವವಾಹಿನಿ(ರಿ.) ಕೇಂದ್ರ ಸಮಿತಿ, ದೇವರಾಜ್ ಅಮೀನ್, ನಿಕಟಪೂರ್ವ ಅಧ್ಯಕ್ಷರು, ಯುವವಾಹಿನಿ(ರಿ.) ಬಜ್ಪೆ ಘಟಕ ಇವರೆಲ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಸುವರ್ಣರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಶ್ರೇಯ ಸನಿಲ್ ನಿರೂಪಿಸಿದರು. ಪೂಜಾ ಕಿರಣ್ ಅತಿಥಿಗಳನ್ನು ಸ್ವಾಗತಿಸಿದರು, ಜತೆ ಕಾರ್ಯದರ್ಶಿ ವಿನೀತ್ ಪೂಜಾರಿ ಧನ್ಯವಾದಗೈದರು.
ಶ್ರೀ ನಿರಂಜನ ಸ್ವಾಮಿ ಪ್ರೌಢ ಶಾಲೆ ಸುಂಕದಕಟ್ಟೆ, ಸಂತ ಜೋಸೆಫ್ ಪ್ರೌಢಶಾಲೆ ಹಾಗೂ ಪಾಪುಲರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ಪ್ರೋತ್ಸಾಹಕ ಬಹುಮಾನ ಪಡೆದರು. ಎಲ್ಲಾ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.