ಕೆಂಜಾರು ಕರಂಬಾರು : ಯುವವಾಹಿನಿ(ರಿ) ಕೆಂಜಾರು ಕರಂಬಾರು ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಅರಿವು ಜಾಗ್ರತಿ ತರಬೇತಿ ಕಾರ್ಯಾಗಾರವು ದಿನಾಂಕ 26-01-2019 ರಂದು ಕೆಂಜಾರು ಕರಂಬಾರು ಶ್ರೀ ದೇವಿ ಭಜನಾ ಮಂದಿರದಲ್ಲಿ ಜರುಗಿತು. ಕಾರ್ಯಾಗಾರವನ್ನು ಕೆಂಜಾರು ಕರಂಬಾರು ಘಟಕದ ನಿಕಟಪೂರ್ವ ಅಧ್ಯಕ್ಷರು ಹಾಗೂ ಗ್ರಾಮ ಪಂಚಾತ್ ಮಳವೂರು ಅಧ್ಯಕರಾದ ಗಣೇಶ್ ಅರ್ಬಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಕೆಂಜಾರು ಕರಂಬಾರು ಘಟಕದ ಅಧ್ಯಕ್ಷರಾದ ಯಶವಂತ ಬೆಲ್ಚದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡ್ಕ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಸುಮನ ಬೋಳಾರ ವಿದ್ಯಾರ್ಥಿ ಪ್ರೇರಣ ಮಾರ್ಗದರ್ಶಿ ಕಾರ್ಯಾಗಾರದ ಸಂಪನ್ಮೂಲ ಭಾಗವಹಿನಿದರು. ಎಂ. ಸಿ. ಎಫ್. ಹಿರಿಯ ಎಂಜಿನಿಯರ್ ಚಂದ್ರಶೇಖರ ಎಸ್ ಎಡಪದವು ವಿದ್ಯಾರ್ಥಿ ವೇತನದ ಬಗ್ಗೆ ಮಾರ್ಗದರ್ಶನ ನೀಡಿದರು.
ಸುಮಾರು 123 ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆದರು. ಮಕ್ಕಳಿಗೆ ಗಣರಾಜ್ಯೋತ್ಸವ ಮಾಹಿತಿಯನ್ನು ಸಾಕ್ಷ್ಯ ಚಿತ್ರದ ಮೂಲಕ ನೀಡಲಾಯಿತು. ಜಿತೇಶ್ ಸಾಲಿಯಾನ್, ಕಾರ್ಯಕ್ರಮವನ್ನುನಿರೂಪಿಸಿದರು ವ್ಯಕ್ತಿತ್ವ ವಿಕಸನ ನಿರ್ದೇಶಕ ರಾದ ವಿದ್ಯಾಕಿಶೋರ್ ವಂದಿಸಿದರು, ಯುವವಾಹಿನಿಯ ಎಲ್ಲಾ ಸದಸ್ಯರು ಮುಂಚೂಣಿಯಲ್ಲಿ ನಿಂತು ಸಹಕರಿಸಿದರು. ವಿದ್ಯಾರ್ಥಿಗಳಿಗೆ ರಸ ಪ್ರಶ್ನೆಯ ಮೂಲಕ ಸಂಚಲನ ಮೂಡಿಸಲಾಯಿತು.