ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 13-01-2019 ರಂದು ವಿದ್ಯಾನಿಧಿಯ ಬಲವರ್ಧನೆಗಾಗಿ ಶಾರದಾ ಕಲಾ ಆರ್ಟ್ಸ್ ಕಲಾವಿದೆರ್(ರಿ) ಮಂಜೇಶ್ವರ ಇವರ ಬತ್ತಿಯಿಂದ ‘ ನಿತ್ಯೆ ಬನ್ನಗ ‘ ಎಂಬ ನಾಟಕವನ್ನು ಆಯೋಜಿಸಲಾಗಿತ್ತು .ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ -ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ,ನವೀನ್ ಚಂದ್ರ ಬಿ ಪೂಜಾರಿ – ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಆಗಮಿಸಿದ್ದರು. ಯುವವಾಹಿನಿ(ರಿ) ಕೂಳೂರು ಘಟಕದ ಗೌರವ ಸಲಹೆಗಾರರಾದ ನೇಮಿರಾಜ್, ಘಟಕದ ಉಪಾಧ್ಯಕ್ಷರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಭಾಸ್ಕರ್ ಕೋಟ್ಯಾನ್ ,ಘಟಕದ ಕಾರ್ಯದರ್ಶಿ ಪವಿತ್ರ ಅಂಚನ್ ಉಪಸ್ಥಿತರಿದ್ದರು .ರಾತ್ರಿ 8 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮವು ಪ್ರಾರ್ಥನೆಯ ಮೂಲಕ ಪ್ರಾರಂಭಗೊಂಡಿತು .ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಬಂದಿರುವ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು .ಮುಖ್ಯ ಅತಿಥಿಯಾದ ಅನಿಲ್ ಕುಮಾರ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ -ಯುವವಾಹಿನಿಯು ವಿದ್ಯಾ ನಿಧಿಗಾಗಿ ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿರುವುದರ ಬಗ್ಗೆ ಅಭಿನಂದಿಸಿದರು .ಇದೇ ರೀತಿ ಬಿಲ್ಲವ ಸಮಾಜ ಒಗ್ಗಟ್ಟಿನಿಂದ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಇಂತಹ ಉತ್ತಮ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು .ಇನ್ನೋರ್ವ ಅತಿಥಿಯಾದ ನವೀನ್ ಚಂದ್ರ ಬಿ.ಪೂಜಾರಿ ಇವರು ಮಾತನಾಡಿ ಕೂಳೂರು ಘಟಕವು ವಿಶೇಷ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು ಈ ಬಾರಿ ಮಾಡಿದಂತಹ ಫಲ್ಗುಣಿ ನದಿ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬಿಲ್ಲವ ಸಮಾಜ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಮುಂದುವರಿಯಬೇಕೆಂದು ತಿಳಿಸಿದರು .ಬಳಿಕ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿರುವಂತಹ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಹಾಗೂ ಕ್ರೀಡೆಯಲ್ಲಿ ಸಾಧನೆ ಗೈದಿರುವ ಮಾಸ್ಟರ್ ಸುಬಿತ್ ಇವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಊರಿನವರೇ ಆದ ಬಿಕೆ ಭಾಸ್ಕರ್ ಅವರನ್ನು ಇವರ ವೈಯಕ್ತಿಕ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು ಹಾಗೂ ನಮ್ಮ ಘಟಕದ ಸದಸ್ಯರ ಮಕ್ಕಳಾದ ಮಾಸ್ಟರ್ ಯಶಸ್, ಕೌಶಿಕ್,ಗಗನ್ ಸೃಜನ್ ಇವರ ಕ್ರೀಡಾ ಸಾಧನೆ ಗುರುತಿಸಿ ಅಭಿನಂದಿಸಲಾಯಿತು ಹಾಗೂ ನಮ್ಮ ಘಟಕದ ಹಿರಿಯ ಸದಸ್ಯರಾದ ಸುಶೀಲ ಇವರನ್ನು ಇವರ ಯುವವಾಹಿನಿಯ ಬಗೆಗಿನ ಹೆಚ್ಚಿನ ಪ್ರೀತಿ ವಾತ್ಸಲ್ಯವನ್ನು ಗುರುತಿಸಿ ಅವರನ್ನು ಅಭಿನಂದಿಸಲಾಯಿತು .ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಅತಿ ಬಡ ಕುಟುಂಬವೊಂದಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಶಾರದಾ ಗುರುವಪ್ಪ ಬೋಂದೆಲ್ ಇವರ ಕುಟುಂಬಕ್ಕೆ ಆರ್ಥಿಕ ನೆರವು ಹತ್ತು ಸಾವಿರ ರೂಪಾಯಿಯನ್ನು ಘಟಕದ ವತಿಯಿಂದ ನೀಡಲಾಯಿತು. ನಂತರ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ ಕೂಳೂರು ಘಟಕವು ಕೂಡು ಕುಟುಂಬದ ರೀತಿ ಇದ್ದು ವಿಭಿನ್ನ ಘಟಕವಾಗಿದ್ದು ವಿನೂತನ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ವಿದ್ಯೆಗಾಗಿ ನಡೆಸಿಕೊಂಡು ಬಂದಿರುತ್ತದೆ ಎಂದರು. ಹಾಗೂ ಮಂಗಳೂರಿನ DC ಮೆ ಚ್ಚುಗೆ ವ್ಯಕ್ತಪಡಿಸಿರುವ ಫಲ್ಗುಣಿ ನದಿ ಸ್ವಚ್ಛತಾ ಕಾರ್ಯಕ್ರಮವು ಯುವವಾಹಿನಿಯ ಒಂದು ಉತ್ತಮ ಕಾರ್ಯಕ್ಕೆ ಅಭಿನಂದಿಸಿದರು .ಘಟಕದ ಸಲಹೆಗಾರರಾದ ನೇಮಿರಾಜ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಮ್ಮ ಘಟಕದ ವಿವಿಧ ಕಾರ್ಯಕ್ರಮಗಳ ಉದ್ದೇಶವನ್ನು ತಿಳಿಸಿದರು. ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಮಾತನಾಡಿ ವಿದ್ಯಾನಿಧಿ ಬಲವರ್ಧನೆಗಾಗಿ ಈ ನಾಟಕ ಕಾರ್ಯಕ್ರಮ ನಡೆಯುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕೊಡಿಸುವ ಒಳ್ಳೆಯ ಉದ್ದೇಶ ಹೊಂದಿರುವುದಾಗಿ ತಿಳಿಸಿದರು . ಸಭೆಯಲ್ಲಿ ಕೂಳೂರು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ,ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿಚಂದ್ರ ಇವರು ಸಭೆಯಲ್ಲಿ ಉಪಸ್ಥಿತರಿದ್ದರು .ಪ್ರತೀಶ್ ಗೌರೀಶ್ ಕಾರ್ಯಕ್ರಮ ನಿರೂಪಿಸಿದರು .ಸಂಚಾಲಕರಾದ ಭಾಸ್ಕರ್ ಕೋಟ್ಯಾನ್ ವಂದಿಸಿದರು .ಬಳಿಕ ರಿದಮ್ ಡ್ಯಾನ್ಸ್ ಸ್ಟುಡಿಯೋ ಕೂಳೂರು ಇವರ ವತಿಯಿಂದ ಮಕ್ಕಳು ನೃತ್ಯ ಪ್ರದರ್ಶನ ನಡೆಯಿತು .ನಂತರ ಶಾರದಾ ಕಲಾ ಆರ್ಟ್ಸ್ ಕಲಾವಿದೆರ್ (ರಿ)ಮಂಜೇಶ್ವರ ಅಭಿನಯಿಸುವ ನಿತ್ಯೆ ಬನ್ನಗ ಎಂಬ ನಾಟಕ ಪ್ರದರ್ಶನಗೊಂಡಿತು. ನಾಟಕದ ಮುಖ್ಯ ಹಾಸ್ಯ ಕಲಾವಿದರಾದ ದೀಪಕ್ ರೈ ಪಣಾಜೆ ಇವರನ್ನು ಕೂಳೂರು ಘಟಕದ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು . ಹಾಗೂ ವಿದ್ಯಾನಿಧಿ ಲಕ್ಕಿಡಿಪ್ ಡ್ರಾ ಅನ್ನು ವಿದ್ಯಾನಿಧಿ ನಿರ್ದೇಶಕರಾದ ನಯನಾ ರಮೇಶ್ ಇವರು ನಡೆಸಿಕೊಟ್ಟರು .ಪ್ರಥಮ ಬಹುಮಾನ ಯುವವಾಹಿನಿ(ರಿ) ಮಂಗಳೂರು ಘಟಕದ ಸದಸ್ಯರಾದ ಶ್ರೀಕಾಂತ್ ಇವರಿಗೆ ದೊರಕಿತು. ದ್ವಿತೀಯ ಬಹುಮಾನ ಸ್ಥಳೀಯರಾದ ನಾರಾಯಣ ಇವರಿಗೆ ದೊರಕಿತು.ಕಾರ್ಯಕ್ರಮದಲ್ಲಿ ಸುಮಾರು 500 ಕ್ಕಿಂತ ಹೆಚ್ಚಿನ ಜನ ಭಾಗವಹಿಸಿದ್ದರು .ಕಾರ್ಯಕ್ರಮದ ಕೊನೆಗೆ ಘಟಕದ ಸದಸ್ಯರಿಗೆ ಮತ್ತು ಕಲಾವಿದರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.