ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ತಾ 5-3-2017 ನೇ ಆದಿತ್ಯವಾರ ಯುವವಾಹಿನಿ ಅಂತರ್ ಘಟಕ ಮಹಿಳಾ “ದೇಯಿ ಬೈದ್ಯೆದಿ ಕ್ರೀಡಾಕೂಟ” ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜು ಮೈದಾನದಲ್ಲಿ ನಡೆಯಿತು.
ಕ್ರೀಡೆಯು ಮಾನವೀಯ ಸಂಬಂಧ ಬೆಸೆದು ಸಾಮರಸ್ಯ ಮೂಡಿಸುತ್ತದೆ. ಯುವವಾಹಿನಿ ಮಹಿಳಾ ಘಟಕವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದು ಕುದ್ರೋಳಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಲತಾ ಎನ್. ಸುವರ್ಣರವರು ಕ್ರೀಡಾಕೂಟ ಉದ್ಘಾಟಿಸಿ ತಿಳಿಸಿದರು. ಯುವವಾಹಿನಿ ಕೆಂದ್ರಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಮಹಿಳಾ ಘಟಕದ ಸಲಹೆಗಾರರಾದ ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷರಾದ ವಿದ್ಯಾ ರಾಕೇಶ್ ಅದ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ರೇಖಾ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಹುಮಾನಗಳನ್ನು ವಿವರ
ತ್ರೋಬಾಲ್
ಪ್ರಥಮ : ಯುವವಾಹಿನಿ ಕೊಲ್ಯ
ದ್ವಿತೀಯ :ಯುವವಾಹಿನಿ ಕಂಕನಾಡಿ
ಹಗ್ಗಜಗ್ಗಾಟ
ಪ್ರಥಮ :ಯುವವಾಹಿನಿ ಕೊಲ್ಯ
ದ್ವಿತೀಯ :ಯುವವಾಹಿನಿ ಮಂಗಳೂರು ಮಹಿಳಾ
ಗುಂಡೆಸೆತ
ಪ್ರಥಮ : ಸುಪ್ರಿತಾ ಮಂಗಳೂರು ಮಹಿಳಾ
ದ್ವಿತೀಯ : ಅಕ್ಷಿತಾ ಮಂಗಳೂರು ಮಹಿಳಾ
ತೃತೀಯ : ಮೊಹಿನಿ ಕೆ ಮಂಗಳೂರು ಮಹಿಳಾ
ಲಿಂಬೆ ಚಮಚ
ಪ್ರಥಮ : ಪೂಜಾ ಮಂಗಳೂರು ಮಹಿಳಾ
ದ್ವಿತೀಯ : ತ್ರಿವೇಣಿ ಯುವವಾಹಿನಿ ಕೊಲ್ಯ
ತೃತೀಯ :ಉಷಾ ಯುವವಾಹಿನಿ ಬಜಪೆ
ಸೂಜಿ ನೂಲು
ಪ್ರಥಮ : ಪ್ರತೀಕ್ಷಾ ಯುವವಾಹಿನಿ ಕಂಕನಾಡಿ
ದ್ವಿತೀಯ : ದೇವಿಕಾ ಯುವವಾಹಿನಿ ಬಜಪೆ
ತೃತೀಯ : ಶರಣ್ಯ ಯುವವಾಹಿನಿ ಕೊಲ್ಯ
ಯುವವಾಹಿನಿ ಕಂಕನಾಡಿ ಘಟಕ, ಬಜ್ಪೆ ಘಟಕ, ಕೊಲ್ಯ ಘಟಕ, ಕೂಳೂರ್ ಘಟಕ ಹಾಗೂ ಮಹಿಳಾ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.