ಜೈನ ಕವಿ ರತ್ನಾಕರರ್ಣಿ ಹೇಳಿದ ಸಾಲುಗಳಿವು
ಅಯ್ಯಾಯ್ಯಾ ಬಲು ಚೆನ್ನಾದುದೆನೆ ಕನ್ನಡಿಗ,
ರಯ್ಯ ಮಂಚಿದಿಯೆನೆ ತೆಲುಗ,
ಅಯ್ಯಾಯ್ಯ ಎಂಚ ಪೊರ್ಲಾಂಡ್ಂದ್ ತುಳುವರು
ಮೈಯುಬ್ಬಿ ಕೇಳಬೇಕಣ್ಣ”
ಎಂಬ ಧ್ವನಿ ಭಾವದಂತೆ “ಅಯ್ಯಾಯ್ಯಾ ಎಂಚ ಪೊರ್ಲಾಂಡ್ ಯುವವಾಹಿನಿಯ ಅಂತರ್ ಘಟಕ ಕೋಟಿ ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ-2018” ಎಂದು ಹೇಳಿದರೂ ಉತ್ಪ್ರೇಕ್ಷೆಯಾಗಲಾರದು. ಮೂಡಣದ ಮಟ್ಟದಿಂದ ಪಡುವಣದ ಕಡಲ ಸೆರಗಿನವರೆಗೆ,ಉತ್ತರದ ಬಾರ್ಕೂರಿನಿಂದ ದಕ್ಷಿಣದ ನೀಲೇಶ್ವರದವರೆಗೆ,ರಾಜ್ಯ ರಾಜಧಾನಿ ಸೇರಿದಂತೆ ಬಿಲ್ಲವ ಸಮಾಜದ ಯುವಶಕ್ತಿ ಯುವವಾಹಿನಿಯ 33ಘಟಕಗಳಾಗಿ ಬೆಳೆದು ಬೆಳಗುತ್ತಿರುವ ಈ ಸುಸಂಧರ್ಭದಲ್ಲಿ ಆ ಎಲ್ಲಾ ಯುವವಾಹಿನಿ ಯುವ ಮಿತ್ರರು ಒಂದೆಡೆ ಸೇರಿ ಕಂಬಳಗದ್ದೆಯ ಕೆಸರಿನ ಜಳಕ,ನೀರಸಿಂಚನದೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಅಭಿಮಾನದೊಂದಿಗೆ ಆಡಿ,ನಲಿದು ಸಂಭ್ರಮಿಸಿದ ಹಬ್ಬವೇ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ, ಮಾಣಿ ಘಟಕದ ಆತಿಥ್ಯದ ಅಂತರ್ ಘಟಕ ಕೋಟಿ ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ-2018. ಸಮಸ್ತ ಯುವವಾಹಿನಿ ಘಟಕಗಳ ಒಗ್ಗೂಡುವಿಕಯ ಈ ಮಹಾಕ್ರೀಡಾ ಹಬ್ಬವನ್ನು ಅಷ್ಟೇ ಯಶಸ್ವಿಯಾಗಿ ಸಂಘಟಿಸಿ ನಿರ್ವಹಿಸಿ ಕೊಟ್ಟ ಸಾರ್ಥಕತೆ ಯುವವಾಹಿನಿ (ರಿ) ಮಾಣಿ ಘಟಕದ್ದು.
ದಿನಾಂಕ: 23-12-2018ಕ್ಕೆ ಆದಿತ್ಯವಾರದಂದು ಅನಂತಾಡಿ ಗ್ರಾಮದ ಉಳ್ಳಾಲ್ತಿ ನಡೆಯ,ಶ್ರೀ ವೈದ್ಯನಾಥೇಶ್ವೆರ ದೈವ ಸಾನಿಧ್ಯದ ಕೋಟಿ ಚೆನ್ನಯರ ಸ್ಥಳ ಕಾರ್ನಿಕದ ಮಹಿಮೆಯುರುವ ಬಾಕಿಲಗುತ್ತು ತರವಡು ಮನೆತನದ ಕಂಬಳಗದ್ದೆಯಲ್ಲಿ ಯುವವಾಹಿನಿಯ ಈ ಕ್ರೀಡಾಕೂಟ ಸಾಕಾರಗೊಂಡಿತು…
ಬೆಳಿಗ್ಗೆ 8.30ಕ್ಕೆ ಮಾಣಿ ನಾರಾಯಣ ಗುರು ಸೇವಾ ಸಂಘದ ಗೌರವಧ್ಯಕ್ಷರಾದ ಈಶ್ವರ ಪೂಜಾರಿ ಕಡೇಶಿವಾಲಯ ಇವರ ಆಶೀರ್ವಾದದೊಂದಿಗೆ ಪ್ರಾರಂಭಗೊಂಡ ಕ್ರೀಡಾಜ್ಯೋತಿ ಮೆರವಣಿಗೆ ಕಂಬಳಗದ್ದೆಯನ್ನು ತಲುಪಿ 9.30ಕ್ಕೆ ಸರಿಯಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ಇವರ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಮುಂದುವರೆಯಿತು..
ಉದ್ಘಾಟನಾ ಸಂಭ್ರಮಕ್ಕೆ ಅಣಿಯಾಗಿದ್ದ ಆಕರ್ಷಕ ದೇರೆಬೈದ್ಯ ವೇದಿಕೆಯಲ್ಲಿ ಬಾಕಿಲಗುತ್ತು ಜನಾರ್ದನ ಪೂಜಾರಿಯವರು ಕ್ರೀಡಾಜೋತ್ಯಿಯಿಂದ ದೀಪಬೆಳಗಿಸುವಿಕೆಯ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ವಹಿಸಿದ್ದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್,ಈಶ್ವರ ಪೂಜಾರಿ ಕಡೇಶಿವಾಲಯ,ನಾರಾಯಣ ಸಾಲ್ಯನ್, ಸನತ್ ರೈ,ರಾಮ್ ಕಿಶನ್ ರೈ,ವಸಂತ ಪೂಜಾರಿ ಜಲ್ಲಿಗುಡ್ಡೆ,ಗೋಪಾಲಕೃಷ್ಣ ಮಾಡವು,ಮೊನಪ್ಪ ಪೂಜಾರಿ, ಸುನೀಲ್ ಅಂಚನ್,ಸುಪ್ರಿತ ಪೂಜಾರಿ, ರವಿಚಂದ್ರ ಬಾಬನಕಟ್ಟೆ, ದೀಪಕ್ ಮಡಲ,ಸುಜಿತ್ ಅಂಚನ್ ಉಪಸ್ಥಿತರಿದ್ದರು. ನಿ.ಪೂ ಅಧ್ಯಕ್ಷರಾದ ರಾಜೇಶ್ ಪೂಜಾರಿ ಬಾಬನಕಟ್ಟೆ ಸ್ವಾಗತಿಸಿದರು, ಉಪಾಧ್ಯಕ್ಷರಾದ ಪ್ರಶಾಂತ್ ಪುಂಜಾವು ಪ್ರಸ್ತಾವಿಕ ಮಾತುಗಳನ್ನಾಡಿದರು,ಕಾರ್ಯದರ್ಶಿ ಸುಜಿತ್ ಅಂಚನ್ ವಂದಿಸಿದರು.ಶಶಿದರ್ ಕಿನ್ನಿಮಜಲು ಕಾರ್ಯಕ್ರಮದ ನಿರೂಪಿಸಿದರು.
ತದನಂತರ ಶ್ರೀ ಮೊನಪ್ಪ ಪೂಜಾರಿ ಬಾಕಿಲಗುತ್ತು ಇವರು ಕಂಬಳಗದ್ದೆಗ ಕಾಯಿ ಒಡೆಯುವ ಮೂಲಕ ಮುಹೂರ್ತ ನೆರೆವೆರಿಸಿದರು.ಕಂಬಳ ಕೋಣಗಳ ರಾಜಗಾಂಭಿರ್ಯ ನಡೆ ಕಂಬಳಗದ್ದೆ ಶೋಭೆಯನ್ನು ಹೆಚ್ಚಿಸಿತು.
ಮಾತಿನ ಚತುರಾದ ದಿನೇಶ್ ಸುವರ್ಣ ರಾಯಿ,ಶಶಿಧರ್ ಕಿನ್ನಿಮಜಲು,ಮಹೇಶ್ಚಂದ್ರ ಪುತ್ತೂರು, ಉದಯ ಕೊಲಾಡಿ ಇವರುಗಳ ನಿರೂಪಣೆಯೊಂದಿಗೆ ಕಳೆಕಟ್ಟಿದ ಕಂಬಳಗದ್ದೆಯ ಕ್ರೀಡಾಕೂಟವು ನಾನಾ ವಿಭಾಗಳ ಸ್ಪರ್ಧೆಗಳನ್ನು ಸಮರ್ಥ ತೀರ್ಪುಗಾರರ ನೆರವು ಕ್ರೀಡಾಭಿಮಾನಿಗಳ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.ಕಬಡ್ಡಿ, ವಾಲಿಬಾಲ್,ತ್ರೋ ಬಾಲ್,ಹಗ್ಗಜಗ್ಗಾಟ, ಐದು ಕಾಲಿನ ಓಟ,ತೆವಳು ಓಟ,ಹಿಮ್ಮುಖ ಓಟ,ಹಾಳೆ ಎಳೆಯುವುದು, ಉಪ್ಪು ಮೂಟೆ,4*50 ರಿಲೇ, ಸಂಗೀತ ಕುರ್ಚಿ,50ಮೀ ಓಟ,ನಿಧಿ ಶೋಧ ಹೀಗೆ ಮತ್ತು ಮಕ್ಕಳ ಹಲವು ಆಟಗಳು ನೋಡುಗರಿಗೆ ಮನರಂಜನೆಯ ರಸದೌತಣವನ್ನು ನೀಡಿದವು.
ಕಂಬಳಗದ್ದೆಯೆಡೆಗೆ ಹರಿದು ಬಂದ ಜನಪ್ರವಾಹದ ಜೋತೆಗೆ ಗಣ್ಯಾತೀತರ ಆಗಮನ,ಚಲನಚಿತ್ರ ನಟರ ವಿಶೇಷ ಆಕರ್ಷಣೆಗಳು ಕ್ರೀಡಾಕೂಟದ ಮೆರಗನ್ನು ಹೆಚ್ಚಿಸಿದವು.ಬೆಳಿಗ್ಗೆ ರುಚಿರುಚಿಯಾದ ಉಪಹಾರ, ಮಧ್ಯಾನ್ಹದ ಊಟದ ಜೊತೆಗೆ ಪಾಯಸ ಸೇರಿದ್ದ ಜನರ ಹೊಟ್ಟೆ ತಣಿಸಿದ್ದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಹುಭಾಷಾ ಚಲನಚಿತ್ರ ನಟರಾದ ರಾಜಶೇಖರ್ ಕೋಟ್ಯಾನ್ ಕಾರ್ಯಕ್ರಮದ ಅಚ್ಚುಕಟ್ಟಾದ ಆಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದರ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ವಹಿಸಿದ್ದರು.
ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಘಟಕಗಳ ಪೈಕಿ ಕೊಲ್ಯ ಘಟಕ ಶಿಸ್ತುಬದ್ಧ ಘಟಕವೆಂಬ ವಿಶೇಷ ಪುರಸ್ಕಾರ ಪಡೆದುಕೊಂಡತು.23 ಅಂಕಗಳೊಂದಿಗೆ ಪುತ್ತೂರು ಘಟಕ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡರೆ,ಹಳೆಯಂಗಡಿ ಘಟಕವು 18 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಮೇಶ್ ಮುಜಲ ಸ್ವಾಗತಿಸಿದರು. ದಿನಕರ್ ಬರಿಮಾರು, ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರು.ತ್ರಿವೇಣಿ ರಮೇಶ್ ಮುಜಲ ವಂದಿಸಿದರು.
ಸಾರ್ಥಕ ಭಾಗದೊಂದಿಗೆ ಧ್ವಜ ಅವರೋಹಣ ಮಾಡುವುದರೊಂದಿಗೆ ಯಶಸ್ವಿ ಅಂತರ್ ಘಟಕ ಕೋಟಿ ಚೆನ್ನಯ ಕ್ರೀಡಾಕೂಟ-2018ಕ್ಕೆ ತೆರೆ ಎಳೆಯಲಾಯಿತು.
ಯುವವಾಹಿನಿ ಮಾಣಿ ಘಟಕದ ಸದಸ್ಯರು ಬಾಕಿಲ ಕಂಬಳಗದ್ದೆಯನ್ನು ಕೇವಲ ಕ್ರೀಡಾಕೂಟಗಳಿಗೆ ಸೀಮಿತಗೊಳಿಸದೆ, ಅದೇ ಗದ್ದೆಯಲ್ಲಿ ಭತ್ತದ ಬೀಜ ಬಿತ್ತನೆಯ ಮೂಲಕ ಬೇಸಾಯ ಮಾಡಿ ಕೃಷಿ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದೆ