ಕಡಬ : ಯುವವಾಹಿನಿ (ರಿ) ಕಡಬ ಘಟಕದ ವತಿಯಿಂದ ಹಳೆನೇರಂಕಿ ಗ್ರಾಮದ ನಾರಾಯಣ ಸಾಂತ್ಯ ಇವರ ಮನೆಯಲ್ಲಿ ದಿನಾಂಕ 16.12.2018 ರಂದು ನಡೆದ “ಗುರುಸ್ಪೂರ್ತಿ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಯೋಗೀಶ್ ಕುಮಾರ್ ಅಗತ್ತಾಡಿಯವರು, ಗ್ರಾಮ ಮಟ್ಟದಿಂದಲೆ ನಮ್ಮ ಸಮಾಜ ಬಾಂಧವರನ್ನು ನಾಯಕರಾಗಿಸುವಲ್ಲಿ ಪ್ರೋತ್ಸಾಹ ನೀಡೋಣ ಎಂದು ತಿಳಿಸಿದರು. ಮನೆಯ ಹಿರಿಯರಾದ ಬಾಳಪ್ಪ ಪೂಜಾರಿ ಸಾಂತ್ಯ ಕಾರ್ಯಕ್ರಮ ಉಧ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆಲಂಕಾರು – ನಾರಾಯಣ ಗುರುಗಳ ಜೀವನ ಚರಿತ್ರೆ, ಅವರು ನಡಸಿದ ಪವಾಡಗಳು, ಗುರುಗಳ ಅದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೂಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳೋಣ ಎಂದರು. ಕಾರ್ಯಕ್ರಮದ ದಿಕ್ಸೂಚಿಯಾಗಿ ಮಾತನಾಡಿದ ಯುವವಾಹಿನಿ (ರಿ) ಕೇಂದ್ರ ಸಮಿತಿ ನಾಮನಿರ್ಧೇಶಿತ ಸದಸ್ಯ ದಯಾನಂದ ಕರ್ಕೇರಾ ಮಡ್ಯೊಟ್ಟು – ನಮ್ಮ ಸಮಾಜದ ಯುವಕರು ದಾರಿತಪ್ಪುತ್ತಿದ್ದು ಯುವಸಮುದಾಯ ಒಗ್ಗಟ್ಟಾಗಿ, ಬರಿ ಕಾರ್ಯಕರ್ತರಾಗಿ ಮಾತ್ರ ಇರದೆ, ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ನಮ್ಮವರನ್ನು ಒಗ್ಗೂಡಿಸಬೇಕು, ಜವಾಬ್ದಾರಿಯುತ ಸ್ಥಾನಗಳನ್ನು ಪಡೆಯುಲ್ಲಿ ನಾವೆಲ್ಲರು ಶ್ರಮಿಸಬೇಕು ಎಂದರು. ಯುವವಾಹಿನಿ ( ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ ಮಾತನಾಡಿ ಗುರುಸ್ಪೂರ್ತಿ ಕಾರ್ಯಕ್ರಮ ಪ್ರತಿ ಗ್ರಾಮಮಟ್ಟದಲ್ಲಿ ನಡೆಸಿ ಬಿಲ್ಲವ ಸಮಾಜದವರನ್ನು ಸಂಪರ್ಕಗಳಿಸುವಲ್ಲಿ ಉತ್ತಮ ಕಾರ್ಯವಾಗಿದೆ. ಕಡಬ ಘಟಕದ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ, ಕಡಬ ಘಟಕದ ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ, ನಿರ್ದೇಶಕರಾದ ಗಣೇಶ್ ನಡುವಾಲು, ಪುತ್ತೂರು ಯುವವಾಹಿನಿ ಘಟಕದ ಸದಸ್ಯ ಬಾಬು ಪೂಜಾರಿ ಇದ್ಪಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು, ಘಟಕದ ನಿರ್ಧೇಶಕರು, ಸದಸ್ಯರು ಹಾಜರಿದ್ದರು. ಸಂಘಟನಾ ಕಾರ್ಯದರ್ಶಿ ಗಳಾದ ನಾರಾಯಣ ಸಾಂತ್ಯ ಸ್ವಾಗತಿಸಿ, ಸದಸ್ಯೆ ಸುಚೇತಾ ಬರೆಂಬೆಟ್ಟು ವಂದಿಸಿದರು. ನಿರ್ಧೇಶಕರಾದ ವಸಂತ ಪೂಜಾರಿ ಬದಿಬಾಗಿಲು ಪ್ರಾಸ್ತವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.