ಮಂಗಳೂರು : ಸಾಹಿತ್ಯ ಕೃಷಿ ಕ್ಷೇತ್ರದಲ್ಲಿ ಯಾವ ಸಾಹಿತಿಯೂ ಮಾಡದ ಸಾಹಿತ್ಯ ಕೃಷಿಯನ್ನು ತನ್ನ ಅಲ್ಪಾವಧಿಯ ಜೀವನದಲ್ಲಿ ಮಾಡಿದ ಮೇದಾವಿ ಸಾಹಿತಿ ವಿಶು ಕುಮಾರ್, ಬಿಲ್ಲವ ಸಮಾಜದಲ್ಲಿ ಜನಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಯಾಗಿ, ಪತ್ರಿಕಾ ರಂಗದಲ್ಲಿ ಪತ್ರಿಕೆಗೆ ಅಂಕಣಗಾರನಾಗಿ ನಾಟಕ ಹಾಗು ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ ಹೆಸರು ಪಡೆದ ದೀಮಂತ ಸಾಹಿತಿ ವಿಶುಕುಮರ್ ಸಾಹಿತ್ಯ ಲೋಕದ ವಿನುಗು ತಾರೆಯಾಗಿ ಮಿಂಚಿದವರು ಎಂದು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ವಿಶುಕುಮರ್ ಪ್ರಸಸ್ತಿ ಪ್ರಧಾನ ಸಮಿತಿಯ ಮಾಜಿ ಸಂಚಾಲಕ ಟಿ.ಶಂಕರ ಸುವರ್ಣ ಹೇಳಿದರು.
ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿ(ರಿ) ಮಂಗಳೂರು ಘಟಕದ ದಿನಾಂಕ 27.11.2018ರ ಸಾಪ್ತಾಹಿಕ ಸಭೆಯಲ್ಲಿ ನಡೆದ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮದ ಮಾಲಿಕೆ-2ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕರಾದ ಪ್ರದೀಪ್ ಎಸ್ ಆರ್ ರವರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ವಾರ್ಷಿಕ ಕಾರ್ಯಕ್ರಮದ ಮಾಹಿತಿ ನೀಡಿದರು, ಪ್ರತಿ ಘಟಕದವರು ಹೈಸ್ಕೂಲು ವಿದ್ಯಾರ್ಥಿಗಳಿಗೆ ಸಾಹಿತಿ ವಿಶುಕುಮಾರ್ ಬಗ್ಗೆ ರಸ ಪ್ರಶ್ನೆ, ಭಾಷಣ ಸ್ಪರ್ದೆ, ನಡೆಸಿ ವಿಜೇತ ವಿದ್ಯಾರ್ಥಿಗಳ ವಿವರವನ್ನು ಕೇಂದ್ರ ಸಮಿತಿಗೆ ಸಲ್ಲಿಸಬೇಕಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ನವೀನ್ ಚಂದ್ರ ವಹಿಸಿದ್ದರು, ನಿಕಟ ಪೂರ್ವ ಅಧ್ಯಕ್ಷ ರವೀಶ್ ಕುಮಾರ್, ಉಪಾದ್ಯಕ್ಷ ಲಕ್ಷ್ಮಿನಾರಾಯಣ, ಕಾರ್ಯದರ್ಶಿ ರಾಜೇಶ್ ಅಮೀನ್, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಜತೆ ಕಾರ್ಯದರ್ಶಿ ಅಮಿತಾ ಗಣೇಶ್, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಾಧು ಪೂಜಾರಿ ಮತ್ತು ಕಿಶೊರ್.ಕೆ.ಬಿಜೈ ಉಪಸ್ಥಿತರಿದ್ದರು.