ಪಣಂಬೂರು : ದೇವಸ್ಥಾನವನ್ನು ನಿರ್ಮಿಸಿ, ದೇವರನ್ನು ಪ್ರತಿಷ್ಟೆ ಮಾಡಿ ಶೋಷಿತ ಸಮಾಜಕ್ಕೆ ದೇವರನ್ನು ಕಾಣುವ ಭಾಗ್ಯವನ್ನು ಕರುಣಿಸಿ, ತಾನು ಗಳಿಸಿದ ಜ್ಞಾನದಿಂದ ಸಮಾಜ ಪರಿವರ್ತನೆಯನ್ನು ಮಾಡಿದ ಸಮಾಜ ಸುದಾರಕ, ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು. ಅವರ ತತ್ವಾದರ್ಶಗಳು ಅಂದಿಗೂ, ಇಂದಿಗೂ, ಮುಂದೆಯೂ ಅಳಿಯದ ಸಂದೇಶವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು.
ದಿನಾಂಕ 21.10.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ಕುಳಾಯಿ ಮೂಡುಬೆಟ್ಟು ತುಕಾರಾಮ ಕರ್ಕೇರರವರ ಮನೆಯಲ್ಲಿ ಜರಗಿದ ಬಿಲ್ಲವ ಸಮಾಜ ಮತ್ತು ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ತುಕಾರಾಮ ಕರ್ಕೇರರವರ ಹಿರಿಯ ಸಹೋದರ ಚಂದ್ರಹಾಸ ಕರ್ಕೇರ ಇವರು ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವವಾಹಿನಿ ಸಂಘಟನೆಯು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿ ಯುವಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿಯವರು ಯುವವಾಹಿನಿ ಮತ್ತು ಸಂಘಟನೆ ಎಂಬ ವಿಚಾರದಲ್ಲಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಹಾಗೂ ಸದಸ್ಯರಾದ ಗಿರಿಯಪ್ಪ ಪೂಜಾರಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು. ಯುವವಾಹಿನಿ (ರಿ) ಪಣಂಬೂರು ಘಟಕದ ಅದ್ಯಕ್ಷ ಜಗದೀಶ ಸುವರ್ಣ ಸ್ವಾಗತಿಸಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರವಿಚಂದ್ರರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು