ಕಂಕನಾಡಿ : 2018ರ ಅಕ್ಟೋಬರ್ 21ರಿಂದ24 ರವರೆಗೆ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ ನಾರಾಯಣ ಗುರುಗಳ ತತ್ವಾದರ್ಶದಂತೆ ಜಾತಿ, ಮತ ಭೇದವಿಲ್ಲದೆ ಕಂಕನಾಡಿ ಘಟಕದ ಸದಸ್ಯರು ಹಾಗೂ ಇತರರು ಸೇರಿ ಒಟ್ಟು 53 ಸದಸ್ಯರು ಈ ಒಂದು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಶಿವಗಿರಿ ಮಠದ ಪೂಜ್ಯ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾರಾಯಣ ಗುರುಗಳ ಮಹಾ ಸಮಾಧಿ, ಕೆಲವು ಐತಿಹಾಸಿಕ ಸ್ಥಳಗಳು, ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಮಣ್ಯ ದೇವಸ್ಥಾನ , ಅರವಿಪುರಂ ದೇವಸ್ಥಾನ , ಕನ್ಯಾಕುಮಾರಿಯ ದೇವಿದರ್ಶನ, ಮರುತಮಲೈ ಬೆಟ್ಟ , ಕನ್ಯಾಕುಮಾರಿ ವಿವೇಕಾನಂದ ರಾಕ್ ಹಾಗೂ ಅನಂತ ಪದ್ಮನಾಭನ ದರ್ಶನದೊಂದಿಗೆ ಯಾತ್ರೆ ಸಮಾಪನ ಗೊಂಡಿತು.
ಘಟಕದ ಅಧ್ಯಕ್ಷರಾದ ಭವಿತ್ ರಾಜ್ ಹಾಗೂ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಗೋಪಾಲ. ಎಂ.ಪೂಜಾರಿ ಇವರ ಸಂಚಾಲಕತ್ವದಲ್ಲಿ ಯಾತ್ರೆಯು ಯಶಸ್ವಿಗೊಂಡಿತು .