ಬಜಪೆ : ದಿನಾಂಕ 03.10.2018 ರಿಂಡ್ 05.10.2018 ರವರೆಗೆ ಯುವವಾಹಿನಿ (ರಿ ) ಬಜಪೆ ಘಟಕದ ವತಿಯಿಂದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 48 ಸದಸ್ಯರು ಈ ಒಂದು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಶಿವಗಿರಿ ಮಠದ ಪೂಜ್ಯ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾರಾಯಣ ಗುರುಗಳ ಮಹಾ ಸಮಾಧಿ, ಕೆಲವು ಐತಿಹಾಸಿಕ ಸ್ಥಳಗಳು, ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಮಣ್ಯ ದೇವಸ್ಥಾನ, ಅರವಿಪುರಂ ದೇವಸ್ತಾನ, ಕನ್ಯಾಕುಮಾರಿಯ ದೇವಿ ದರ್ಶನ, ಮಾರುತಮಲೈ ಬೆಟ್ಟ, ಕನ್ಯಾಕುಮಾರಿ, ಅನಂತ ಪದ್ಮನಾಭ ದರ್ಶನದೊಂದಿಗೆ ಯಾತ್ರೆ ಸಮಾಪನಗೊಂಡಿತು .
ಘಟಕದ ಅಧ್ಯಕ್ಷರಾದ ದೇವರಾಜ್ ಅಮೀನ್, ನಾರಾಯಣ ಗುರು ತತ್ತ್ವ ಪ್ರಚಾರ ನಿರ್ದೆಶಕ ಮಾಧವ ಸಾಲ್ಯಾನ್ ಹಾಗೂ ರಾಜೇಶ್ ಅಡ್ಕಬಾರೆ ಇವರ ಸಂಚಾಲಕತ್ವದಲ್ಲಿ ಯಾತ್ರೆಯು ಯಶಶ್ವಿ ಗೊಂಡಿತು .
A pilgrimage with good thoughts