ಪಣಂಬೂರು : ಬ್ರಹ್ಮಶ್ರೀ ನಾರಾಯಣಗುರುಗಳು ಸನಾತನ ಪರಂಪರೆ, ಧ್ಯಾನ, ತಪಸ್ಸನ್ನು ಪ್ರತಿಪಾದಿಸಿದ್ದರು. ಈ ಮೂಲಕ ಸಮಾಜದಲ್ಲಿ ಆ ಕಾಲದಲ್ಲಿದ್ದ ಅಸ್ಪ್ರಶ್ಯತೆ, ಅಂಧಶ್ರದ್ಧೆ ಮೊದಲಾದ ಸಮಸ್ಯೆಗಳ ಬಗ್ಗೆ ಕ್ರಾಂತಿಕಾರಿ ಬದಲಾವಣೆ ತರಲು ಯತ್ನಿಸಿದ್ದರು. ತಪಸ್ಸನ್ನು ಆಚರಿಸಿ ಭಗವತ್ ಸಾಕ್ಷಾತ್ಕಾರವನ್ನು ಪಡೆದು ಸಮಾಜ ಪರಿವರ್ತನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದರು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು.
ದಿನಾಂಕ 07.10.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ಎಂ ಟಿ ಸಾಲ್ಯಾನ್ ಕುಳಾಯಿ ಅವರ ದೋಟ ಮನೆಯಲ್ಲಿ ಜರಗಿದ ಬಿಲ್ಲವ ಸಮಾಜ ಮತ್ತು ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನ ವಿಚಾರಗೋಸ್ಟಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಮಾಜಿ ಅಧ್ಯಕ್ಷ ಎಂ ಟಿ ಸಾಲ್ಯಾನ್ ದೋಟ ಮನೆ ಕುಳಾಯಿ ಇವರು ನಾರಾಯಣಗುರುಗಳ ಬಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಲ್ಲವರು ಸೇರಿದಂತೆ ಹಿಂದುಳಿದ ವರ್ಗಗಳ ಪ್ರಗತಿಗೆ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರೇರಣೆಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ ಪ್ರಚಾರಕ್ಕೆ ಯುವವಾಹಿನಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು. ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿಯವರು ಪ್ರಸ್ತಾವಿಸಿದರು. ಯುವವಾಹಿನಿ ಮತ್ತು ಸಂಘಟನೆ ಎಂಬ ವಿಚಾರದಲ್ಲಿ ಮಾಹಿತಿ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಹಾಗೂ ಸದಸ್ಯರಾದ ಗಿರಿಯಪ್ಪ ಪೂಜಾರಿ, ಮಾಜಿ ಕಾರ್ಪೊರೇಟರ್ ವೇದಾವತಿ ಮತ್ತತರರು ಉಪಸ್ಥಿತರಿದ್ದರು. ಯುವವಾಹಿನಿ (ರಿ) ಪಣಂಬೂರು ಘಟಕದ ಅದ್ಯಕ್ಷ ಜಗದೀಶ ಸುವರ್ಣ ಸ್ವಾಗತಿಸಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪದ್ಮನಾಭ ಮರೋಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.