ಮೂಡಬಿದಿರೆ : ತುಳುನಾಡಿನ ಕೌಟುಂಬಿಕ ಭಾಂದವ್ಯ ಅತ್ಯಂತ ಶಕ್ತಿಯುತ ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಕೌಟುಂಬಿಕ ಭಾಂದವ್ಯವಾಗಲಿ, ನೆರೆ ಮನೆಯ ಸಂಬಂಧಗಳಲ್ಲಿ ದಿನೇ ದಿನೇ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಯಂತ್ರ ಮತ್ತು ವಾಣಿಜ್ಯ ಪರತೆ ಮನುಷ್ಯನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ, ಇದು ಅನೇಕ ಅತೃಪ್ತಿ ಮತ್ತು ಅತಂಕಕ್ಕೆ ಕಾರಣವಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ತಿಳಿಸಿದರು.
ಅವರು ಸಿದ್ದಕಟ್ಟೆ ಸಮೀಪದ ಪಡು ಪಾಲ್ಜಲ್ ಗುತ್ತು ಮನೆಯ ಅಂಗಣದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಮೂಡಬಿದಿರೆಯ ಘಟಕದ ವತಿಯಿಂದ ದಿನಾಂಕ 28.10.2018ರಂದು ನಡೆದ “ಸ್ನೇಹ ಸಮ್ಮಿಲನ ” ಎಂಬ ವಿನೂತನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಬದುಕಿನ ಅಪೂರ್ವ ಸಂದರ್ಭವಾಗಿರುವ ಮದುವೆ ಕಾರ್ಯಕ್ರಮಗಳು ಕುಡಿತ, ಕುಣಿತಗಳಲ್ಲಿ ವಿಜ್ರಂಬಿಸುತ್ತಿರುವುದು ಸಮಾಜದ ಸ್ವಾಸ್ತ್ಯ ಕೆಡಿಸುವ ವಿಕೃತಿಗಳನ್ನು ನಿಲ್ಲಿಸಬೇಕಾದ ತುರ್ತು ಪರಿಸ್ಥಿತಿ ಇದೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಮೆಸ್ಕಾಂ ಇಲಾಖೆಯ ಅಭಿಯಂತರ ಜಯನಂದ ಮಾತನಾಡಿ ತುಳುನಾಡಿನ ಗುತ್ತಿನ ಮನೆಗಳಲ್ಲಿ ಪಡು ಪಾಲ್ಜಲ್ ಮನೆತನಕ್ಕೆ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ ಇದೆ. ಇತಿಹಾಸವನ್ನು ಅರಿತವರಿಂದ ಮಾತ್ರ ಭವಿಷ್ಯವನ್ನು ನಿರ್ಮಿಸಲು ಸಾಧ್ಯ ಎಂದರು.
ಸಿದ್ದಕಟ್ಟೆ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ್ ಬಂಗೇರ, ಪಡು ಪಾಲ್ಜಲ್ ಮನೆಯ ಹಿರಿಯರಾದ ವರದರಾಜ್, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು, ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಟಿ. ಶಂಕರ್ ಸುವರ್ಣ, ಜಯರಾಮ್ ಕಾರಂದೂರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ದ.ಕ.ಜಿ.ಪ ಸದಸ್ಯ ಧರಣೇಂದ್ರ ಕುಮಾರ್, ಆರಂಬೋಡಿ ಗ್ರಾ.ಪಂ ಸದಸ್ಯ ಹರೀಶ್ ಕುಮಾರ್, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಸುವರ್ಣ ಅಲೆತ್ತೂರು, ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.
ಮೂಡಬಿದಿರೆ ಯುವವಾಹಿನಿ ಘಟಕ ಸಂಘಟನಾ ನಿರ್ದೇಶಕರಾದ ಹರೀಶ್.ಪಿ ಸ್ವಾಗತಿಸಿದರು. ಮೂಡಬಿದಿರೆ ಯುವವಾಹಿನಿ ಘಟಕ ಅಧ್ಯಕ್ಷರಾದ ರಾಜೇಶ್ ಡಿ. ಕೋಟ್ಯಾನ್ ವಂದಿಸಿದರು. ಪಡು ಪಾಲ್ಜಾಲ್ ಗುತ್ತಿನ ಮನೆಯ ಕುಟುಂಬಿಕ ಸದಸ್ಯರು ಹಾಗೂ ಆಳ್ವಾಸ್ ಕಾಲೆಜ್ ನ ಉಪನ್ಯಾಸಕ ಗುಣ ಪ್ರಸಾದ್ ಕಾರಂದೂರು ಕಾರ್ಯ ಕ್ರಮವನ್ನು ನಿರೂಪಿಸಿದರು.
ವಸ್ತು ಪ್ರದರ್ಶನ / ಗ್ರಾಮೀಣ ಅಡುಗೆಯ ಸೊಗಡು:-
ಪಡು ಪಾಲ್ಜಲ್ ಗುತ್ತು ಮನೆಯಲ್ಲಿ ಅನಾದಿಕಾಲದಿಂದಲೂ ಉಪಯೋಸುತ್ತಿದ್ದ ಮಣ್ಣಿನ, ಕಂಚಿನ ಹಾಗೂ ತಾಮ್ರದ ಪರಿಕರಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.ಹಾಗೂ ತುಳುನಾಡಿನ ಪ್ರಕೃತಿ ಮೂಲದ ಸಾಂಪ್ರದಾಯಿಕ ಅಡುಗೆಯ ಪ್ರಾತ್ಯಾಕ್ಚಿಕೆ ಪ್ರದರ್ಶನ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸಿದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು.