ದಿನಾಂಕ 16-11-2016 ರಂದು ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಕೂಳೂರು ಘಟಕದ ಅಧ್ಯಕ್ಷ ಸುಜಿತ್‌ರಾಜ್ ಐ.ರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಶ್ರೀಮತಿ ಐ. ಸುಶೀಲಾ ಇವರು ಮಾಹಿತಿ ನೀಡಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಭಾವಚಿತ್ರ ಸ್ಪರ್ಧೆಯು ಶ್ರೀಮತಿ ರೇಣುಕಾ ಪ್ರಸಾದ್ ಹಾಗೂ ಶ್ರೀಮತಿ ಪ್ರಿಯಾ ಇವರ ಸಂಚಾಲಕತ್ವದಲ್ಲಿ ಸಾಂಪ್ರದಾಯಿಕ ಸಾಮಾನ್ಯ ಹಾಗೂ ಆಧುನಿಕ ಈ ರೀತಿ ಮೂರು ವಿಭಾಗದಲ್ಲಿ ನೆರವೇರಿತು. ವಿಜೇತರಿಗೆ ಬಹುಮಾನ ನೀಡಿ ಸತ್ಕರಿಸಿದರು. ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಾಲ ಬಹುಮುಖ ಪ್ರತಿಭೆ ಎಂದು ಗುರುತಿಸಿಕೊಂಡ ಬೇಬಿ ರಕ್ಷಿತಾರನ್ನು ಗೌರವಿಸಿ ಸನ್ಮಾನಿಸಲಾಯಿತು. ಅವರು ತನ್ನ ನೃತ್ಯ ಹಾಗೂ ಸಂಗೀತದಿಂದ ಎಲ್ಲರ ಮನ ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿ, ಸಲಹೆಗಾರರಾದ ಜಿ. ಪರಮೇಶ್ವರ ಪೂಜಾರಿ, ಕೇಂದ್ರ ಸಮಿತಿ ಉಪಾಧ್ಯಕ್ಷ ಯಶವಂತ್ ಪೂಜಾರಿ, ಭಾವಚಿತ್ರ ಸ್ಪರ್ಧೆಯ ತೀರ್ಪುಗಾರರಾದ ಲಕ್ಷ್ಮೀ ನಾರಾಯಣ ಹಾಗೂ ದಯಾನಂದ, ಮಂಗಳೂರು ಘಟಕದ ಅಧ್ಯಕ್ಷ ಸುನೀಲ್ ಅಂಚನ್ ಹಾಗೂ ರವೀಂದ್ರನಾಥ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಪ್ರಿಯಾ ವಂದಿಸಿದರು. ಪ್ರತೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿಗಳಲ್ಲಿ ಸಭ್ಯತೆ ಹಾಗೂ ಸಂಸ್ಕಾರದಲ್ಲಿ ಹೆತ್ತವರ ಪಾತ್ರ
ದಿನಾಂಕ 2-11-2016 ರಂದು ಕೂಳೂರು ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ಸಭ್ಯತೆ ಹಾಗೂ ಸಂಸ್ಕಾರದಲ್ಲಿ ಹೆತ್ತವರ ಪಾತ್ರ ಎಂಬ ಕಾರ್ಯಾಗಾರ ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾ| ರಾಧಕೃಷ್ಣರವರು ಸದಸ್ಯರಿಗೆ ಮಕ್ಕಳ ಬೆಳವಣಿಗೆ ಹಾಗೂ ಸಂಸ್ಕಾರದಲ್ಲಿ ಹೆತ್ತವರ ಪಾತ್ರ ಎಷ್ಟು ಅಗತ್ಯವಾದುದು ಎಂಬುದನ್ನು ಮನವರಿಕೆ ಮಾಡಿದರು. ಅಧ್ಯಕ್ಷ ಸುಜಿತ್‌ರಾಜ್ ಸ್ವಾಗತಿಸಿದರು. ಕಾರ್‍ಯದರ್ಶಿ ದೀಕ್ಷಿತ್ ವಂದಿಸಿದರು.
ದಿನಾಂಕ 19-11-2016 ರಂದು ಕೂಳೂರು ಘಟಕ ಮತ್ತು ಮಂಗಳೂರು ಘಟಕ ಇದರ ಜಂಟಿ ಆಶ್ರಯದಲ್ಲಿ ಕೂಳೂರು ಪ್ರೌಢಶಾಲೆ ಕೂಳೂರು ಇವರ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಾ ತಯಾರಿ ಕಾರ್ಯಾಗಾರವನ್ನು ಕೂಳೂರು ಪ್ರೌಢಶಾಲೆಯಲ್ಲಿ ಜರಗಿತು. ಮಂಗಳೂರು ಘಟಕದ ಅಧ್ಯಕ್ಷ ಸುನೀಲ್ ಅಂಚನ್ ಮತ್ತು ಕೂಳೂರು ಘಟಕದ ಉಪಾಧ್ಯಕ್ಷ ಪುಷ್ಪರಾಜ್, ಕೇಂದ್ರ ಸಮಿತಿ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿ ಮತ್ತು ಕೂಳೂರು ಪ್ರೌಢಶಾಲೆ ಮುಖ್ಯ ಶಿಕ್ಷಕಿ ವಿನಿಫ್ರೆಡ್ ಪತ್ರಾವೋ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕು. ಮೊನಿಷಾ ಪೂಜಾರಿ ಇವರು ವಿದ್ಯಾರ್ಥಿಗಳಿಗೆ ’ಪರೀಕ್ಷಾ ಪೂರ್ವ ಸಿದ್ಧತೆ’ ಯಾವ ರೀತಿ ಮಾಡಬೇಕೆಂಬ ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸಂಘಟನೆ ನಿರ್ದೇಶಕ ಲೋಕೇಶ್ ಕೋಟ್ಯಾನ್ ವಂದಿಸಿದರು. ಲಕ್ಷ್ಮೀನಾರಾಯಣ ಕಾರ್‍ಯಕ್ರಮ ನಿರೂಪಿಸಿದರು.