ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 05/09/2018 ರಂದು ಬುಧವಾರ ಸಂಜೆ 7 ಗಂಟೆಗೆ ಸಭೆಯ ನಂತರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ವಹಿಸಿದ್ದರು . ವೇದಿಕೆಯಲ್ಲಿ ಮುಖ್ಯ ಅತಿಥಿಯಾದ ಕೂಳೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸೆಲಿನ್ ರಾಡ್ರಿಗಸ್ , ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ,ನಮ್ಮ ಘಟಕದ ಗೌರವ ಸಲಹೆಗಾರರಾದ ನೇಮಿರಾಜ್, ಕಾರ್ಯದರ್ಶಿ ಪವಿತ್ರ ಅಂಚನ್ ಹಾಗೂ ಸಂಚಾಲಕರಾದ ವಿನೀತ್ ಕುಮಾರ್ ಇವರು ಉಪಸ್ಥಿತರಿದ್ದರು . ಕಾರ್ಯದರ್ಶಿ ಎಲ್ಲರನ್ನು ಸ್ವಾಗತಿಸಿದರು . ಸಭೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಭಿನಂದನೆಯನ್ನು ಸ್ವೀಕರಿಸಲಿರುವ ಶಿಕ್ಷಕಿಯರಾದ ಕೂಳೂರು ಪ್ರೌಢ ಶಾಲಾ ಶಿಕ್ಷಕಿ ಸೌಮ್ಯಾಲತಾ ಬಂಗೇರ , ಅಂಗನವಾಡಿ ಶಿಕ್ಷಕಿ ಪಿಆರ್ ಹರಿಣಾಕ್ಷಿ ,ಹಾಗೂ ಇನ್ನೋರ್ವ ಶಿಕ್ಷಕಿ ಸುಶೀಲಾ ಐ ಇವರು ಉಪಸ್ಥಿತರಿದ್ದರು .ಹಾಗೂ ಘಟಕದ ಸ್ಥಾಪಕ ಅಧ್ಯಕ್ಷ ರಾದ ಸುಜಿತ್ ರಾಜ್, ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ , ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ತುಕರಾಮ ಪೂಜಾರಿ ,ಪದ್ಮನಾಭ ಮರೋಳಿ ಇವರು ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು .
ಮುಖ್ಯ ಅತಿಥಿಯಾದ ಸೆಲಿನ್ ರಾಡ್ರಿಗಸ್ ಇವರು ದೀಪ ಬೆಳಗಿಸಿ ಸರ್ವಪಲ್ಲಿ ರಾಧಾಕೃಷ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಘಟಕದ ಸದಸ್ಯೆಯಾದ ಸುಷ್ಮಾ ಇವರು ಸರ್ವಪಲ್ಲಿ ರಾಧಾಕೃಷ್ಣ ಅವರ ಜೀವನ ಚರಿತ್ರೆಯನ್ನು ಸಭೆಯ ಮುಂದಿಟ್ಟರು .ಬಳಿಕ ಅಂದಿನ ಮುಖ್ಯ ಅತಿಥಿಯಾದ ಸೆಲಿನ್ ರಾಡ್ರಿಗಸ್ ಹಾಗೂ ಉಳಿದ ಶಿಕ್ಷಕರಾದ ಸೌಮ್ಯಲತಾ ಬಂಗೇರ, ಪಿಆರ್ ಹರಿಣಾಕ್ಷಿ ಹಾಗೂ ಸುಶೀಲಾ ಇವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು .ಬಳಿಕ ಮುಖ್ಯ ಅತಿಥಿ ಆದಂತಹ ಸೆಲಿನ್ ರಾಡ್ರಿಗಸ್ ಅವರು ಮಾತನಾಡಿ 11 ವರ್ಷಗಳ ಕಾಲ ತಾವು ಕೂಳೂರು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದು ತನ್ನದೇ ವಿದ್ಯಾರ್ಥಿಗಳು ಯುವವಾಹಿನಿ ಘಟಕದಲ್ಲಿ ಸೇರಿ ಇಂದು ತಮ್ಮನ್ನು ನೆನಪಿಸಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮ್ಮನ್ನು ಅಭಿನಂದಿಸಿದ ಅವರ ಪ್ರೀತಿ ವಾತ್ಸಲ್ಯಕ್ಕೆ ಚಿರರುಣಿ ಎಂದರು . ಕಾರ್ಯಕ್ರಮದಲ್ಲಿ ಸದಸ್ಯರ ಆತ್ಮೀಯತೆ ,ಪ್ರೀತಿ ಖುಷಿ ತಂದಿತು ಎಂದರು .ಹಾಗೂ ಘಟಕದ ಸದಸ್ಯರಲ್ಲದೆ ತಮ್ಮ ಹಳೆ ವಿದ್ಯಾರ್ಥಿಗಳು ಕೂಡ ಇಲ್ಲಿ ಸೇರಿರುವುದು ತುಂಬಾ ಸಂತೋಷದ ವಿಷಯ ಎಂದರು .ಇಂದಿನ ಈ ಕಾರ್ಯಕ್ರಮದಲ್ಲಿ ಈ ನಾಲ್ಕು ಶಿಕ್ಷಕರ ಹಳೆ ವಿದ್ಯಾರ್ಥಿಗಳು ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ,ಅವರು ಕೂಡ ತಮ್ಮ ವತಿಯಿಂದ ಶಿಕ್ಷಕರಿಗೆ ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು .ಮುಖ್ಯ ಅತಿಥಿಯಾಗಿ ಆಗಮಿಸಿ ದಂತಹ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಮಾತನಾಡಿ ಶುಭ ಹಾರೈಸಿದರು .
ಸುಜಿತ್ ರಾಜ್ ಕಾರ್ಯಕ್ರಮ ನಿರೂಪಿಸಿದರು .ಸಂಚಾಲಕರಾದ ವಿನೀತ್ ಕುಮಾರ್ ವಂದಿಸಿದರು .