ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ದಿನಾಂಕ 16.09.2018 ರಂದು ನಡೆದ ಶಿವಗಿರಿಯಾತ್ರೆ ಯಶಸ್ವಿಯಾಗಿ ನಡೆಯಿತು . ಮಂಗಳೂರಿನಿಂದ ರೈಲಿನ ಮೂಲಕ ಹೊರಟ ಯುವವಾಹಿನಿಯ ಯಾತ್ರಾ ತಂಡವನ್ನು ವರ್ಕಳ ರೈಲು ನಿಲ್ದಾನದಲ್ಲಿ ಶಿವಗಿರಿ ಮಠದ ಪೂಜ್ಯ ಸತ್ಯಾನಂದತೀರ್ಥ ಶ್ರೀಗಳು ಸ್ವಾಗತಿಸುವ ಮೂಲಕ ಯಾತ್ರೆಯು ಆರಂಭವಾಯಿತು. ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಗಿರಿಯಲ್ಲಿ ನ ನಾರಾಯಣಗುರುಗಳ ಮಹಾಸಮಾಧಿ ಮತ್ತು ಕೆಲ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದೆವು. ಆ ಬಳಿಕ ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಹ್ಮಣ್ಯ ದೇವಾಲಯ, ನಾರಾಯಣಗುರುಗಳೇ ತನ್ನ ಕಯ್ಯಾರೆ ಪ್ರತಿಷ್ಟಾಪಿಸಿದ (ಶಿವಲಿಂಗ) ಅರಿವೀಪುರ ದೇವಸ್ಥಾನ ಸಂದರ್ಶನವೂ ಆಯಿತು. ನಂತರ ಕನ್ಯಾಕುಮಾರಿಯ ಶ್ರೀ ದೇವಿಯ ದರ್ಶನ ಮತ್ತು ವಿಶೇಷ ಪೂಜೆಯ ದರ್ಶನದ ವಿಶೇಷ ಅನುಭವವೂ ದೊರಕಿತು. ಮರುದಿನ ಬೆಳ್ಳಂಬೆಳಗ್ಗೆ ಗುರುಗಳು 6 ವರ್ಷ ತಪಗೈದ ಮರುತ ಮಲೈ ಬೆಟ್ಟ ಹತ್ತುವ ಮೂಲಕ ವಿಶೇಷ ಅನುಭವದೊಂದಿಗೆ ಗುರುಗಳ ಅನುಗ್ರಹಕ್ಕೆ ಯತ್ರಾರ್ಥಿಗಳು ಪಾತ್ರರಾದರು , ಬಳಿಕ ಕನ್ಯಾಕುಮಾರಿಯ ವಿವೇಕಾನಂದ ಬಂಡೆಗೆ ತೆರಳಿ ಕನ್ಯಾಕುಮಾರಿಯ ಒಂಟಿಕಾಲಿನ ದರ್ಶನ ಮತ್ತು ಅಲ್ಲಿಂದಲೇ ಭಾರತ ದರ್ಶನವೂ ಆದಂತಾಯಿತು. ತ್ರಿವೇಣಿ (ಅರಬ್ಬೀ,ಹಿಂದೂ,ಬಂಗಾಳಕೊಲ್ಲಿ ಸಮುದ್ರ) ಸಂಗಮನ್ನೂ ಕಣ್ತುಂಬಿಸಿಕೊಳ್ಳುವಂತಾಯಿತು. ಬಳಿಕ ತಿರುವಂಕೂರಿನ ಒಡೆಯ ಅನಂತ ಪದ್ಮನಾಭನ ದರ್ಶನದೊಂದಿಗೆ ಯಾತ್ರೆ ಸಮಾಪನಗೊಂಡಿತು.
ಯುವವಾಹಿನಿ (ರಿ)ಮಂಗಳೂರು ಘಟಕದ ಅಧ್ಯಕ್ಷ ನವೀನ ಚಂದ್ರ ಹಾಗೂ ಘಟಕದ ಸದಸ್ಯರಾದ ಸದಾನಂದ ಕುಳಾಯಿಯವರ ಸಂಚಾಲಕತ್ವದಲ್ಲಿ ಒಟ್ಟು 2 ದಿನಗಳ ಕಾಲ ನಡೆದ ಈ ತೀರ್ಥಯಾತ್ರೆಯಲ್ಲಿ ಸಾಹಿತಿ, ಪತ್ರಕರ್ತರು, ಉದ್ಯಮಿಗಳು, ಉದ್ಯೋಗಿಗಳು, ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಬಾರಿ ಯುವಕರು ಹೆಚ್ಚು ಪಾಲ್ಗೊಂಡಿದ್ದರಿಂದ ಯಾತ್ರೆಯ ಉತ್ಸಾಹ ಇಮ್ಮಡಿಗೊಂಡಿದ್ದಂತೂ ಸುಳ್ಳಲ್ಲ. ಯಾತ್ರೆ ಪೂರ್ತಿ ಸ್ವಾಮೀಜಿಗಳು ಗುರುಗಳ ಜೀವನ ಚರಿತ್ರೆ ಸ್ಥಳಗಳ ಮಹತ್ವವನ್ನು ತಿಳಿಸಿದ್ದರಿಂದ ಬಂದವರಿಗೆಲ್ಲ ಅಧ್ಯಯನ ಪ್ರವಾಸದ ಅನುಭವವಾದಂತಾಯಿತು.ಎಲ್ಲಾ ಯತ್ರಾರ್ಥಿಗಳ ಸಹಕಾರದಿಂದ ಯಾತ್ರೆಯು ಯಶಸ್ವಿಯಾಗಿ ಸಮಾಪನ ಗೊಂಡಿತು
Very well managed by Yuvavahini Mangalore Chapter. It was very informative, very joyful, very interactive.. Thank you so much for making me a part of this wonderful journey.
ನಮ್ಮ ಈ ಯಾತ್ರೆ ಒಂದು ಅಧ್ಯಯನ ಯಾತ್ರೆ ಆಗಿತ್ತು .
ನಾರಾಯಣ ಗುರು ಸ್ವಾಮಿಗಳ ಸಾಮಾಜಿಕ ಕ್ರಾಂತಿಯ ಸಂಫೂರ್ಣ ಮಾಹಿತಿಯನ್ನು ಶಿವಗಿರಿ ಮಠದ ಶ್ರೀ ಗಳಾದ ಸತ್ಯಾನಂದ ತೀರ್ಥ ಸ್ವಾಮಿಗಳು ಬಂದಂಥ ಎಲ್ಲರಿಗೂ ಸವಿವರವಾಗಿ ತಿಳಿಸಿದ್ದಾರೆ. ಮರುತ್ತ ಮಲೆ ಬೆಟ್ಟದ ಮೇಲಿನ ಅನುಭವ ಬಹಳ ವಿಶೇಷ ವಾಗಿತ್ತು. ಎಲ್ಲ ರೂ ರೋಮಾಂಚನಗೊಂಡಿದ್ದರು…ಕನ್ಯಾ ಕುಮಾರಿ ಮತ್ತು ಅನಂತ ಪದ್ಮನಾಭ ದೇಗುಲದ ದರ್ಶನದೊಂದಿಗೆ ಯಾತ್ರೆಯು ಯಶಸ್ವಿಯಾಗಿ ಸಮಾಪನೆಗೊಂಡಿತು.
ಈ ಶಿವಗಿರಿ ಯಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿದ ಯುವವಾಹಿನಿಯ ಸರ್ವ ಸದಸ್ಯರಿಗೆ ಅಭಿನಂದನೆಗಳು