ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕದ ವತಿಯಿಂದ ದಿನಾಂಕ 09/09/2018 ರಂದು ಕ್ಷೇತ್ರ ದರ್ಶನ ವನ್ನು ಹಮ್ಮಿಕೊಳ್ಳಲಾಗಿತ್ತು.
ಘಟಕದ ಅಧ್ಯಕ್ಷ ಗಣೇಶ್ ಅರ್ಬಿ ಪ್ರವಾಸಕ್ಕೆ ಚಾಲನೆ ನೀಡಿದರು.60 ಜನ ಸದಸ್ಯ ರನ್ನು ಒಳಗೊಂಡ ತಂಡವು ಬೆಳಿಗ್ಗೆ 6 ಗಂಟೆಗೆ ಗುರುಸ್ಮರಣೆ ಯೊಂದಿಗೆ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇಲ್ಲಿಂದ ಹೊರಟಿತು.6:45 ಕ್ಕೆ ಮುಲ್ಕಿ ತಲುಪಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದು, ಬೆಳಿಗ್ಗಿನ ಉಪಹಾರವನ್ನು ಮುಗಿಸಿ 8:45 ಕ್ಕೆ ಉಡುಪಿ ತಲುಪಿದೆವು.
ಶ್ರೀ ಕೃಷ್ಣ ದೇವರ ದರ್ಶನ ಪಡೆದು ಅಲ್ಲಿಂದ ಹೊರಟು 10:30 ಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತಲುಪಿದೆವು. ದೇವರ ದರ್ಶನ ಪಡೆದು ಹೊರಟ ತಂಡವು 11:30 ಕ್ಕೆ ಗುಡ್ಡೆಟ್ಟು ಶ್ರೀ ಸಿದ್ದಿವಿನಾಯಕ ದೇವಸ್ಥಾನ ತಲುಪಿತು.ಅಲ್ಲಿ ಯುವವಾಹಿನಿ(ರಿ.) ಯಡ್ತಾಡಿ ಘಟಕ ದ ಸದಸ್ಯ ಅಮೃತ್ ರವರ ಮಾರ್ಗದರ್ಶನದಲ್ಲಿ ದೇವರ ದರ್ಶನ ಪಡೆದು ಅವರೊಂದಿಗೆ ಸಮೀಪದ ಪಡುಮುಂಡು ಗ್ರಾಮದ ಪ್ರಾಕೃತಿಕ ಕಲ್ಲು ಬಂಡೆಗಳ ಚಾವಣಿಯ ಅಡಿಯಲ್ಲಿ ರುವ ಉಮಾಮಹೇಶ್ವರ ಕಲ್ಲುಗಣಪ ದೇವರ ದರ್ಶನ ಪಡೆದೆವು. ಅಲ್ಲಿನ ನಿಸರ್ಗ ಸೌಂದರ್ಯ ಹಾಗೂ ಬಂಡೆಗಳ ವಿಸ್ಮಯ ತೆಯನ್ನು ಕಂಡು ಪುಳಕಿತರಾದೆವು. ಅಮೃತ ರವರಿಗೆ ಕೃತಜ್ಞತೆ ಸಲ್ಲಿಸಿ ಹೊರಟ ನಾವು 1:30 ಕ್ಕೆ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ತಲುಪಿದೆವು. ತಂಡದ ಸದಸ್ಯರ ದೇಣಿಗೆಯನ್ನು ಸಂಗ್ರಹಿಸಿ ₹.3250 ನ್ನು ಅನ್ನದಾನ ಕ್ಕಾಗಿ ದೇವಳದ ಕಚೇರಿಗೆ ನೀಡಿದೆವು.
ದೇವಿಯ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ,ಸಪ್ತಾರ್ಶ ಗುಹೆ ಯನ್ನು ಕಂಡು ವಿರಮಿಸಿದ ನಮ್ಮತಂಡವು 4:45 ಕ್ಕೆ ಕುಂಭಾಸಿ ಆನೆಗುಡ್ಡ ದೇವಸ್ಥಾನ ವನ್ನು ತಲುಪಿತು.
ದೇವರ ದರ್ಶನ ಪಡೆದು 6 ಗಂಟೆಗೆ ಮಲ್ಪೆ ಕಡಲ ತೀರ ತಲುಪಿದೆವು. ಸೂರ್ಯಾಸ್ತದ ವರ್ಣಮಯ ದೃಶ್ಯ ವನ್ನು ಕಂಡು ಹೊರಟ ನಮ್ಮ ತಂಡವು 9 ಗಂಟೆಗೆ ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು ತಲುಪಿತು. ಪ್ರವಾಸದ ಸಂಚಾಲಕತ್ವವನ್ನು ಪ್ರಕಾಶ್ ಹಾಗೂ ಶ್ರೀಮತಿ ದಿವ್ಯ ರವರು ವಹಿಸಿದ್ದರು.