ಮಂಗಳೂರು : ಜಾಗತೀಕರಣದ ಪ್ರಭಾವ ಇಂದು ಎಲ್ಲೆಡೆ ವ್ಯಾಪಿಸುತ್ತಿದೆ. ಬದಲಾವಣೆ ಎಂಬುದು ಜೀವಂತ ಸಮಾಜದ ಲಕ್ಷಣ ಎಂಬುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಆದರೆ ಈ ಬದಲಾವಣೆಯ ಗತಿ ನಮ್ಮ ದೇಸಿ ನುಡಿ-ಸಂಸ್ಕೃತಿಯ ಬುಡ ಅಲುಗಾಡಿಸುವಂತಾಗಬಾರದು ಹೊಸತನ್ನು ಸ್ವೀಕರಿಸುತ್ತಲೇ ಈ ನೆಲದ ಜೀವನಮೌಲ್ಯ-ಕಲಾಮೌಲ್ಯಗಳು ಉಳಿಯುವಂತಾಗಬೇಕು. ತುಳುನಾಡಿನ ಹಬ್ಬ, ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲ ತಿಳಿಸಿದರು.
ಅವರು ದಿನಾಂಕ 15.09.2018 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಮಂಗಳೂರು ಇಲ್ಲಿ ನಡೆದ ಸೋಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆತ್ತವರ ಪ್ರೀತಿಯಿಂದ ವಂಚನೆ ಒತ್ತಡದ ಶಿಕ್ಷಣ ಪದ್ದತಿ ಅನಾಯಾಸವಾಗಿ ದೊರೆಯುವ ಸೌಲಭ್ಯಗಳು ಇವುಗಳಿಂದ ಮಕ್ಕಳು ತಮ್ಮ ಭವಿಷ್ಯವನ್ನು ಕಂಡು ಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಎಳೆತನದಲ್ಲಿಯೇ ಹತಾಶ ಭಾವನೆ ತಳೆಯುತ್ತಿದ್ದು ಅಪರಾದಿ ಮನೋಭಾವ ಹೆಚ್ಚುತ್ತಿದೆ.ಮಕ್ಕಳಿಗೆ ಕೇವಲ ಸೌಲಭ್ಯ ಒದಗಿಸಿ ಉಡುಗೊರೆ ಕೊಟ್ಟು ಬೆಳೆಸಿದರೆ ಅವರು ಬದುಕನ್ನು ಎದುರಿಸಲು ಸನ್ನದ್ಧರಾಗುವುದಿಲ್ಲ. ಅದರ ಬದಲಾಗಿ ಪ್ರೌತ್ಸಾಹ, ಪ್ರೀತಿ ಉತ್ತಮ ಸಂಸ್ಕಾರ ನೈತಿಕ ಮೌಲ್ಯಗಳನ್ನು ಧಾರೆ ಎರೆದು ಬೆಳೆಸಬೇಕಾದ ಅವಶ್ಯಕತೆ ಇದೆ ಎಂಬುದನ್ನು ತಿಳಿಯಬೇಕು. ಸಾಮಾಜಿಕ ಜಾಗೃತಿಯೊಂದೇ ಮಕ್ಕಳನ್ನು ಚೆನ್ನಾಗಿ ಬೆಳೆಸುವ ಕಾಳಜಿಯನ್ನು ಉಂಟು ಮಾಡುತ್ತದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವ ಮನಸ್ಸುಗಳಿಂದು ಬೇಕಾಗಿವೆ. ಮಕ್ಕಳು ಹೆಚ್ಚಾಗಿ ಅನುಕರಣೆ ಮೂಲಕ ಕಲಿಯುತ್ತಾರೆ.
ಜಂಕ ಫುಡ್ ಸೇವನೆ ಹೆಚ್ಚಿದ್ದು ಮಕ್ಕಳಲ್ಲಿ ಪೌಷ್ಠಿಕಾಂಶಗಳ ಕೊರತೆ ಹೆಚ್ಚಾಗಿ ಸದೃಢತೆ ಮೂಡುತ್ತಿಲ್ಲ. ಉದ್ಯೌಗಕ್ಕೆ ಹೋಗುವ ಅಪ್ಪ ಅಮ್ಮಂದಿರು ಟಿವಿ , ಮೊಬೈಲ್ ನೋಡುವ ಹಿರಿಯರ ಚಾಳಿ, ಆಳಿನೊಂದಿಗೆ ಹೆಚ್ಚಿನ ಸಮಯ ಕಳೆಯುವ ಪರಿಸ್ಥಿತಿ ಅವಿಭಕ್ತ ಕುಟುಂಬ ಇಲ್ಲದಿರುವುದು. ಹೀಗೆ ಹಲವಾರು ಕಾರಣಗಳಿಂದ ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ ಎಂದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಘಟಕದ ಸಲಹೆಗಾರ ಜಿತೇಂದ್ರ ಜೆ.ಸುವರ್ಣ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಳೆದೊಂದು ವರ್ಷದಿಂದ ಮಂಗಳೂರು ಮಹಿಳಾ ಘಟಕದ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಮಹಿಳಾ ಘಟಕದ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರ ಪ್ರಸ್ತಾವನೆ ಮೂಲಕ ಸ್ವಾಗತಿಸಿದರು. ಕಾರ್ಯದರ್ಶಿ ರವಿಕಲಾ ವೈ.ಅಮೀನ್ ವಂದಿಸಿದರು. ಕಾರ್ಯಕ್ರಮ ಸಂಚಾಲಕಿ ವಿದ್ಯಾ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.