ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಕೊಲ್ಯ ಬಿಲ್ಲವ ಸೇವಾ ಸಮಾಜ ಸಭಾಭವನದಲ್ಲಿ ದಿನಾಂಕ 05-09-2018 ರಂದು,
ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಸೋಮೇಶ್ವರ , ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ, ಯುವವಾಹಿನಿ (ರಿ) ಕೊಲ್ಯ ಘಟಕ ಸಂಸ್ಥೆಗಳಲ್ಲಿನ ಒಟ್ಟು ಹದಿಮೂರು ಜನ ಶಿಕ್ಷಕರನ್ನು ಈ ಸಂದರ್ಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು
ಯುವವಾಹಿನಿ (ರಿ) ಕೊಲ್ಯ ಘಟಕದ ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿಯಾದ ಸೌಜನ್ಯ ರವರು ಗುರು-ಶಿಷ್ಯರ ಸಂಬಂಧದ ಕುರಿತು ಸಿದ್ಧಪಡಿಸಿದ “ಶಿಕ್ಷಕರು ಮತ್ತು ಶಿಕ್ಷಣದ ಮಹತ್ವ”ದ ವರದಿಯನ್ನು ಸಭೆಯಲ್ಲಿ ಪ್ರಾಸ್ತಾಪಿಸಿದರು . ಗೌರವದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮಂಜೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ನಾರಾಯಣ ಪೂಜಾರಿಯವರು, ಶಿಕ್ಷಕರ ದಿನಾಚರಣೆಯಂದೆ ನನ್ನನ್ನು ಗುರುತಿಸಿ, ಅಂಗನವಾಡಿ ಶಿಕ್ಷಕರಿಂದ ಕಾಲೇಜು ಉಪನ್ಯಾಸಕರನ್ನು ಎಲ್ಲರನ್ನೂ ಒಟ್ಟುಗೂಡಿಸಿ, ನನ್ನನ್ನು ಸನ್ಮಾನಿಸಿದ್ದೀರಿ. ಈ ದಿನ ನನ್ನ ದೈನಂದಿನ ದಿನಚರಿಯ ಪುಟಗಳಲ್ಲಿ ಮರೆಯಲಾಗದ ನೆನಪಾಗಿ ದಾಖಲಾಗಲಿದೆ ಎಂದು ಭಾವಪರವಶವಾಗಿ ನುಡಿದರು.
ಶಿಕ್ಷಣ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ, ಗುರುಗಳಿಗೆ ಸಿಗುವ ಗೌರವಗಳು ಇಂದಿಗೂ ಸಿಗುತ್ತಿವೆ, ಆದರೆ ಜನರು ವ್ಯಕ್ತಪಡಿಸುವ ಭಾವನೆಗಳಲ್ಲಿ ಬದಲಾವಣೆಗಳಾಗಿವೆ. ಇಂದು ನಮ್ಮನ್ನು ಆಧರಿಸಿ, ಗೌರವಿಸಿ, ಸನ್ಮಾನಿಸಿ ಶಿಕ್ಷಕರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದೀರಿ ಎಂದು ಮೊಗವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಾಧ್ಯಾಯರಾದ ವೇದಾವತಿ ಕೋಟೆಕಾರು ಅಭಿಪ್ರಾಯ ವ್ಯಕ್ತಪಡಿಸಿದರು .
ಯೋಗ ಗುರುಗಳಾದ ಬಾಳಪ್ಪ ಪೂಜಾರಿ ಕನೀರುತೋಟ, ದೈಹಿಕ ಮತ್ತು ಕ್ರೀಡಾ ಶಿಕ್ಷಕರಾದ ಶ್ರೀ ಸಂದೀೀಪ್‍ರಾಜ್ ಮಾಡೂರು, ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಅಶ್ವಿನಿ ಯತೀಶ್ ವೆಂಕಹಿತ್ಲು, ಶಿಕ್ಷಕಿಯರಾದ ಚೈತ್ರ ಅಲೋಕ್, ರೇವತಿ ವಿಶ್ವನಾಥ್, ಕುಸುಮ ಕುಂಪಲ, ಬಬಿತ ಆನಂದ್ ಮಲಯಾಳಕೋಡಿ, ವತ್ಸಲ ರಘುರಾಮ್ ಸುವರ್ಣ ಕೊಲ್ಯ, ರಶ್ಮಿ ನೆತ್ತಿಲ, ಸೌಮ್ಯ ಯೋಗೀಶ್ ನೆತ್ತಿಲ ಮತ್ತು ಸೌಮ್ಯ ಕುಸುಮಾಕರ್‍ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡುತ್ತ, ಹಿಂದಿನ ಕಾಲದಲ್ಲಿ ಟ್ಯೂಷನ್ ಕ್ಲಾಸ್‍ಗಳಿಗೆ ಹೋಗದೆ ಕೇವಲ ಶಾಲೆಯಲ್ಲಿ ಗುರುಗಳು ಹೇಳಿದ ವಿದ್ಯೆಯನ್ನು ಕಲಿತು, ಅನೇಕ ವಿದ್ಯಾರ್ಥಿಗಳು ಉನ್ನತ ಪದವಿಯನ್ನು ಪಡೆದು, ಅತ್ಯುನ್ನತ್ತ ದರ್ಜೆಯ ಕೆಲಸದಲ್ಲಿದ್ದರು. ಆದರೆ ಇಂದು, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ಟ್ಯೂಷನ್ ಎಂಬುವುದು ಹೆಚ್ಚುವರಿ ಹೊರೆಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಬಿ, ಉಪಾಧ್ಯಕ್ಷರುಗಳಾದ ಸವಿತಾ ಸಂತೋಷ್ ಮತ್ತು ಸುಂದರ್ ಸುವರ್ಣ ಹಾಗೂ ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಆನಂದ್ ಎಸ್. ಕೊಂಡಾಣ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯದ ಸದಸ್ಯರು ಮತ್ತು ಯುವವಾಹಿನಿ (ರಿ) ಕೊಲ್ಯ ಘಟಕದ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಯುವವಾಹಿನಿ (ರಿ) ಕೊಲ್ಯ ಘಟಕದ ಕಾರ್ಯದರ್ಶಿಯರಾದ ಲತೀಶ್ ಪಾಪುದಡಿ ಧನ್ಯವಾದ ಸಮರ್ಪಿಸಿದರು