ಮಂಗಳೂರು : ಯುವವಾಹಿನಿಯು ಶಿಕ್ಷಕರನ್ನು ಗೌರವಿಸುವ ಮೂಲಕ ಮಾತೆಗೆ ಗೌರವ ಸಲ್ಲಿಸಿದಂತೆ, ಸಂಘಟನೆಯನ್ನು ಕಟ್ಟುವುದಕ್ಕಿಂದ ಸಂಘಟನೆಯನ್ನು ಉಳಿಸಿ ಬೆಳೆಸುವುದು ಮುಖ್ಯ, ಶಿಕ್ಷಕರು ನಿರಂತರವಾಗಿ ಕಲಿಕೆಯ ಮೂಲಕ ಶಿಕ್ಷಕರೂ ವಿದ್ಯಾರ್ಥಿ ಆದಾಗ ಮಾತ್ರ ಸಮಾಜದ ಶ್ರೇಷ್ಠ ಶಿಕ್ಷಕನಾಗಲು ಸಾಧ್ಯ. ಈ ಮೂಲಕ ಶಿಕ್ಷಕರಿಂದ ಸ್ವಸ್ಥ ಸಮಾಹದ ನಿರ್ಮಾಣವಾಗಿದೆ. ಎಂದು ಮಂಗಳೂರಿನ ಶಾರದಾ ಶಿಕ್ಷಣ ಸಮೂಹ ಸಂಸ್ಥೆಯ ಉಪ ಪ್ರಾಂಶುಪಾಲರಾದ ದಯಾನಂದ ಕಟೀಲ್ ತಿಳಿಸಿದರು.
ಅವರು ದಿನಾಂಕ 04.09.2018 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಉಷಾ, ಶ್ವೇತಾ, ಶುಹಾನ್ ದಾಸ್, ಜಯಶ್ರೀ ದಿನಕರ್, ಸುಜಾತ ಕೇಶವ ಸುವರ್ಣ, ಪರಿಣಿತಾ ಮನೋಹರ್, ಜಯಲತಾ ಬೋಳಾರ್, ಶ್ರುತಿ, ಲತಾ ಕಿಶೋರ್, ರೇಖಾ ಮೊಹನ್ ದಾಸ್, ರಾಕೇಶ್ ಕುಮಾರ್, ಪೂರ್ಣಿಮಾ ಅಶೋಕ್, ದಯಾ.ಜೆ.ಕಾರಂದೂರು, ಹೊನ್ನಪ್ಪ ಬಿ.ಎಸ್, ಅನುಸೂಯ ಹೊನ್ನಪ್ಪ,14 ಶಿಕ್ಷಕರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷ ನವೀನ್ ಚಂದ್ರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು, ರಂಗಭೂಮಿಗೆ ಕಲಾವಿದ ಸತೀಶ್ ಬಂದಲೆ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ಮಾಜಿ ಅಧ್ಯಕ್ಷರಾದ ವಿಶ್ವನಾಥ್, ಅಶೋಕ ಕುಮಾರ್, ಪರಮೇಶ್ವರ ಪೂಜಾರಿ, ಯಶವಂತ ಪೂಜಾರಿ, ಹರೀಶ್ ಕೆ.ಪೂಜಾರಿ, ಕಿಶೋರ್ ಕೆ.ಬಿಜೈ, ಶ್ರೀಧರ ಪೂಜಾರಿ, ಜಯರಾಮ ಕಾರಂದೂರು, ಬಿ.ಎಸ್.ಬಾಲಕೃಷ್ಣ ಉಪಸ್ಥಿತರಿದ್ದರು
ಯುವವಾಹಿನಿಯ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ, ಲಕ್ಷ್ಮೀಶ್ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯದರ್ಶಿ ರಾಜೇಶ್ ಅಮೀನ್ ಧನ್ಯವಾದ ನೀಡಿದರು
Super great job