ಮಾಣಿ : ಯುವವಾಹಿನಿ (ರಿ.)ಮಾಣಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.ಇದರ ಉಧ್ಘಾಟನೆಯನ್ನು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಮತ ಶೆಟ್ಟಿÀ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವವಾಹಿನಿ(ರಿ.) ಮಾಣಿ ಘಟಕದ ಅಧ್ಯಕ್ಷರಾದ ರಾಜೇಶ್ ಪೂಜಾರಿ ಬಾಬನಕಟ್ಟೆ ಯವರು ವಹಿಸಿಕೊಂಡು ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು . ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ(ರಿ.) ಮಾಣಿ ಘಟಕದ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ತ್ರಿವೇಣಿರಮೇಶ ಪೂಜಾರಿಯವರು ಗುರು ತತ್ವ ಪ್ರಸ್ತುತಿಯನ್ನು ಮಾಡಿದರು .ಮಾಣಿ ಗ್ರಾಮ ಪಂಚಾಯತ್‍ನ ಸದಸ್ಯರಾದ ಸುದೀಫ್ ಶೆಟ್ಟಿ ಕೊಡಾಜೆಯವರು ಮಾತನಾಡಿ ಎಲ್ಲಾ ಶಾಲೆಗಳಲ್ಲಿ ಸರಕಾರದ ವತಿಯಿಂದ ನಾರಾಯಣ ಗುರುಗಳ ಆಚರಣೆಯನ್ನು ಮಾಡುವುದರಿಂದ ಗುರುಗಳ ತತ್ವ ಸಂದೇಶಗಳು,ಜೀವನ ಚರಿತ್ರೆ ಎಲ್ಲಾ ಜನರಿಗೂ ತಲುಪಲು ಸಾಧ್ಯ ಎಂದು ತಿಳಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಧ್ಯಕ್ಷರಾದ ಈಶ್ವರ ಪೂಜಾರಿ ಹಿರ್ತಡ್ಕ ಕಡೇಶಿವಾಲಯ ಹಿಂದುಳಿದ,ದೀನÀದಲಿತರ ತುಳಿತಕ್ಕೊಳಗಾದ ಜನರ ಉದ್ದಾರ ಮಾಡಿದ ಮಹಾನ್ ಚಿಂತಕ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದರು. ಶಾಲೆಯ ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ ಎಂ.ಪಿ.ಜನಾರ್ಧನ ನಾಯ್ಕ ಪೆರಾಜೆಯವರು ಮಾತನಾಡಿ ಸರಕಾರಿ ಶಾಲೆಯಲ್ಲಿ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ಆಚರಣೆಯನ್ನು ಮಾಡಿದ್ದು ತುಂಬ ಸಂತೋಷದಾಯಕ ಹಾಗೂ ಇದರಿಂದ ಮಕ್ಕಳಿಗೆ ನಾರಾಯಣ ಗುರುಗಳ ಜೀವನ ಚರಿತ್ರೆ ತಿಳಿಯಲು ಸಾಧ್ಯವಾಗುತ್ತದೆ 20 ವರ್ಷದ ಹಿಂದೆಯೆ ನಾನು ಯುವವಾಹಿನಿ ಸಂಘಟಣೆ ಪುತ್ತೂರಿನ ಒಡನಾಡಿಯಗಿದ್ದೆ ಎಂದರು. ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ ಮಾತನಾಡಿ ಯುವವಾಹಿನಿಯು ನಾರಾಯಣ ಗುರುಗಳ ತತ್ವ ಸಂದೇಶಗಳ ಅಡಿಯಲ್ಲಿ ರಚಿತವಾಗಿ ವಿದ್ಯೆ ಉದ್ಯೋಗ ಸಂಪರ್ಕ ಎಂಬ ಧ್ಯೆಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕಲ್ಯಾಣಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಹಿಳಾಘಟಕದ ಅಧ್ಯಕ್ಷರಾದ ರೋಹಿಣಿ ಶ್ರೀನಿವಾಸ ಪೆರಾಜೆ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಬಂಟ್ವಾಳ ಘಟಕದ ಉಪಾಧ್ಯಕ್ಷ ಸತೀಶ್ ಪೂಜಾರಿ ಬಾಯಿಲ ಉಪಸ್ಥಿತರಿದ್ದರು ಶಾಲಾಮಕ್ಕಳಿಗೆ ಪೆನ್ನು ,ಪೆನ್ಸಿಲ್, ಸಿಹಿತಿಂಡಿ, ಪಾಯಸವನ್ನು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ವಿತರಿಸಲಾಯಿತು. ಯುವವಾಹಿನಿ(ರಿ.) ಮಾಣಿ ಘಟಕದ ಕಾರ್ಯದರ್ಶಿ ಪ್ರಶಾಂತ್ ಅನಂತಾಡಿ, ಪದಾಧಿಕಾರಿಗಳಾದ ಚೇತನ್ ಮಲ್ಲಡ್ಕ ಬಿಳಿಯೂರು,ಹರೀಶ್ ಬಾಕಿಲ ನಾಗೇಶ್ ಕೊಂಕಣಪದವು . ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸದಸ್ಯರಾದ ಗಿರಿಯಪ್ಪ ಪೂಜಾರಿ ಮಾಣಿ ಉಪಸ್ಥಿತರಿದ್ದರು ಜನಾರ್ಧನ ಪೆರಾಜೆ ಧನ್ಯವಾದ ಸಮರ್ಪಿಸಿದರು ಸತೀಶ್ ಕೊಪ್ಪರಿಗೆ ನೆಟ್ಲಮುಡ್ನೂರು ಕಾರ್ಯಕ್ರಮ ನಿರ್ವಹಿಸಿದರು.