ಕೊಲ್ಯ : ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಸೋಮೇಶ್ವರ, ಯುವವಾಹಿನಿ (ರಿ) ಕೊಲ್ಯ ಘಟಕ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಇದರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 164 ನೇ ಜನ್ಮ ಜಯಂತ್ಯುತ್ಸವ ಆಚರಣೆ
ಕೇರಳದಲ್ಲಿ ಸಾಕ್ಷರತೆ ಇಂದು ನೆಲೆಯೂರಲು ಬ್ರಹ್ಮ ಶ್ರೀ ನಾರಾಯಣ ಗುರುಗಳು ಜನಸಾಮಾನ್ಯರಿಗೆ ನೀಡಿದ ಜ್ಞಾನವೇ ಕಾರಣವಾಗಿದೆ.ಜನರಲ್ಲಿ ಆಧ್ಯಾತ್ಮದ ಚಿಂತನೆ ಮೂಡಿಸುತ್ತಾ ದೇವರ ಭಯದೊಂದಿಗೆ ಜ್ಞಾನವನ್ನು ಮೂಡಿಸಿದ ಮಹಾತ್ಮರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕೊಲ್ಯದ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದ ಆಶ್ರಯದಲ್ಲಿ ಕೊಲ್ಯ ನಾರಾಯಣ ಗುರು ಮಂದಿರದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 164 ನೇ ಜನ್ಮ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು .
ಸನ್ಮಾನ
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು,ಚೆಂಬುಗುಡ್ಡೆ ರುದ್ರಭೂಮಿಯ ಮೇಲ್ವಿಚಾರಕ ಶಂಕರ ಮಣಿ,ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಅಧ್ಯಕ್ಷ ಜೈಕುಮಾರ್ ಪರ್ಯತ್ತೂರು ಕೊಲ್ಯ ಇವರನ್ನು ಸನ್ಮಾನಿಸಲಾಯಿತು.
ಗರೋಡಿ ಬಿಲ್ಲವ ಸೇವಾ ಸಮಾಜದ ರಜತೋತ್ಸವ ಸಮಿತಿಯ ಸಂಚಾಲಕ ಆನಂದ್ ಕುಮಾರ್ ಸರಿಪಲ್ಲ ಗುರು ಸಂದೇಶ ನೀಡಿದರು. ಪ್ರಶಸ್ತಿ ವಿಜೇತ ಚಲನಚಿತ್ರ ನಟ,ನಿರ್ದೇಶಕ ರಾಜಶೇಖರ್ ಕೋಟ್ಯಾನ್,ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ,ಸೋಮೇಶ್ವರ ನೆಹರು ನಗರದ ಪಶ್ಚಿಮ್ ಟ್ರಸ್ಟ್ ನ ಸಂಸ್ಥಾಪಕ ರೋಹಿತ್ ಸ್ಯಾಂಕ್ಟಸ್ ,ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷ ಕುಸುಮಾಕರ್ ಕುಂಪಲ ,ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಐತಪ್ಪ ರವರು ಉಪಸ್ಥಿತರಿದ್ದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ,ಸಹಕರಿಸಿದರು. ಬಿಲ್ಲವ ಸಂಘದ ಗೌರವಾಧ್ಯಕ್ಷ ಡಾ.ಪಿ ರಾಮಾನುಜಂ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಸಂಘದ ಅಧ್ಯಕ್ಷ ಆನಂದ್ ಎಸ್ ಕೊಂಡಾಣ ಸ್ವಾಗತಿಸಿದರು,ಜೈಕುಮಾರ್ ಪರ್ಯತ್ತೂರು ಕಾರ್ಯಕ್ರಮ ನಿರೂಪಿಸಿದರು,ಕಾರ್ಯದರ್ಶಿ ಡಿ.ಎನ್ ರಾಘವ ವಂದಿಸಿದರು.