ಅಡ್ವೆ : ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ದಿನಾಂಕ 27/8/2018 ರಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮಶ್ರೀ ನಾರಯಣ ಗುರುಗಳ 164 ನೇ ಜಯಂತಿಯನ್ನು ಭಜನಾ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಈ ಭಜನಾ ಕಾರ್ಯಕ್ರಮವನ್ನು ಘಟಕದ ಸದಸ್ಯರು ಹಾಗೂ ಶ್ರೀ ಅಮೃತವರ್ಷಿಣಿ ಮಹಿಳಾ ವೃಂದದ ಸದಸ್ಯರು ಸೇರಿ ನಡೆಸಿಕೊಟ್ಟರು. ತದನಂತರ ಪ್ರತೀ ವರ್ಷ ಬ್ರಹ್ಮಶ್ರೀ ನಾರಯಣ ಗುರು ಜಯಂತಿಯಂದು ನಡೆಸಿಕೊಂಡು ಬರುತ್ತಿರುವ ಊರಿನ ಹಿರಿಯರೊಬ್ಬರಿಗೆ ಸಮರ್ಪಿಸುವ “ಗುರುವಂದನೆ” ಯನ್ನು ಈ ಬಾರಿ ಸುಮಾರು 50 ವರ್ಷಗಳಿಂದ ನಿರಂತರ ತನ್ನನ್ನು ತಾನು ಭಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ, ಅದೆಷ್ಟೋ ಊರುಗಳ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅಡ್ವೆ ಗರಡಿ ಮನೆ ಶ್ರೀ ವಿಠ್ಠಲ ಪೂಜಾರಿ ಇವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.) ಇದರ ಕಾರ್ಯದರ್ಶಿ ಶ್ರೀ ನವೀನ್ ಚಂದ್ರ ಸುವರ್ಣ, ಅರ್ಚಕರಾದ ಶ್ರೀ ಸದಾನಂದ ಪೂಜಾರಿ, ಘಟಕದ ಅಧ್ಯಕ್ಷರಾದ ಶ್ರೀ ಜಿತೇಶ್ ಜೆ. ಕರ್ಕೇರ, ಕಾರ್ಯದರ್ಶಿ ಶ್ರೀ ಪ್ರಸನ್ನ ಕುಮಾರ್, ನಾರಾಯಣ ಗುರು ತತ್ವ ಪ್ರಚಾರಕರಾದ ಶ್ರೀ ಟಿ. ಶಶಿಧರ್ ಪೂಜಾರಿ ಸೇರಿದಂತೆ ಘಟಕದ ಸಲಹೆಗಾರರು, ಮಾಜಿ ಅಧ್ಯಕ್ಷರುಗಳು, ವಿವಿಧ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.