ಸುಳ್ಯ : ಯುವವಾಹಿನಿ ಸುಳ್ಯ ಘಟಕ ಹಾಗೂ ಸುಳ್ಯ ತಾಲೂಕು ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯತಿಯನ್ನು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು. ಅದ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯತ್ ಅದ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು.ಬೆಳ್ಳಾರೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು,ವೇದಿಕೆಯಲ್ಲಿ ಸುಳ್ಯ ನ.ಪಂ.ಅದ್ಯಕ್ಷೆ ಶೀಲಾವತಿಮಾಧವ,ಸುಳ್ಯ ತಾ ಬಿಲ್ಲವ ಸಂಘದ ಅದ್ಯಕ್ಷ ವಿಠಲದಾಸ್ ಬೆಳ್ಳಾರೆ,ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಉಪಸ್ಥಿತರಿದ್ದರು.ರತ್ನ ಕಳಂಜ ಪ್ರಾರ್ಥಿಸಿದರು. ಸುಳ್ಯ ಉಪತಹಶೀಲ್ದಾರ್ ಚಂದ್ರಕಾಂತ್ ಸ್ವಾಗತಿಸಿ ಯುವವಾಹಿನಿ ಸುಳ್ಯ ಘಟಕದ ಅದ್ಯಕ್ಷ ಚಂದ್ರಶೇಖರ ಹೈದಂಗೂರು ವಂದಿಸಿದರು.ಶೇಣಿ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೋಕ್ತೇಸರ ಧರ್ಮಪಾಲ ಶೇಣಿ ನಿರೂಪಿಸಿದರು.