ಬಜಪೆ : ಬ್ರಹ್ಮ ಶ್ರೀ ನಾರಾಯಣ ಸಮಾಜ ಸೇವಾ ಸಂಘ ಬಜಪೆ -ಕರಂಬಾರು ,ಯುವವಾಹಿನಿ (ರಿ) ಬಜಪೆ ಘಟಕ ,ಯುವವಾಹಿನಿ (ರಿ) ಕರಂಬಾರು -ಕೆಂಜಾರು ಘಟಕ ಹಾಗೂ ಬಿರುವೆರ್ ಕುಡ್ಲ (ರಿ) ಬಜಪೆ ಘಟಕದ ಸಹಯೋಗದಲ್ಲಿ ದಿನಾಂಕ 27.08.2018 ರಂದು ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಬಜಪೆ ನಾರಾಯಣ ಗುರು ಮಂದಿರದ ವರೆಗೆ ಶ್ರೀ ನಾರಾಯಣ ಗುರು ಸಂದೇಶ ಕಾಲ್ನಡಿಗೆ ಜಾಥಾ ಬಹಳ ವಿಜೃಂಭಣೆಯಿಂದ ನಡೆಯಿತು. ಸುಂಕದಕಟ್ಟೆ ಅನ್ನಪೂರ್ಣೆಶ್ವರಿ ದೇವಸ್ಥಾನದ ಮೊಕ್ತೇಸರರು ಹಾಗೂ ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಉಮಾನಾಥ ಕೊಟ್ಯಾನ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.