ಕೊಲ್ಯ : ಯುವವಾಹಿನಿ (ರಿ) ಕೇಂದ್ರ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಯ ದ್ವೀತಿಯ ಹಂತದ ಕಾರ್ಯಕ್ರಮ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ (ರಿ) ಕೊಲ್ಯದಲ್ಲಿ ದಿನಾಂಕ 22.08.2018 ರಂದು ಜರಗಿತು. ಯುವವಾಹಿನಿ (ರಿ) ಕೇಂದ್ರ ಸಮಿತಿಯ 2018 – 19ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತ ನಡುಬೈಲು ಮತ್ತು ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ. ಅಂಚನ್ ಇವರನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲುರವರು ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಯ ಕಾರ್ಯ ವೈಖರಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಈ ಯೋಜನೆಯ ಸವಲತ್ತುಗಳು ನಮ್ಮ ಸಮಾಜದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟದಲ್ಲಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯ ಪ್ರಯೋಜನಕ್ಕೆ ಬರಬೇಕು, ಅಲ್ಲದೆ ಅನ್ಯ ಕಾರ್ಯಗಳಿಗೆ ಈ ಯೋಜನೆಯ ಸವಲತ್ತುಗಳನ್ನು ವಿದ್ಯಾರ್ಥಿಗಳು ಬಳಸದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದ ಉದಾರ ದಾನಿಗಳ ನೆರವಿನಿಂದ, ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ನಿಧಿ ಯೋಜನೆಯ ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ ಒಟ್ಟು ರೂ. 1,84,000/- ಸಂಗ್ರಹವಾಹಿತು. ಶಾಶ್ವತ ವಿದ್ಯಾ ನಿಧಿಗೆ ದೇಣಿಗೆ ನೀಡಿದ ಸಹೃದಯಿ ದಾನಿಗಳಿಗೆ ಶಾಶ್ವತ ವಿದ್ಯಾ ನಿಧಿ ಫಲಕವನ್ನು ನೀಡಿ ಗೌರವಿಸಲಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ. ಅಂಚನ್, ಒಮನ್ ಬಿಲ್ಲವಾಸ್ ಮಸ್ಕತ್ ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಶಿವಪ್ರಕಾಶ್ ಕುಂಪಲ, ಶ್ರೀ ಬಾನುಕಿರಣ್ ಪುತ್ತೂರು , ಮೆಸ್ಕಾಂ ಇಲಾಖೆಯ ನಿತೇಶ್ ಹೊಸಗದ್ದೆ, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿಯ ಉಪಾಧಾಕ್ಷರಾದ ನಮಿತಾ ಶ್ಯಾಮ್ , ನಿವೃತ್ತ ಶಿಕ್ಷಕರಾದ ಸಿ. ನಾರಾಯಣ ಕುಂಪಲ, ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ಶ್ರೀ ಆನಂದ ಎಸ್. ಕೊಂಡಾಣ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಯಶವಂತ್ ಪೂಜಾರಿ ಈ ಸಂದರ್ಭದಲ್ಲಿ ಹಾಜರಿದ್ದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಕುಸುಮಾಕರ ಕುಂಪಲ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ಸದಸ್ಯರಾದ ಸೌಮ್ಯ ಕುಸುಮಾಕರ ಪ್ರಾರ್ಥನೆಗೈದರು. ಆನಂದ ಮಲಯಾಳಕೋಡಿರವರು ಧನ್ಯವಾದ ಸಮರ್ಪಿಸಿದರು. ಸ್ಥಾಪಕಾಧ್ಯಕ್ಷರಾದ ಶ್ರೀ ಸುರೇಶ್ ಬಿ. ರವರು ಕಾರ್ಯಕ್ರಮ ನಿರೂಪಿಸಿದರು.