ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಯೋಧರಿಗೆ ಗೌರವ

ಸೇನೆಗೆ ಸೇರುವಂತೆ ಯುವಜನಾಂಗಕ್ಕೆ ಪ್ರೇರಣೆ ಅಗತ್ಯ : ಮಹಂತೇಶ್ ಗಡದ್

ಮಂಗಳೂರು : ಭಾರತೀಯ ಸೇನೆಗೆ ಸೇರುವಂತೆ ಇಂದಿನ ಯುವಜನಾಂಗಕ್ಕೆ ಪ್ರೇರಣೆ ನೀಡುವ ಕಾರ್ಯ ನಡೆಯಬೇಕಾಗಿದೆ. ಎಂದು ಅಭಿನಂದನೆ ಸ್ವೀಕರಿಸಿದ ಮಹಂತೇಶ್ ಗಡದ್ ತಿಳಿಸಿದರು ಮತ್ತು ಯುವವಾಹಿನಿಗೆ ಕೃತಜ್ಞತೆ ತಿಳಿಸಿದರು.

ದಿನಾಂಕ‌ 18.08.2018 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಯುವವಾಹಿನಿ ಸಭಾಂಗಣದಲ್ಲಿ ಭಾರತೀಯ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ‌ ಘಟಕದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಭಾರತೀಯ ಭೂಸೇನೆಯಲ್ಲಿ 17 ವರ್ಷಗಳ ಅಮೂಲ್ಯ ಸೇವೆ ಸಲ್ಲಿಸಿದ ಹವಾಲ್ದಾರ್ ಮಹಂತೇಶ್ ಗಡದ್ ಇವರ ಸೇವೆಯನ್ನು ಗುರುತಿಸಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಕರ್ಕೇರ, ಕಾರ್ಯದರ್ಶಿ ರವಿಕಲಾ, ಉಪಾಧ್ಯಕ್ಷೆ ಉಮಾ ಶ್ರೀಕಾಂತ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿಚಂದ್ರ, ಲಕ್ಷ್ಮಣ್ ಸಾಲ್ಯಾನ್, ಪದ್ಮನಾಭ ಮರೋಳಿ, ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ನವೀನ್ ಚಂದ್ರ, ಕಾರ್ಯದರ್ಶಿ ರಾಜೇಶ್ ಅಮೀನ್, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೆರ ಸ್ವಾಗತಿಸಿದರು, ಶುಭ ರಾಜೇಂದ್ರ ವಂದಿಸಿದರು
ನಂತರ ಘಟಕದ ಸದಸ್ಯರಿಗೆ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು ಶುಭ ರಾಜೇಂದ್ರ ಪ್ರಥಮ, ಉಮಾಶ್ರೀಕಾಂತ್, ಚಿತ್ರಾಶ್ರೀ ದ್ವೀತಿಯ, , ಅಮಿತಾ, ರೇಖಾ ತೃತೀಯ ಬಹುಮಾನ ಪಡೆದರು

Leave a Reply

Your email address will not be published. Required fields are marked *

error: Content is protected !!