ಕೊಲ್ಯ: ಯುವವಾಹಿನಿ ರಿ ಕೊಲ್ಯ ಘಟಕ, ಬಿಲ್ಲವ ಸೇವಾ ಸಮಾಜ ರಿ ಕೊಲ್ಯ ಸೋಮೇಶ್ವರ ಹಾಗೂ ನಾರಾಯಣಗುರು ಮಹಿಳಾ ಮಂಡಳಿ ಕೊಲ್ಯ ಇದರ ಸಹಯೋಗದೊಂದಿಗೆ ತಾರೀಕು 29-07-2018 ನೇ ಆದಿತ್ಯವಾರದಂದು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನ ಕೊಲ್ಯದಲ್ಲಿ ಜರಗಿತು.ಕಾರ್ಯಕ್ರಮವನ್ನು ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ಶ್ರೀಮತಿ ಸುಧಾಸುರೇಶ್ ರವರು ಸಾಂಪ್ರದಾಯಿಕವಾಗಿ ಉಧ್ಘಾಟಿಸಿ ಆಟಿಯ ಮಹತ್ವ ಹಾಗೂ ವಿಶೇಷತೆಯನ್ನು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಸೈಂಟ್ ಜೋಸೆಫ್ ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಚೈತ್ರಾ ಅಲೋಕ್ ರವರು ಆಟಿಯ ಬಗೆಗಿನ ಸಂದೇಶಗಳನ್ನು ಮನವರಿಕೆ ಮಾಡಿದರು,ಬಿಲ್ಲವ ಸೇವಾ ಸಮಾಜ ರಿ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ಆನಂದ.ಎಸ್.ಕೊಂಡಾಣ ರವರು ಶುಭಕೋರಿದರು,ಯುವವಾಹಿನಿ ರಿ ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲ ರವರು ಸಾಂದರ್ಭಿಕವಾಗಿ ಮಾತನಾಡಿದರು,ಹಾಗೂ ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಕೊಲ್ಯ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಮಂಡಳಿಯ ಸದಸ್ಯೆಯರು ಜಾನಪದ ಹಾಡು ಹಾಗೂ ನೃತ್ಯಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.ಬಳಿಕ ಮಹಿಳಾ ಮಂಡಳಿಯ ಸದಸ್ಯೆಯರು ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಎಲ್ಲರಿಗೂ ಉಣಬಡಿಸುವುದರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.