ಕೂಳೂರು : ಬದಲಾವಣೆ ಬೇಕು ಆದರೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ತುಳುನಾಡಿನ ಸಂಸ್ಕೃತಿ ,ಸಂಪ್ರದಾಯ ಹಾಗೂ ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ರವಾನಿಸಬಹುದು, ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಇದರ ಸ್ಥಾಪಕ ಅಧ್ಯಕ್ಷರಾದ ಕೆಎ ರೋಹಿಣಿತಿಳಿಸಿದರು.
ಆಗಿನ ಕಾಲದಲ್ಲಿ ಹೆತ್ತವರು ಹೇಳಿದಂತೆ ಮಕ್ಕಳು ಕೇಳುತ್ತಿದ್ದರು, ಆದರೆ ಈಗಿನ ಕಾಲದಲ್ಲಿ ಮಕ್ಕಳು ಹೇಳಿದಂತೆ ಹೆತ್ತವರು ಕೇಳಬೇಕಾದ ಪರಿಸ್ಥಿತಿ , ಆಟಿ ತಿಂಗಳಿನ ವಿಶೇಷತೆ ,ಅಮಾವಾಸ್ಯೆ ಬಡಿಸುವುದು ,ಆಟಿ ಕಳಂಜ ,ಆಟಿ ತಿಂಗಳಿನ ತಿನಿಸು ಪದಾರ್ಥಗಳ ಬಗ್ಗೆ ವಿವರಣೆ ನೀಡಿದರು .
ಅವರು ದಿನಾಂಕ 29/07/2018ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ‘ಆಟಿದ ಪೊರ್ಲು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮತ್ತು ಈ ಸಂದರ್ಭದಲ್ಲಿ ಕೆ.ಎ. ರೋಹಿಣಿ ಇವರನ್ನು ಸನ್ಮಾನಿಸಲಾಯಿತು
ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ತಾಂಬೂಲ ನೀಡಿ ಎಲ್ಲರನ್ನು ಸ್ವಾಗತಿಸಿದರು .
ನಿರಂಜಯ ಕೆ. ನಿವೃತ್ತ ಮ್ಯಾನೇಜರ್, ಗುರುಪುರ ಬ್ಯಾಂಕ್ VSS ಬ್ಯಾಂಕ್- ಇವರು ದೀಪ ಬೆಳಗಿಸಿ ನೇಜಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ತಮ್ಮ ಉದ್ಘಾಟನಾ ಭಾಷಣದಲ್ಲಿ ತಾನೊಬ್ಬ ಕೃಷಿ ಕುಟುಂಬದಿಂದ ಬಂದವಳಾಗಿದ್ದು,ತನ್ನ ಬಾಲ್ಯದಲ್ಲಿ ಆಟಿ ತಿಂಗಳಲ್ಲಿ ಕಳೆದು ಹೋದ ಸಮಯವನ್ನು ಹಾಗೂ ಆಟಿ ತಿಂಗಳಿನ ವಿಶೇಷತೆಯನ್ನು ತಿಳಿಸಿ ಆಟಿದ ಪೊಲು೯ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಯುವವಾಹಿನಿ(ರಿ) ಕೂಳೂರು ಘಟಕ ಆಯೋಜಿಸಿರುವ ಮೂಲಕ ತುಳುನಾಡಿನ ಆಚರಣೆಗಳನ್ನು ನೆನಪಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾದಂತಹ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯದರ್ಶಿಯಾದ ಹರೀಶ್ ಅಮೀನ್ ಇವರು ಮಾತನಾಡಿ ಯುವವಾಹಿನಿ(ರಿ) ಕೂಳೂರು ಘಟಕವು ಇದೀಗಾಗಲೇ ವಿದ್ಯೆಗೆ ಹೆಚ್ಚು ಮಹತ್ವವನ್ನು ನೀಡಿದ್ದು ಈಗ ತುಳುನಾಡ ಸಂಸ್ಕೃತಿ ಹಾಗೂ ಆಚರಣೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆಂದರು .ಇನ್ನೋರ್ವ ಅತಿಥಿಯಾದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಮಾತನಾಡಿ ಯುವವಾಹಿನಿಯಲ್ಲಿ ವಿದ್ಯೆ, ಉದ್ಯೋಗ,ಸಂಪರ್ಕದೊಂದಿಗೆ ಸಂಸ್ಕಾರವನ್ನು ತಿಳಿಸುವುದರಲ್ಲಿ ಈ ಘಟಕ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಹಾಗೂ ಕೂಳೂರಿನ ಕುಟುಂಬ ಕಾರ್ಯಗಳಲ್ಲಿ ಭಾಗವಹಿಸಿ ಕುಟುಂಬವನ್ನು ಸೇರಿಸುವಲ್ಲಿ ಹೆಸರುವಾಸಿಯಾಗಿದೆ ಎಂದುಹೇಳಿದರು , ಸಲಹೆಗಾರರಾದ ನೇಮಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು .ಕಾರ್ಯಕ್ರಮದಲ್ಲಿ ಸಂಚಾಲಕರಾದ ಜಯಶ್ರೀ ,ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ,ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಕಾರ್ಯದರ್ಶಿ ಪವಿತ್ರ ಅಂಚನ್ ವಂದಿಸಿದರು .ಸುಜಿತ್ ರಾಜ್ ಹಾಗೂ ಪ್ರತೀಶ್ ಕಾರ್ಯಕ್ರಮ ನಿರೂಪಿಸಿದರು .ಸಭಾ ಕಾರ್ಯಕ್ರಮದ ನಂತರ ಘಟಕದ ಸದಸ್ಯರಿಂದ ತುಳು ನಲಿಕೆ ಏರ್ಪಡಿಸಲಾಗಿತ್ತು.
ನಂತರ ಘಟಕದ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ವೈವಿಧ್ಯಮಯ ತಿಂಡಿ ತಿನಿಸು ಖಾದ್ಯಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು .