ಬಂಟ್ವಾಳ : ನೆಲ ಮೂಲ ಸಂಸ್ಕೃತಿಯನ್ನು ನಂಬಿಕೊಂಡು ಬಂದವರು ತುಳುವರು, ಅವರ ಪ್ರತಿಯೊಂದು ಆಚರಣೆಗಳು ಮೂಲ ನಂಬಿಕೆಯಿಂದ ಕೂಡಿತ್ತು, ಇದಕ್ಕೆ ವೈಜ್ಞಾನಿಕ ಹಿನ್ನಲೆ ಇರುವುದು ವಿಶೇಷ. ಎಲ್ಲರೂ ಕೂಡಿ ಆಚರಿಸುವ ಆಟಿಡೊಂಜಿ ಕೂಟ ಎನ್ನುವ ಇಂತಹ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ತುಳುನಾಡಿನ ಗತವೈಭವವನ್ನು ನೆನಪಿಸುತ್ತದೆ. ಇಂತಹ ಸಂಸ್ಕೃತಿ, ಸಂಸ್ಕಾರಯುತ ಆಚರಣೆಗಳು ಬದುಕನ್ನು ಶ್ರೀಮಂತವಾಗಿಸುತ್ತದೆ ಎಂದು ಎಸ್.ಡಿ.ಎಮ್ ಕಾಲೇಜಿನ ಉಪನ್ಯಾಸಕ ಸ್ಮಿತೇಶ್. ಎಸ್.ಬಾರ್ಯ ತಿಳಿಸಿದರು
ಅವರು ದಿನಾಂಕ 22.07.2018 ರಂದು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದ ಉಪನ್ಯಾಸ ನೀಡಿದರು
ಆಟಿ ತಿಂಗಳು ತುಳುವರ ಕಷ್ಟದ ತಿಂಗಳು ಈ ಸಂದರ್ಭದಲ್ಲಿ ಹಿರಿಯರ ಆರಾಧನೆ ಸಂಪ್ರದಾಯದಂತೆ ಆಟಿ ತಿಂಗಳ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಬಡಿಸುವ ಮೂಲಕ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ವಿಶಿಷ್ಠವಾಗಿ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯರಾದ ಮೀನಾಕ್ಷಿ ನಾರಾಯಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿ ಬಂಟ್ವಾಳ ಘಟಕವು ಯಶಸ್ವೀ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ನೆಲೆ ನಿಂತಿದೆ. ತನ್ನದೇ ಆದ ವೈಶಿಷ್ಟ್ಯ ದ ಮುಖಾಂತರ ಸಮಾಜದ ಬಡಜನರ ದ್ವನಿಯಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸುದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ 2018-19 ನೇ ಸಾಲಿನ ನೂತನ ತಂಡವನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಅಭಿನಂದಿಸಿದರು.
ಯುವವಾಹಿನಿಯ ಮುಖವಾಣಿ ಜುಲೈ ತಿಂಗಳ ಮಾಸಿಕ ಯುವಸಿಂಚನ ಪತ್ರಿಕೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ಭುವನೇಶ್ ಪಚ್ಚಿನಡ್ಕ ಬಿಡುಗಡೆಗೊಳಿಸಿದರು. ಸಂಪಾದಕಿ ಶುಭಾ ರಾಜೇಂದ್ರ ಉಪಸ್ಥಿತರಿದ್ದರು.
ವಕೀಲರಾದ ಸುರೇಶ್ ಪೂಜಾರಿ, ಬಂಟ್ವಾಳ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್, ಉದ್ಯಮಿ ಸತೀಶ್ ಕುಮಾರ್, ಸಲಹೆಗಾರ ಬಿ.ತಮ್ಮಯ, ಹಿರಿಯರಾದ ಮುತ್ತಪ್ಪ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೋಶಾಧಿಕಾರಿ ಗಣೇಶ್ ಪೂಜಾರಿ ಮಣಿ, ಉಪಾಧ್ಯಕ್ಷ ನಾಗೇಶ್ ಎಮ್, ಸತೀಶ್ ಪೂಜಾರಿ ಬಾಯಿಲ, ಜತೆ ಕಾರ್ಯದರ್ಶಿ ರಚನಾ ಕರ್ಕೇರ, ಸಾಂಸ್ಕೃತಿಕ ನಿರ್ದೇಶಕಿ ಶೈಲಜಾ ರಾಜೇಶ್, ಸಂಚಾಲಕರಾದ ನಾರಾಯಣ ಪೂಜಾರಿ ಪಲ್ಲಿಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕೃಷಿಕರ ಬದುಕನ್ನು ಬಿಂಬಿಸುವ ಕಲಾತ್ಮಕ ವೇದಿಕೆ ಹಾಗೂ ಅತಿಥಿಗಳು ಮಾತಾಡುವ ಪೋಡಿಯಂ ಎಲ್ಲರ ಆಕರ್ಷಣೆಯ ಕೇಂದ್ರವಾಯಿತು.
ಸಭಾ ಕಾರ್ಯಕ್ರಮದ ಬಳಿಕ ಕಾಮಿಡಿ ಪ್ರೀಮಿಯರ್ ಲೀಗ್ ನಲ್ಲಿ ಪ್ರಥಮ ಪ್ರಶಸ್ತಿ ವಿಜೇತ ವೈಷ್ಣವಿ ಕಲಾವಿದರು ಕೊಯಿಲ ಇವರಿಂದ ಕುಸಲ್ಧ ಗೌಜಿ ತುಳು ಹಾಸ್ಯ ಪ್ರದರ್ಶನ ಹಾಗೂ ಯುವವಾಹಿನಿ ಕಲಾವಿದರಿಂದ ಹಾಡು , ನೃತ್ಯ ಪ್ರದರ್ಶನ ನಡೆಯಿತು
ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಕಿರಣ್ ರಾಜ್ ಪೂಂಜರೆಕೋಡಿ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕಿ ಸುಲತಾ ಕೀರ್ತನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಹಾಗೂ ಬಿ.ಶ್ರೀಧರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
Nice programme