ಕಡಬ : ಮನೆ ಮನ ಬೆಳಗುವ ,ಯುವ ಮನಸ್ಸುಗಳನ್ನು ಬೆಸೆದು ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ರಮ ಗುರುಸ್ಪೂರ್ತಿ ಯುವವಾಹಿನಿ(ರಿ) ಕಡಬ ಘಟಕದ ಆಶ್ರಯದಲ್ಲಿ ,ದಿನಾಂಕ 01.07.2018 ನೇ ಆದಿತ್ಯವಾರ ಉದ್ಘಾಟನೆಗೊಂಡಿತು. ನೂಜಿಬಾಳ್ತಿಲ ಗ್ರಾಮ ಸಂಘಟನಾ ಕಾರ್ಯದರ್ಶಿ ಶ್ರೀ ಸಂದೇಶ್ ಪಿ ಬಿ ಇವರ ಮನೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯರಾದ ಶ್ರೀ ಬಾಲಕೃಷ್ಣ ಪೂಜಾರಿ ಪಲಯಮಜಲು ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಂತರ
ನಡೆದ ಸಭಾ ಕಾರ್ಯಕ್ರಮದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಡಾ| ಸದಾನಂದ ಕುಂದರ್ ಮಾತನಾಡಿ,ನಮ್ಮ ಸಮಾಜದ ಜನತೆಯನ್ನು ಪ್ರೋತ್ಸಾಹಿಸುವ ಜೊತೆಗೆ ಸಂಘಟನೆಯಲ್ಲಿ ಭಾಗವಹಿಸಿ ನಮ್ಮನ್ನು ಸಮಾಜ ಗುರುತಿಸುವಂತಾಗಬೇಕೆಂದರು.ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಅಜೀತ್ ಕುಮಾರ್ ಪಾಲೇರಿಯವರು ,ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಸಂಘಟಿತ ಸಮಾಜ ಕಟ್ಟುವಂತಾಗಬೇಕೆಂದರು.ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ತಪ್ಪುಗಳನ್ನು ಮಾತ್ರ ಗುರುತಿಸಿ ಎತ್ತಿ ಹಿಡಿಯುವ ಬದಲಿಗೆ ಒಳ್ಳೆಯ ಕಾರ್ಯಗಳನ್ನು ತಿಳಿಸಿ ವ್ಯತ್ಯಾಸವನ್ನು ತಿದ್ದುವ ಪ್ರಯತ್ನ ಮಾಡಬೇಕು ಮತ್ತು ಯಾವುದೇ ಸಭೆಯು ಭಾಷಣವಾಗಿರದೆ ಫಲಿತಾಂಶ ನೀಡುವ ಕೂಡುವಿಕೆಯಾಗಿರಬೇಕು ಎಂದರು. ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷ ಗುಣಾಕರ ಅಗ್ನಾಡಿ ವಿನೂತನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮನೆಯ ನವದಂಪತಿಗಳಿಗೆ ಶುಭ ಹಾರೈಸಿ ಶ್ರೀಮತಿ ಜಯಂತಿಯವರ ಮಗಳ ವಿಧ್ಯಾಭ್ಯಾಸಕ್ಕೆಂದು ಈ ವರ್ಷದ ಕಾಲೇಜು ಶುಲ್ಕವನ್ನು ಘಟಕದ ವತಿಯಿಂದ ವಿತರಿಸಲಾಯಿತು. ಗುರುಗಳ ಆದರ್ಶ ನಮ್ಮ ದಾರಿ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ಮುಂದುವರಿಯಲಿ ಎಂದು ಕಡಬ ಘಟಕದ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ವಸಂತ ಪೂಜಾರಿ ಬದಿಬಾಗಿಲು ಹಾರೈಸಿದರು. ಕಡಬ ಘಟಕದ ಅಧ್ಯಕ್ಷರಾದ ಶ್ರೀ ಯೋಗಿಶ್ ಕುಮಾರ್ ಅಗತ್ತಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ಅನಿಲ್ ಕುಮಾರ್ ದಡ್ಡು ಮತ್ತು ನಿರ್ದೇಶಕರಾದ ಶ್ರೀ ಸಂದೇಶ್ ಕುಪ್ಪೆಟ್ಟಿ ಕಡಬ ಘಟಕದ ನಿರ್ದೇಶಕರು , ಸಂಘಟನಾ ಕಾರ್ಯದರ್ಶಿಗಳು ಮತ್ತು ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂಜಿಬಾಳ್ತಿಲ ಗ್ರಾಮದ ಪಲಯಮಜಲು,ನಡುವಾಲು , ಕಂಪ , ಬದಿಬಾಗಿಲು , ಜಾಲು, ನೀರಾರಿ ಇಲ್ಲಿನ ಸಮಸ್ತ ಬಿಲ್ಲವ ಭಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂಜಿಬಾಳ್ತಿಲ ಸಂಘಟನಾ ಕಾರ್ಯದರ್ಶಿ ಶ್ರೀ ಸಂದೇಶ್ ಪಿ ಬಿ ಸ್ವಾಗತಿಸಿ ಕಡಬ ಘಟಕದ ಕಾರ್ಯದರ್ಶಿ ಶ್ರೀ ಮಿಥುನ್ ಸುಂದರ್ ಪಲ್ಲತಡ್ಕ ವಂದನಾರ್ಪನೆಗೈದರು. ಕಡಬ ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಗಣೇಶ್ ನಡುವಾಲು ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಗುರುಗಳ ತತ್ವ ಆದರ್ಶಗಳ ಮೂಲಕ ಸಂಘಟಿತ ಸಮಾಜವನ್ನು ನಿರ್ಮಿಸುವ ಕನಸಿನೊಂದಿಗೆ ಆರಂಭವಾದ ಪುಟ್ಟ ಕನಸಿನ ಕಾರ್ಯಕ್ರಮ ಅಭೂತಪೂರ್ವ ಆರಂಭ ಕಂಡಿತು.
ಪ್ರಶಂಸನೀಯ ಕಾರ್ಯಕ್ರಮ, ಯುವಕರಲ್ಲಿ ಸಮಾಜದ ಬಗೆಗೆಗಿನ ತುಡಿತ ಎದ್ದು ಕಾಣುತ್ತಿತ್ತು… ಶುಭವಾಗಲಿ ಕಡಬ ಘಟಕದ ಸದಸ್ಯರಿಗೆ…