ಬೆಂಗಳೂರು : ಯುವವಾಹಿನಿ (ರಿ) ಬೆಂಗಳೂರು ಘಟಕ ರಚಿಸುವ ಸಲುವಾಗಿ ದಿನಾಂಕ 17.06.2018 ರಂದು ಬೆಂಗಳೂರಿನ ಮಲ್ಲೇಶ್ವರಂ ನ ಗಾಂಧಿ ಸಾಹಿತ್ಯ ಸಂಘದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷ ಎಮ್.ಸಂಜೀವ ಪೂಜಾರಿ ದೀಪ ಬೆಳಗುವುದರ ಮೂಲಕ ಸಭೆ ಉದ್ಘಾಟಿಸಿದರು. ನೂತನ ತಂಡ ರಚಿಸುವ ಸಂದರ್ಭದಲ್ಲಿ ತನಗೆ ಇಂತಹ ಹುದ್ದೆ ನೀಡಿ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸದಸ್ಯರು ಆತ್ಮವಿಶ್ವಾಸದಿಂದ ಹುದ್ದೆಯನ್ನು ಸ್ವೀಕರಿಸಿರುವುದು ಉತ್ತಮ ಬೆಳವಣಿಗೆ, ಈ ನಿಟ್ಟಿನಲ್ಲಿ ಬೆಂಗಳೂರು ಘಟಕ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು
ಯುವವಾಹಿನಿ ನಡೆದು ಬಂದ ದಾರಿಯ ಬಗ್ಗೆ ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಹಾಗೂ ಸಂಜೀವ ಪೂಜಾರಿ ಸಭೆಗೆ ಮಾಹಿತಿ ನೀಡಿದರು. ಬೆಂಗಳೂರು ಘಟಕ ರಚನೆಯ ನೇತ್ರತ್ವ ವಹಿಸಿದ ಸಸಿಹಿತ್ಲು ಘಟಕದ ಅಧ್ಯಕ್ಷ ಮಧುಬಂಗೇರ ಮಾತನಾಡಿ ಮೂರು ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ ಎಂದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಯಂತ ನಡುಬೈಲು , ನರೇಶ್ ಕುಮಾರ್ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಸಂಘಟನಾ ಕಾರ್ಯದರ್ಶಿ ಸುನೀಲ್ .ಕೆ.ಅಂಚನ್, ಮುಲ್ಕಿ ಘಟಕದ ನಿಕಟಪೂರ್ವ ಅಧ್ಯಕ್ಷೆ ರಕ್ಷಿತಾ ಕೋಟ್ಯಾನ್, ಬಜಪೆ ಘಟಕದ ಕನಕಾ ಮೋಹನ್, ಸುನೀತಾ ಮತ್ತಿತರರು ಉಪಸ್ಥಿತರಿದ್ದರು
ಸುಧೀರ್ ಪೂಜಾರಿ ನೂತನ ಅಧ್ಯಕ್ಷರಾಗಿ ಹಾಗೂ ಮಹೇಂದ್ರ ಬಿಲ್ಲವ ನೂತನ ಕಾರ್ಯದರ್ಶಿ ಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಮುಂದಿನ ಅಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಘಟಕದ ಪದಗ್ರಹಣ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.ನೂತನ ಕಾರ್ಯದರ್ಶಿ ಮಹೇಂದ್ರ ಬಿಲ್ಲವ ಧನ್ಯವಾದ ನೀಡಿದರು. ಸಮಾಲೋಚನಾ ಸಭೆಯ ಮೊದಲು ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
This is the challenge of organization. Keep going
Thanks Sadanne,
Yuvavhini sprb
Nowadays Yuvavahini is becoming stronger and stronger.All the best to Bangalore Chapter.
All the best team.