ಅಡ್ವೆ : ಒಗ್ಗಟ್ಟಿನಿಂದ ದುಡಿದರೆ ಸಾದನೆಗೆ ಅಸಾಧ್ಯವಾದುದು ಏನಿಲ್ಲ, ನಮ್ಮ ಯುವಕರಲ್ಲಿ ಉತ್ಸಾಹ ಹೆಚ್ಚಿಸಬೇಕು. ಆ ಮೂಲಕ ಆತ್ಮವಿಶ್ವಾಸ ಬೆಳೆಸಬೇಕು ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದು ಇಲ್ಲ. ಹಾಗೆಯೇ ಯುವವಾಹಿನಿ ಸಂಘಟನೆಯ ಮೂಲಕ ನಾವೆಲ್ಲರೂ ಒಗ್ಗಾಟ್ಟಾದರೆ ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸಲು ಸಾಧ್ಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 03-06-2018 ನೇ ಭಾನುವಾರ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಯುವವಾಹಿನಿ ಅಡ್ವೆ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇದರ ಕಾರ್ಯದರ್ಶಿ ಶ್ರೀ ನವೀನ್ ಚಂದ್ರ ಸುವರ್ಣರವರು ನೆರವೇರಿಸಿ, ಯುವ ಶಕ್ತಿಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಿ ಸರಿಯಾದ ದಾರಿಯಲ್ಲಿ ನಡೆಯುವಂತೆ ಯುವವಾಹಿನಿಯು ಶ್ರಮವಹಿಸುತ್ತಿದೆ. ಫಲಾಫೇಕ್ಷೆಯಿಲ್ಲದೆ ತನು ಮನಗಳೊಂದಿಗೆ ಸಮಾಜ ಪರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಸಾಲ್ಯಾನ್ ರವರು ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಸುವರ್ಣ ಹಾಗೂ ಯುವವಾಹಿನಿ ಅಡ್ವೆ ಘಟಕದ ಸಲಹೆಗಾರರಾದ ಶ್ರೀ ತಾರನಾಥ ಎಚ್.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ಇದರ ಅಭಿವೃದ್ಧಿಗಾಗಿ ಘಟಕದ ಮೂಲಕ ದೇಣಿಗೆಯನ್ನು ನೀಡಲಾಯಿತು. 2018-19 ರ ಸಾಲಿನ ಯುವವಾಹಿನಿ ಅಡ್ವೆ ಘಟಕದ ನೂತನ ಅಧ್ಯಕ್ಷರಾಗಿ ಜಿತೇಶ್ ಜೆ. ಕರ್ಕೇರ ನೇತೃತ್ವದ ನೂತನ ತಂಡವು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ನೂತನ ಪದಾಧಿಕಾರಿಗಳ ಪರಿಚಯ ನೀಡಿದರು.
ಯುವವಾಹಿನಿ ಅಡ್ವೆ ಘಟಕದ ಸ್ಥಾಪಕ ಅಧ್ಯಕ್ಷ ನಿತೇಶ್ ಜೆ ಕರ್ಕೇರ ಪ್ರಸ್ತಾವನೆ ಮಾಡಿದರು . ಕಾರ್ಯದರ್ಶಿ ಶ್ರೀ ಶ್ರೀಧರ್ ಟಿ. ಪೂಜಾರಿ 2017-18 ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಭಾಸ್ಕರ ಸಾಲ್ಯಾನ್ ಸ್ವಾಗತಿಸಿ ಶ್ರೀಧರ್ ಟಿ. ಪೂಜಾರಿ ವಂದಿಸಿದರು. ಶ್ರೀಮತಿ ಸೌಮ್ಯ ನಿತೇಶ್ ಕಾರ್ಯಕ್ರಮ