ಯುವವಾಹಿನಿ(ರಿ) ಹಳೆಯಂಗಡಿ ವತಿಯಿಂದ ದಿನಾಂಕ 24-7-2016 ರಂದು ಆಟಿದ ಆಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕೋಟಿ ಚೆನ್ನಯರು ಆರಾಧಿಸಿದ ಕೆಮ್ಮಲೆಜೆಯ ನಾಗಬ್ರಹ್ಮ ಗುಡಿಯ ಆಕರ್ಷಕ ರಂಗ ವಿನ್ಯಾಸದ ವೇದಿಯಲ್ಲಿ ಹಳೆಯಂಗಡಿ ಯುವವಾಹಿನಿಯ ಅವಳಿ ಸದಸ್ಯರ ಕೋಟಿ-ಚೆನ್ನಯ ಕಿರು ರೂಪಕದೊಂದಿಗೆ ಕಾರ್ಯಕ್ರಮ ಆರಂಭ. ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ ಹಾಗೂ ತುಳು ಚಿತ್ರನಟ, ರಂಗಭೂಮಿ ಕಲಾವಿದ ಶ್ರೀ ಅರವಿಂದ ಬೋಳಾರ್ ಇವರು ನಾಗಬ್ರಹ್ಮ ಗುಡಿಯ ಜೋಡು ನಂದಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಠವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಜಿ. ಬಂಗೇರ ವಹಿಸಿದರು. ಮುಖ್ಯ ಅತಿಧಿಗಳಾಗಿ ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ ತುಳು ಚಿತ್ರನಟ, ರಂಗಭೂಮಿ ಕಲಾವಿದ ಶ್ರೀ ಅರವಿಂದ ಬೋಳಾರ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಭಾಗವಹಿಸಿದರು. ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷರಾದ ಶ್ರೀ ದೀಪಕ್ ನಾನಿಲ್, ಕಟ್ಟಡ ಸಮಿತಿಯ ಅಧ್ಯಕ್ಷರಾದ ಶ್ರೀ ಮೋಹನ್ ಎಸ್. ಸುವರ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಳೆಯಂಗಡಿಯ ಪ್ರಗತಿಪರ ಕೃಷಿಕ ಶ್ರೀ ತಿಮ್ಮಪ್ಪ ಅಮೀನ್ ನಾನಿಲ್, ಕಲಾ ಸೇವೆಗಾಗಿ ತುಳು ಚಿತ್ರನಟ, ರಂಗಭೂಮಿ ಕಲಾವಿದ ಶ್ರೀ ಅರವಿಂದ ಬೋಳಾರ್ ಹಾಗೂ ದ.ಕ. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ. ವಿನೋದ್ ಕುಮಾರ್ ಬೊಳ್ಳೂರು ಇವರನ್ನು ಸನ್ಮಾನಿಸಲಾಯಿತು.
ಮನೋರಂಜನೆಗಾಗಿ ಎಂ.ಆರ್.ಪಿ.ಎಲ್ ಯಕ್ಷಕಲಾ ತಂಡ ಇವರಿಂದ ಮಹಿಷಮರ್ಧಿನಿ ಯಕ್ಷಗಾನ ಪ್ರದರ್ಶನ ನಡೆಯಿತು. ನಂತರ ಆಟಿ ತಿಂಗಳ ವಿವಿಧ ಬಗ್ಗೆಯ ಖಾದ್ಯಗಳನ್ನು ಕಾರ್ಯಕ್ರಮಕ್ಕೆ ಬಂದ ಸುಮಾರು 500 ಕ್ಕೂ ಹೆಚ್ಚಿನ ಜನರು ಸ್ವಾದಿಸಿದರು.