ದಿನಾಂಕ 23-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಘಟಕದ ಸದಸ್ಯರಿಗಾಗಿ ಒಂದು ದಿನದ ಸಾರ್ವಜನಿಕ ಸಂವಹನ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ 2.30 ರ ತನಕ ಜರಗಿದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೇಸೀ ಅಂತಾರಾಷ್ಟ್ರೀಯ ತರಬೇತುದಾರ ರಾಮಚಂದ್ರ ರಾವ್‌ರವರು ಸದಸ್ಯರು ಸಭೆಯಲ್ಲಿ ಮಾತನಾಡುವಾಗ ಯಾವ ರೀತಿ ಪೂರ್ವ ತಯಾರಿ ಮಾಡಬೇಕು, ಯಾವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬ ವಿಷಯವನ್ನು ತಿಳಿಸಿದರು. ನಂತರ ೨೫ ಮಂದಿಯ ಗುಂಪನ್ನು ಎರಡು ತಂಡಗಳಾಗಿ ವಿಂಗಡಿಸಿ ಎಲ್ಲಾ ಪಾತ್ರಗಳ ಅಭಿನಯವನ್ನು ಮಾಡಿಸಿದರು. ಅಭಿನಯದ ನಂತರ ಸದಸ್ಯರಲ್ಲಾದ ಲೋಪದೋಷಗಳನ್ನು ಯಾವ ರೀತಿ ತಿದ್ದಬಹುದೆಂಬುದರ ಬಗ್ಗೆ ತರಬೇತಿ ನೀಡಿದರು.
ಅಪರಾಹ್ನ 3 ರಿಂದ 4 ಗಂಟೆಯ ತನಕ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ. ರಾಜೀವ ಪೂಜಾರಿಯವರು ಯುವವಾಹಿನಿಯ ಬೈಲಾದ ಬಗ್ಗೆ, ಯುವವಾಹಿನಿ ಮುಖ್ಯ ಉದ್ದೇಶ ಹಾಗೂ ಯುವವಾಹಿನಿಯು ಯಾವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ ಹಾಗೂ ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿಗಳನ್ನು ಸದಸ್ಯರಿಗೆ ತಿಳಿಹೇಳಿದರು. ಘಟಕದ ಸಲಹೆಗಾರರಾದ ಪರಮೇಶ್ವರ ಪೂಜಾರಿ ಹಾಗೂ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿ ಯವರು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕತ್ವವನ್ನು ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀಮತಿ ರೇಣುಕಾ ತಾರನಾಥ್ ಇವರು ವಹಿಸಿದ್ದರು. ಶ್ರೀ ಲೋಕೇಶ್ ಕೋಟ್ಯಾನ್ ವಂದಿಸಿದರು. ಘಟಕದ ಸರ್ವ ಸದಸ್ಯರು ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು.