ಯುವವಾಹಿನಿ(ರಿ) ಕೂಳೂರು ಘಟಕ

ಆರೋಗ್ಯ ಮಾಹಿತಿ ಶಿಬಿರ

ದಿನಾಂಕ 5-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಶಿಬಿರ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞರಾದ ಡಾ. ಸದಾನಂದ ಪೂಜಾರಿಯವರು ಭಾಗವಹಿಸಿ ಮೂತ್ರರೋಗಗಳ ಬಗ್ಗೆ, ಕಿಡ್ನಿ ವಿಫಲತೆಯ ಕಾರಣಗಳು ಹಾಗೂ ಮೂತ್ರರೋಗವನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು ಎಂಬ ಸಂಪೂರ್ಣ ಅರಿವನ್ನು ಸಭೆಗೆ ನೀಡಿದರು. ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿಯವರನ್ನು ಸಭೆಯಲ್ಲಿ ವಂದಿಸಲಾಯಿತು.

ಆರೋಗ್ಯ ಮತ್ತು ಕ್ರೀಡೆ ಇದರ ನಿರ್ದೇಶಕರಾದ ಶ್ರೀಮತಿ ರೋಹಿಣಿ ಇವರು ಕಾರ್ಯಕ್ರಮದ ಸಂಚಾಲಕತ್ವವನ್ನು ವಹಿಸಿದ್ದರು. ಶ್ರೀಮತಿ ಪವಿತ್ರ ಯು. ಅಮೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪುಷ್ಪರಾಜ್ ಇವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!