ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಕೂಳೂರು ಇದರ ಸಹಯೋಗದಲ್ಲಿ ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಜರ್ ಲಿಮಿಟೆಡ್ ಮಂಗಳೂರು ಇದರ ಸಹಕಾರದೊಂದಿಗೆ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇಲ್ಲಿಯ ತಜ್ಞ ವೈದ್ಯರ ತಂಡದೊಂದಿಗೆ ದಿನಾಂಕ 11-03-2018 ರಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ದಿ! ಶ್ರೀಮತಿ ಜಾನಮ್ಮ ಸೂಡಪ್ಪ ಪೂಜಾರಿ ಸಭಾಭವನದಲ್ಲಿ “ಉಚಿತ ನೇತ್ರ ತಪಾಸಣಾ ಶಿಬಿರ” ಏರ್ಪಡಿಸಲಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ದಯಾನಂದ ಶೆಟ್ಟಿ ಯವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಅಧ್ಯಕ್ಷರಾದ ಜಯಾನಂದ್ ಅಮೀನ್ ಪುನ್ಕೆಮಾರ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಗೌರವ ಅಧ್ಯಕ್ಷರು ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಉಪಾಧ್ಯಕ್ಷರಾದ ಶ್ರೀಯುತ ರಾಘವೇಂದ್ರ ಕೂಳೂರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಪ್ರದಾನ ಕಾರ್ಯದರ್ಶಿ ಸದಾಶಿವ ಸುವರ್ಣ, ಎಮ್ ಸಿಎಫ್ ಸಂಸ್ಥೆಯ ಡೈರೆಕ್ಟರ್ (ವರ್ಕ್ಸ್) ಕೆ. ಪ್ರಭಾಕರ್ ರಾವ್ ಯುವವಾಹಿನಿ ಕೂಳೂರು ಘಟಕದ ಗೌರವ ಸಲಹೆಗಾರರಾದ ನೇಮಿರಾಜ್. ಪಿ
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಕೂಳೂರು ರವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ ಯವರು ಮಾತನಾಡಿ, ಇವತ್ತು ನಡೆಯಲಿರುವ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಯುವವಾಹಿನಿ ಕೂಳೂರು ಘಟಕದವರು ಹಮ್ಮಿಕೊಂಡಿದ್ದು, ಇದು ಒಂದು ಒಳ್ಳೆಯ ಕಾರ್ಯಕ್ರಮ. ಕೂಳೂರಿನ ಪರಿಸರದವರು ಹೆಚ್ಚಾಗಿ ಕಣ್ಣಿನ ತೊಂದರೆ ಉಳ್ಳವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಹಾಗೆಯೇ ಇತ್ತೀಚೆಗೆ ಸ್ಥಾಪಿಸಲ್ಪಟ್ಟ ಯುವವಾಹಿನಿ (ರಿ) ಕೂಳೂರು ಘಟಕವು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜೊತೆಗೆ ಇವತ್ತಿನ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನಡೆಯಲೆಂದು ಶುಭ ಹಾರೈಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಮಾತನಾಡಿ ಮನುಷ್ಯನಿಗೆ ಬಹಳ ಮುಖ್ಯವಾದ ಅಂಗ ಕಣ್ಣು, ಆದುದರಿಂದ ಕಣ್ಣಿನ ಕಾಳಜಿಯನ್ನು ಮುಖ್ಯವಾಗಿ ವಹಿಸಬೇಕು. ಯುವವಾಹಿನಿ ಕೂಳೂರು ಘಟಕವು, ಕೂಳೂರು ಪರಿಸರದವರಿಗೆ ಹಮ್ಮಿಕೊಂಡಂತಹ ಈ ಕಾರ್ಯಕ್ರಮ ಎಲ್ಲರಿಗೂ ಪೂರಕವಾಗಿರಬೇಕು, ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಂಡರೆ ಉತ್ತಮ ಎಂದರು.
ನಂತರ ಎಮ್ ಸಿಎಫ್ ಸಂಸ್ಥೆಯ ಅಧಿಕಾರಿಯಾದ ಶ್ರೀಯುತ ಪ್ರಭಾಕರ್ ರಾವ್ ಅವರು ಮಾತನಾಡಿ ಎಮ್ ಸಿಎಫ್ ಸಂಸ್ಥೆಯು ತನ್ನ ಪರಿಸರದ ಜನರಿಗೆ ಅನೇಕ ರೀತಿಯಲ್ಲಿ ಉಚಿತವಾಗಿ ಸೌಲಭ್ಯಗಳನ್ನು ಒದಗಿಸುತ್ತಿದ್ದು ಇಂತಹ ಶಿಬಿರವನ್ನು ಆಚರಿಸುವಲ್ಲಿ ಒಪ್ಪಿಕೊಂಡಂತಹ ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಎಮ್ ಸಿಎಫ್ ಸಂಸ್ಥೆಯ ಅಧಿಕಾರಿಯಾದ ಡಾ! ಯೋಗೀಶ್ ಭಟ್ ನಿರೂಪಿಸಿದರು. ಈ ಕಾರ್ಯಕ್ರಮವನ್ನು ನಡೆಸಲು ಮುಖ್ಯ ರೂವಾರಿಯಾದ ಎಮ್ ಸಿಎಫ್ ಸಂಸ್ಥೆಯ ಮತ್ತೋರ್ವ ಅಧಿಕಾರಿಯವರಾದ ಶ್ರೀಯುತ ಜಯರಾಮ್ ಕಾ ರಂದೂರು ರವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಂತರ ಕೆಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ತಂಡದಿಂದ ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಿತು. ಇದರ ಪ್ರಯೋಜನವನ್ನು ಸುಮಾರು 280 ಸಾರ್ವಜನಿಕರು ಪಡೆದುಕೊಂಡರು ಹಾಗೂ ದಿನಾಂಕ 14-3-2018 ರಂದು ಉಚಿತ ನೇತ್ರ ಚಿಕಿತ್ಸೆಗಾಗಿ 33 ಮಂದಿಯ ತಂಡವನ್ನು ಯುವವಾಹಿನಿ ಕೂಳೂರು ಘಟಕದ ಸದಸ್ಯೆಯಾದ ಜಯಶ್ರೀ ಅವರ ನೇತೃತ್ವದಲ್ಲಿ ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯಲ್ಲಿ ನೀಡಲಾಯಿತು.
ಕೊನೆಯದಾಗಿ ದಿನಾಂಕ 25-3-18 ರಂದು ಸುಮಾರು 150 ಮಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.