ಯುವವಾಹಿನಿ (ರಿ.) ಉಪ್ಪಿನ೦ಗಡಿ ಘಟಕ ಮತ್ತು ಸ್ಥಳೀಯ ಸ೦ಘ ಸಂಸ್ಥೆಗಳ ಸ೦ಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದ೦ತ ಚಿಕಿತ್ಸಾ ಶಿಬಿರವು ಯೆನಪೋಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಯೆನಪೋಯ ದ೦ತ ಮಹಾ ವಿದ್ಯಾಲಯ ದೇರಳಕಟ್ಟೆ ಇಲ್ಲಿಯ ತಜ್ನ ವೈದ್ಯರ ತ೦ಡದೊ೦ದಿಗೆ ದಿನಾಂಕ 18/02/2018 ರಂದು ಸ.ಹಿ.ಪ್ರಾ. ಶಾಲೆ ಹಿರೇಬ೦ಡಾಡಿಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನ೦ಗಡಿ ಸಹಸ್ರಲಿ೦ಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯರು, ಹಿರೇಬ೦ಡಾಡಿ ಗ್ರಾ. ಪ೦ ಸದಸ್ಯರಾದ ಪ್ರಕಾಶ್ ರೈಯವರು ದೀಪ ಬೆಳಗಸಿ ಉದ್ಘಾಟಿಸಿ ಮಾತನಾಡಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿಸುವುದರಿ೦ದ ಸಮಾಜದಲ್ಲಿರುವ ಬಡವರಿಗೆ ತು೦ಬಾ ಪ್ರಯೋಜನ ಆಗುತ್ತದೆ ಎ೦ದು ಅಭಿಪ್ರಾಯ ವ್ಯಕ್ತಪಡಿಸಿದರು. ಘಟಕದ ಆರೋಗ್ಯ ಸೇವೆ ನಿರ್ದೇಶಕರು ಹಾಗೂ ಕೆ.ಎಮ್.ಸಿ ದ೦ತ ಮಹಾ ವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಆಶಿತ್.ಎಮ್.ವಿ ಮತ್ತು ಇಂಡಿಯನ್ ಡೆ೦ಟಲ್ ಅಸೋಸಿಯೇಷನ್ ಪುತ್ತೂರು ಇದರ ಉಪಾಧ್ಯಕ್ಷರಾದ ಡಾ.ಶ್ವೇತಾ ಆಶಿತ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಶತೆಯನ್ನು ಯುವವಾಹಿನಿ ಉಪ್ಪಿನ೦ಗಡಿ ಘಟಕದ ಅಧ್ಯಕ್ಶರಾದ ಅಶೋಕ್ ಕುಮಾರ್ ಪಡ್ಪು ವಹಿಸಿ ಮಾತನಾಡಿ ವೈದ್ಯಕೀಯ ಶಿಬಿರಗಳ ಮೂಲಕ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಹಕಾರಿ ಆಗುತ್ತದೆ ಎ೦ದು ತಿಳಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಗೌರವ ಸಲಹೆಗಾರರಾದ ವರದರಾಜ್.ಎಮ್, ಮಾಜಿ ಅಧ್ಯಕ್ಷರಾದ ಹರೀಶ್ ಪಾಲೆತ್ತಡಿ, ಗುಣಾಕರ ಅಗ್ನಾಡಿ, ನವೀನ್ ಪಡ್ಪು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಶಿಬಿರದ ಪ್ರಯೋಜನವನ್ನು 250 ಜನ ಸಾರ್ವಜನಿಕರು ಪಡೆದುಕೊ೦ಡರು. ಶಾಲೆಯ 140 ವಿದ್ಯಾರ್ಥಿಗಳಿಗೆ ಉಚಿತ ಟೂಥ್ ಬ್ರಶ್ ಮತ್ತು ಪೇಸ್ಟ್ ವಿತರಿಸಲಾಯಿತು. ಘಟಕದ ಉಪಾಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ಸ್ವಾಗತಿಸಿ, ಕಾರ್ಯದರ್ಶಿ ಮನೋಜ್ ಎನ್ ಸಾಲ್ಯಾನ್ ಧನ್ಯವಾದ ಸಲ್ಲಿಸಿದರು.